Ration Card: ರಾಜ್ಯದ ಪಡಿತರ ಚೀಟಿದಾರರಿಗೆ ಬಿಗ್ ಶಾಕ್!
Ration Card: ಪ್ರಮುಖ ದಾಖಲೆಗಳಲ್ಲಿ ರೇಷನ್ ಕಾರ್ಡ್ ಕೂಡ ಒಂದಾಗಿದೆ. ಬರೀ ಪಡಿತರ ಪಡಿಯಲು ಅಷ್ಟೇ ಅಲ್ಲದೆ, ಹಲವು ಅರ್ಜಿ ಸಲ್ಲಿಕೆ ವೇಳೆ ಬೇಕೇ ಬೇಕಾಗುತ್ತದೆ. ಇನ್ನೂ ಇದೀಗ ರಾಜ್ಯದಲ್ಲಿ ಇಂತಹ ಪಡಿತರ ಚೀಟಿದಾರರಿಗೆ ಬಿಗ್ ಶಾಕ್‌ವೊಂದು ಎದುರಾಗಿದೆ. ಹಾಗಾದ್ರೆ, ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯದಲ್ಲಿ ಇದೀಗ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಮುಂದುವರೆಸಿದೆ. ಈ ನಡುವೆಯೇ ಇದೀಗ ಇಂತಹವರ ರೇಷನ್ ಕಾರ್ಡ್ ರದ್ದಾಗಲಿದೆ ಎನ್ನುವ ಶಾಕಿಂಗ್ ಸಂಗತಿಯೊಂದು ಎದುರಾಗಿದೆ. ಹಾಗಾದ್ರೆ ಕಾರಣ ಏನು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಸಾಮಾನ್ಯವಾಗಿ ಬಿಪಿಎಲ್ ಪಡಿತರ ಚೀಟಿಯನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡಲಾಗುತ್ತದೆ. ಆದರೆ, ಅನರ್ಹರು ಸಹ ಬಿಪಿಎಲ್ ಕಾರ್ಡ್ ಪಡೆದು ಬಡವರ ಅನ್ನ ಹಾಗೂ ಸೌಲಭ್ಯಗಳನ್ನು ಕಿತ್ತುಕೊಳ್ಳುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮುಂದುವರೆಸಿದೆ. ಅನರ್ಹರ ಬಳಿಯ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ ಎಪಿಎಲ್‌ಗೆ ವರ್ಗಾಹಿಸುತ್ತಿದೆ. ಈ ನಡುವೆಯೇ ಇದೀಗ ಪಡಿತರ ಚೀಟಿದಾರರಿಗೆ ಬಿಗ್ ಶಾಕ್‌ವೊಂದು ಎದುರಾಗಿದೆ.
ಭಾರತದಲ್ಲಿ ಪಡಿತರ ಚೀಟಿಯೂ ಕೂಡ ಪ್ರಮುಖ ದಾಖಲೆಯಾಗಿದೆ. ಇದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಗೋಧಿ ಮತ್ತು ಅಕ್ಕಿಯಂತಹ ಸಬ್ಸಿಡಿ ಧಾನ್ಯಗಳನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಅಲ್ಲದೆ, ಇದು ಹಲವು ಕಲ್ಯಾಣ ಯೋಜನೆಗಳನ್ನು ಪಡೆಯಲು ತುಂಬಾ ಸಹಾಯಕವಾಗುತ್ತಿದೆ. ಇನ್ನು ಇದೀಹ ಈ ಒಂದು ನಿರ್ಲಕ್ಷ್ಯವು ನಿಮ್ಮ ಪಡಿತರ ಚೀಟಿಯನ್ನು ರದ್ದುಗೊಳಿಸಲು ಕಾರಣವಾಗಬಹುದು. ಇದರ ಪರಿಣಾಮ ಅಗತ್ಯ ಸರ್ಕಾರಿ ಸೌಲಭ್ಯಗಳು ಸಹ ಬಂದ್ ಆಗುವ ಸಾಧ್ಯತೆಯಿದೆ.
ಪಡಿತರ ಚೀಟಿ ರದ್ದತಿಗೆ ಪ್ರಮುಖ ಕಾರಣಗಳೇನು?
* ಇ-ಕೆವೈಸಿ ಪೂರ್ಣ ಆಗಿಲ್ಲದಿದ್ದರೆ, ನಿಮ್ಮ ಪಡಿತರ ಚೀಟಿಯನ್ನು ನಿಷ್ಕ್ರಿಯಗೊಳಿಸಬಹುದು ಅಥವಾ ಶಾಶ್ವತವಾಗಿ ರದ್ದುಗೊಳಿಸುವ ಸಾಧ್ಯತೆಯಿದೆ. ಇದೀಹ ಅನರ್ಹ ಫಲಾನುಭವಿಗಳನ್ನು ಗುರುತಿಸಲು ಸರ್ಕಾರ ಡಿಜಿಟಲ್ ಪರಿಶೀಲನೆಯ ಮೊರೆ ಹೋಗಿದೆ.
* ಆಧಾರ್ ಲಿಂಕ್ ಕಡ್ಡಾಯವಾಗಿದೆ. ಒಂದು ವೇಳೆ ನಿಮ್ಮ ಪಡಿತರ ಕಾರ್ಡ್ ಅನ್ನು ಆಧಾರ್ ಲಿಂಕ್ ಮಾಡದಿದ್ದರೆ, ಅದನ್ನು ರದ್ದುಗೊಳಿಸುವ ಸಾಧ್ಯತೆಯಿದೆ.
* ನೀವು ಪಡಿತರ ಚೀಟಿ ಇದ್ದರೂ ಸಹ ಪಡಿತರವನ್ನು ಹಲವು ತಿಂಗಳವರೆಗೆ ಪಡೆಯದಿದ್ದರೆ, ಕಾರ್ಡ್ ಅನ್ನು ನಿಷ್ಕ್ರಿಯವೆಂದು ಪರಿಗಣಿಸಿ ರದ್ದುಗೊಳಿಸಬಹುದು.
* ಸರ್ಕಾರವು ಅನರ್ಹರಾಗಿದ್ದರೂ ಪಡಿತರ ಕಾರ್ಡ್‌ಗಳನ್ನು ಹೊಂದಿರುವವರನ್ನು ಪರಿಶೀಲನೆ ಮೂಲಕ ಗುರುತಿಸುವ ಕಾರ್ಯ ಮುಂದುವರೆಸಿದೆ. ಉದಾಹರಣೆಗೆ ಹೆಚ್ಚಿನ ಆದಾಯದ ಕುಟುಂಬಗಳು (ಸರ್ಕಾರಿ ನೌಕರರು, ತೆರಿಗೆದಾರರು ಇತ್ಯಾದಿ ಶ್ರೀಮಂತರು) ಪಡಿತರ ಚೀಟಿಗಳನ್ನು ಹೊಂದಿದ್ದರೆ, ಅವರನ್ನು ನಿಯತಕಾಲಿಕ ಲೆಕ್ಕಪರಿಶೋಧನೆಯ ಸಮಯದಲ್ಲಿ ಹೊರಗಿಡಲಾಗುತ್ತದೆ.
ಒಂದು ವೇಳೆ ನಿಮ್ಮ ಪಡಿತರ ಚೀಟಿ ರದ್ದಾದರೆ, ಸರ್ಕಾರದ ಯಾವ ಉಚಿತ ಯೋಜನೆಗಳು ಸಿಗುವುದಿಲ್ಲ. PMGKAY, ಆಯುಷ್ಮಾನ್ ಭಾರತ್, ವಸತಿ ಯೋಜನೆ, ಇತ್ಯಾದಿ ಯೋಜನೆಗಳಿಂದ ಅನರ್ಹವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಕೆಲವು ಸಾರ್ವಜನಿಕ ಸೇವೆಗಳಿಗೆ ಗುರುತನ್ನು ಸಾಬೀತುಪಡಿಸುವ ವೇಳೆ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗೆ ಇವುಗಳನ್ನು ಮಾಡಿಸದಿದ್ರೆ ನಿಮ್ಮ ಪಡಿತರ ಚೀಟಿ ರದ್ದಾಗೋದು ಗ್ಯಾರಂಟಿ ಎಂದು ಹೇಳಲಾಗುತ್ತದೆ. ಆದ್ದರಿಂದ, ಯಾರೆಲ್ಲಾ ಫಲಾನುಭವಿಗಳು ಇದ್ದಾರೆಯೋ ಅಂತಹವರು ಈ ಕೆಲಸಗಳನ್ನು ಬೇಗನೇ ಮಾಡಿಸುವುದು ಉತ್ತಮ.












Click it and Unblock the Notifications