Ration Card: ಕರ್ನಾಟಕದ ಪಡಿತರ ಚೀಟಿದಾರರು ಗಮನಿಸಲೇಬೇಕಾದ ಮಹತ್ವದ ಮಾಹಿತಿ
Ration Card: ರಾಜ್ಯದಲ್ಲಿ ಪಡಿತರ ಚೀಟಿಯ ಇ-ಕೆವೈಸಿ ಪ್ರಕ್ರಿಯೆ ನಡೆಯುತ್ತಿದೆ. ಒಂದು ವೇಳೆ ಇದನ್ನು ಪೂರ್ಣಗೊಳಿಸದಿದ್ದರೆ ರೇಷನ್ ಕಾರ್ಡುದಾರರು ಯಾವೆಲ್ಲಾ ಸೌಲಭ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯದಲ್ಲಿ ಈಗಾಗಲೇ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಅರ್ಹತೆಯ ಪರಿಷ್ಕರಣೆ ನಡೆಸಿದ್ದ ಕರ್ನಾಟಕ ಸರ್ಕಾರ, ಇದೀಗ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಇದರ ಭಾಗವಾಗಿ ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬ ಫಲಾನುಭವಿಯೂ ಸೆಪ್ಟೆಂಬರ್ 30ರೊಳಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಆಹಾರ ಇಲಾಖೆ ಸೂಚನೆ ನೀಡಿದೆ.

ಪಡಿತರ ಚೀಟಿ ಇ-ಕೆವೈಸಿ ಕಡ್ಡಾಯ ಏಕೆ?
ಅನರ್ಹ ಕಾರ್ಡ್‌ಗಳನ್ನು ರದ್ದುಗೊಳಿಸುವ ಕುರಿತು ಸಾರ್ವಜನಿಕರಲ್ಲಿ ಆತಂಕ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ, ಸದ್ಯಕ್ಕೆ ರೇಷನ್ ಕಾರ್ಡ್‌ಗಳ ರದ್ದತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ಸ್ಪಷ್ಟಪಡಿಸಿದ್ದಾರೆ. ಆದರೂ ಪಡಿತರ ಚೀಟಿ ಸಕ್ರಿಯವಾಗಿರಲು ಹಾಗೂ ಸರ್ಕಾರದ ಉಚಿತ ಅಕ್ಕಿ ಯೋಜನೆಯ ಸೌಲಭ್ಯ ಮುಂದುವರಿಯಲು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.
ಇ-ಕೆವೈಸಿ ಮಾಡಿಸದಿದ್ದರೆ ಆಗುವ ಸಮಸ್ಯೆಗಳು
* ನಿಗದಿತ ಸಮಯ ಅಂದರೆ ಸೆಪ್ಟೆಂಬರ್ 30ರೊಳಗೆ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ, ಅಂತಹ ಸದಸ್ಯರ ಹೆಸರುಗಳನ್ನು ಪಡಿತರ ಚೀಟಿಯಿಂದ ತಾತ್ಕಾಲಿಕವಾಗಿ ತಡೆಹಿಡಿಯುವ ಸಾಧ್ಯತೆಯಿದೆ.
* ಮುಂದಿನ ತಿಂಗಳಿಂದ ಸಿಗುವ ಉಚಿತ ಅಕ್ಕಿ ಸ್ಥಗಿತಗೊಳ್ಳಬಹುದು.
* ಪಡಿತರ ಚೀಟಿಯ ಆಧಾರದ ಮೇಲೆ ದೊರೆಯುವ 'ಗೃಹಲಕ್ಷ್ಮಿ' ಯೋಜನೆಯ ಮಾಸಿಕ ಧನಸಹಾಯ ಸೇರಿದಂತೆ ಇತರ ಸರ್ಕಾರಿ ಸೌಲಭ್ಯಗಳಿಗೆ ತೊಂದರೆ ಆಗಬಹುದು.
ಇ-ಕೆವೈಸಿ ಮಾಡಿಸುವುದು ಹೇಗೆ?
* ನಿಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಇ-ಕೆವೈಸಿ ಮಾಡಿಸಬಹುದು.
* ನೀವು ಸ್ವಗ್ರಾಮದಲ್ಲಿ ಇಲ್ಲದೆ ಬೆಂಗಳೂರಿನಲ್ಲಿದ್ದರೆ, ಹತ್ತಿರದ ಜಿಬಿಎ ಕೇಂದ್ರ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು.
* ಇ-ಕೆವೈಸಿ ಮಾಡಲು ಯಾವುದೇ ರೀತಿಯ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಇದು ಸಂಪೂರ್ಣ ಉಚಿತ ಸೇವೆಯಾಗಿದೆ.
* ಫಿಂಗರ್‌ಪ್ರಿಂಟ್ ಹೊಂದಾಣಿಕೆಯಾಗದಿದ್ದಲ್ಲಿ, ಆಧಾರ್ ಕೇಂದ್ರಕ್ಕೆ ತೆರಳಿ ಆಧಾರ್ ಅಪ್‌ಡೇಟ್ ಮಾಡಿದ 15 ದಿನಗಳ ನಂತರ ಮತ್ತೆ ಇ-ಕೆವೈಸಿ ಮಾಡಲು ಅವಕಾಶವಿದೆ.
ಇ-ಕೆವೈಸಿಗೆ ಅಗತ್ಯವಿರುವ ದಾಖಲೆಗಳು
* ರೇಷನ್ ಕಾರ್ಡ್ ಸಂಖ್ಯೆ
* ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
* ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
* ಜಾತಿ ಪ್ರಮಾಣ ಪತ್ರ (ಅಗತ್ಯ ವಿದ್ದಲ್ಲಿ ಮಾತ್ರ)
* ಗ್ಯಾಸ್ ಸಂಪರ್ಕದ ಪುಸ್ತಕ
ನಕಲಿ ಹಾಗೂ ಸಂಶಯಾಸ್ಪದ ಫಲಾನುಭವಿಗಳನ್ನು ತಡೆದು, ಸರ್ಕಾರದ ಪಡಿತರ ಸೌಲಭ್ಯವು ಕೇವಲ ಅರ್ಹ ಕುಟುಂಬಗಳಿಗೆ ಮಾತ್ರ ತಲುಪುವಂತೆ ಮಾಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ತಮ್ಮ ಆಧಾರ್ ವಿವರಗಳನ್ನು ಅಪ್ಡೇಟ್ ಮಾಡಿಸುವುದು ಕಡ್ಡಾಯವಾಗಿದೆ.
ಇ-ಕೆವೈಸಿ ಪೂರ್ಣಗೊಳಿಸುವ ವಿಧಾನಗಳು
* ಆನ್‌ಲೈನ್ (ಮೊಬೈಲ್ ಆ್ಯಪ್ ಮೂಲಕ) ಆಧಾರ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಸಾರ್ವಜನಿಕರು ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡಬಹುದು
* ಗೂಗಲ್ ಪ್ಲೇ ಸ್ಟೋರ್‌ನಿಂದ 'Mera Ration' ಹಾಗೂ 'Aadhaar FaceRD' ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
* ಆ್ಯಪ್‌ನಲ್ಲಿ 'Aadhaar Seeding' ಅಥವಾ ಇ-ಕೆವೈಸಿ ಆಯ್ಕೆ ಮಾಡಿಕೊಂಡು ರೇಷನ್ ಕಾರ್ಡ್ ಹಾಗೂ ಆಧಾರ್ ಸಂಖ್ಯೆ ನಮೂದಿಸಬೇಕು.
* OTP ಅಥವಾ ಮುಖದ ಗುರುತು (Face Authentication) ಮೂಲಕ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಬಹುದು.
ಆಫ್‌ಲೈನ್‌ನಲ್ಲಿ ಇ-ಕೆವೈಸಿ ಪೂರ್ಣಗೊಳಿಸುವ ವಿಧಾನ
* ಫಲಾನುಭವಿಗಳು ತಮ್ಮ ವ್ಯಾಪ್ತಿಯ ಅಥವಾ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಬಯೋಮೆಟ್ರಿಕ್ (ಬೆರಳಚ್ಚು ಅಥವಾ ಕಣ್ಣಿನ ಸ್ಕ್ಯಾನ್) ನೀಡುವ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಈ ಸೇವೆ ನ್ಯಾಯಬೆಲೆ ಅಂಗಡಿಗಳಲ್ಲಿ ಸಂಪೂರ್ಣ ಉಚಿತವಾಗಿ ದೊರೆಯಲಿದೆ.
ಪಡಿತರ ಚೀಟಿದಾರರಿಗೆ ಮಹತ್ವದ ಸಂದೇಶ
ಇ-ಕೆವೈಸಿ ಮಾಡಿಕೊಡುವುದಾಗಿ ಯಾರಾದರೂ ಕರೆ ಮಾಡಿ OTP ಕೇಳಿದರೆ ನೀಡಬಾರದು. ಆಹಾರ ಇಲಾಖೆಯ ಅಧಿಕಾರಿಗಳು ಕರೆ ಮಾಡಿ OTP ಕೇಳುವುದಿಲ್ಲ ಎಂದು ಜಾಗೃತಿ ಮೂಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ahara.karnataka.gov.in ವೆಬ್‌ಸೈಟ್ ಅಥವಾ ಉಚಿತ ಸಹಾಯವಾಣಿ ಸಂಖ್ಯೆ 1967 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.


Click it and Unblock the Notifications
