Ration Card: ರಾಜ್ಯದಲ್ಲಿ ಪಡಿತರ ಚೀಟಿ ಇ-ಕೆವೈಸಿ ಪ್ರಕ್ರಿಯೆ ಕುರಿತು ಆಹಾರ ಇಲಾಖೆಯಿಂದ ಗುಡ್‌ ನ್ಯೂಸ್‌

Ration Card: ರಾಜ್ಯದಲ್ಲಿ ಸದ್ಯ ಪಡಿತರ ಚೀಟಿಗೆ ಇ-ಕೆವೈಸಿ ಮಾಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕಿರುವ ಹಿನ್ನೆಲೆ ನ್ಯಾಯಬೆಲೆ ಅಂಗಡಿಯತ್ತ ಫಲಾನುಭವಿಗಳ ದಂಡೇ ಹರಿದುಬರುತ್ತಿದೆ. ಇದರಿಂದ ಸರ್ವರ್ ಸಮಸ್ಯೆ ಎದುರಾಗುತ್ತಿದ್ದು, ಈ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ಆಹಾರ ಇಲಾಖೆ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ರಾಜ್ಯದ ಸರ್ಕಾರವು ಪಡಿತರ ಚೀಟಿದಾರರ ಇ-ಕೆವೈಸಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ನ್ಯಾಯಬೆಲೆ ಅಂಗಡಿಗಳ ಮುಂದೆ ಉಂಟಾಗುತ್ತಿರುವ ಉದ್ದನೆಯ ಸರದಿ ಸಾಲು ಹಾಗೂ ಸರ್ವರ್ ಡೌನ್ ಸಮಸ್ಯೆಗೆ ಪರಿಹಾರವಾಗಿ, ಇನ್ಮುಂದೆ ಮೊಬೈಲ್ ಅಪ್ಲಿಕೇಶನ್ ಮೂಲಕವೇ ಮನೆಯಲ್ಲೇ ಕುಳಿತು ಇ-ಕೆವೈಸಿ ಪೂರ್ಣಗೊಳಿಸುವ ವ್ಯವಸ್ಥೆಯನ್ನು ಜಾರಲು ಮುಂದಾಗಿದೆ.

Ration Card e-KYC Karnataka Food department to Launch Mobile App for Home Verification Know detail

ಪಡಿತರ ಚೀಟಿ ರದ್ದಾಗುವ ಸಾಧ್ಯತೆ

ಕೇಂದ್ರ ಸರ್ಕಾರದ ನಿಯಮದ ಪ್ರಕಾರ, ಪ್ರತಿಯೊಬ್ಬ ಪಡಿತರ ಫಲಾನುಭವಿಯು ಪ್ರತಿ 5 ವರ್ಷಕ್ಕೊಮ್ಮೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕಾಗಿದೆ. ಸಮಯಕ್ಕೆ ಸರಿಯಾಗಿ ಪ್ರಕ್ರಿಯೆ ಮುಗಿಸದಿದ್ದರೆ ಪಡಿತರ ಚೀಟಿ ರದ್ದಾಗುವ ಸಾಧ್ಯತೆಯಿದೆ.

ಆಹಾರ ಇಲಾಖೆಯಿಂದ ಮಹತ್ವದ ಕ್ರಮ

ರಾಜ್ಯದಲ್ಲಿ ಸುಮಾರು 2.67 ಕೋಟಿಗೂ ಅಧಿಕ ಫಲಾನುಭವಿಗಳ ಪುನರ್ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಎಲ್ಲಾ ಜಿಲ್ಲೆಗಳ ಜಂಟಿ ಮತ್ತು ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಒಮ್ಮೆಗೆ ಸಾವಿರಾರು ಜನರು ನ್ಯಾಯಬೆಲೆ ಅಂಗಡಿಗಳತ್ತೆ ಆಗಮಿಸುತ್ತಿದ್ದಾರೆ. ಆದ್ದರಿಂದ ಸರ್ವರ್ ಸಮಸ್ಯೆ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ಉದ್ದೇಶದಿಂದ Directorate of Electronic Delivery of Citizen Services ಸಹಯೋಗದೊಂದಿಗೆ ಆಹಾರ ಇಲಾಖೆಯು ವಿಶೇಷ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸುತ್ತಿದೆ.

ಇದರಿಂದ ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ಮುಖ ಗುರುತಿಸುವಿಕೆ (Face Authentication) ಅಥವಾ ಆಧಾರ್ ಒಟಿಪಿ ಬಳಸಿ ಸ್ವತಃ ಇ-ಕೆವೈಸಿ ಪೂರ್ಣಗೊಳಿಸಬಹುದು. ಈ ಹೊಸ ಆ್ಯಪ್ ಮುಂದಿನ ಒಂದು ವಾರದೊಳಗೆ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದು ಆಹಾರ ಇಲಾಖೆಯ ಉನ್ನತ ಮೂಲಗಳಿಂದ ತಿಳಿದುಬಂದಿದೆ. ಎಪಿಎಲ್‌ ಮತ್ತು ಬಿಪಿಎಲ್‌ ಕಾರ್ಡ್‌ಗಳಲ್ಲಿ ಹೆಸರಿರುವ ಎಲ್ಲಾ ಸದಸ್ಯರು ನಿಗದಿತ ಗಡುವಿನ ಒಳಗಾಗಿ ಈ ಡಿಜಿಟಲ್ ಸೌಲಭ್ಯವನ್ನು ಬಳಸಿಕೊಂಡು ತಮ್ಮ ಪಡಿತರ ಚೀಟಿಯ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬಹುದು.

ಇ-ಕೆವೈಸಿಗೆ ಅಗತ್ಯವಿರುವ ದಾಖಲೆಗಳು

* ರೇಷನ್ ಕಾರ್ಡ್ ಸಂಖ್ಯೆ
* ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
* ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
* ಗ್ಯಾಸ್‌ ಸಂಪರ್ಕದ ಪುಸ್ತಕ
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (SC/ST) ಸಮುದಾಯಕ್ಕೆ ಸೇರಿದ ಫಲಾನುಭವಿಗಳು ಮಾತ್ರ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸುವುದು ಅಗತ್ಯವಾಗಿದೆ.

ಇ-ಕೆವೈಸಿ ಮಾಡಿಸದಿದ್ದರೆ ಆಗುವ ಸಮಸ್ಯೆಗಳು

* ನಿಗದಿತ ಸಮಯ ಅಂದರೆ ಸೆಪ್ಟೆಂಬರ್ 30ರೊಳಗೆ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ, ಅಂತಹ ಸದಸ್ಯರ ಹೆಸರುಗಳನ್ನು ಪಡಿತರ ಚೀಟಿಯಿಂದ ತಾತ್ಕಾಲಿಕವಾಗಿ ತಡೆಹಿಡಿಯುವ ಸಾಧ್ಯತೆಯಿದೆ.
* ಮುಂದಿನ ತಿಂಗಳಿಂದ ಸಿಗುವ ಉಚಿತ ಅಕ್ಕಿ ಸ್ಥಗಿತಗೊಳ್ಳಬಹುದು.
* ಪಡಿತರ ಚೀಟಿಯ ಆಧಾರದ ಮೇಲೆ ದೊರೆಯುವ 'ಗೃಹಲಕ್ಷ್ಮಿ' ಯೋಜನೆಯ ಮಾಸಿಕ ಧನಸಹಾಯ ಸೇರಿದಂತೆ ಇತರ ಸರ್ಕಾರಿ ಸೌಲಭ್ಯಗಳಿಗೆ ತೊಂದರೆ ಆಗಬಹುದು.

ಇ-ಕೆವೈಸಿ ಮಾಡಿಸುವುದು ಹೇಗೆ?

* ನಿಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಇ-ಕೆವೈಸಿ ಮಾಡಿಸಬಹುದು.

* ನೀವು ಸ್ವಗ್ರಾಮದಲ್ಲಿ ಇಲ್ಲದೆ ಬೆಂಗಳೂರಿನಲ್ಲಿದ್ದರೆ, ಹತ್ತಿರದ ಜಿಬಿಎ ಕೇಂದ್ರ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು.

* ಇ-ಕೆವೈಸಿ ಮಾಡಲು ಯಾವುದೇ ರೀತಿಯ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಇದು ಸಂಪೂರ್ಣ ಉಚಿತ ಸೇವೆಯಾಗಿದೆ.
* ಫಿಂಗರ್‌ಪ್ರಿಂಟ್ ಹೊಂದಾಣಿಕೆಯಾಗದಿದ್ದಲ್ಲಿ, ಆಧಾರ್ ಕೇಂದ್ರಕ್ಕೆ ತೆರಳಿ ಆಧಾರ್ ಅಪ್‌ಡೇಟ್ ಮಾಡಿದ 15 ದಿನಗಳ ನಂತರ ಮತ್ತೆ ಇ-ಕೆವೈಸಿ ಮಾಡಲು ಅವಕಾಶವಿದೆ. ಇ-ಕೆವೈಸಿ ಪೂರ್ಣಗೊಳಿಸುವ ವಿಧಾನಗಳು
* ಆನ್‌ಲೈನ್ (ಮೊಬೈಲ್ ಆ್ಯಪ್ ಮೂಲಕ) ಆಧಾರ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಸಾರ್ವಜನಿಕರು ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡಬಹುದು
* ಗೂಗಲ್ ಪ್ಲೇ ಸ್ಟೋರ್‌ನಿಂದ 'Mera Ration' ಹಾಗೂ 'Aadhaar FaceRD' ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
* ಆ್ಯಪ್‌ನಲ್ಲಿ 'Aadhaar Seeding' ಅಥವಾ ಇ-ಕೆವೈಸಿ ಆಯ್ಕೆ ಮಾಡಿಕೊಂಡು ರೇಷನ್ ಕಾರ್ಡ್ ಹಾಗೂ ಆಧಾರ್ ಸಂಖ್ಯೆ ನಮೂದಿಸಬೇಕು.
* OTP ಅಥವಾ ಮುಖದ ಗುರುತು (Face Authentication) ಮೂಲಕ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+