ಸರ್ಕಾರಿ ಸೇವೆಗೆ ಮರಳಿದ ಐಎಎಸ್ ಅಧಿಕಾರಿ ವಿ.ರಶ್ಮಿ ಮಹೇಶ್

ಬೆಂಗಳೂರು, ಜೂನ್ 06 : ಐಎಎಸ್ ಅಧಿಕಾರಿ ವಿ.ರಶ್ಮಿ ಮಹೇಶ್ ಅವರು ಸರ್ಕಾರಿ ಸೇವೆಗೆ ಮರಳಿದ್ದಾರೆ. ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾಗಿ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಗುರುವಾರ ಕರ್ನಾಟಕ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಶಿವಯೋಗಿ ಸಿ.ಕಳಸದ್ ಅವರ ಸ್ಥಾನಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ವಿ.ರಶ್ಮಿ ಮಹೇಶ್ ಅವರನ್ನು ನೇಮಕ ಮಾಡಿ ಆದೇಶಿಸಿದೆ.

1996ನೇ ಬ್ಯಾಚ್ ಐಎಎಸ್ ಅಧಿಕಾರಿ ವಿ.ರಶ್ಮಿ ಮಹೇಶ್ ಅವರು 2016ರ ಸೆಪ್ಟೆಂಬರ್ ಬಳಿಕ ರಜೆ ಮೇಲೆ ತೆರಳಿದ್ದರು. ಧೀರ್ಘ ಕಾಲದ ರಜೆ ಬಳಿಕ ಅವರಿಗೆ ಸರ್ಕಾರ ಹುದ್ದೆಯನ್ನು ನೀಡಿದೆ.

Rashmi Mahesh appointed as Regional commissioner of Bengaluru division

ಧೀರ್ಘ ಕಾಲದ ರಜೆ ಮೇಲಿದ್ದ ರಶ್ಮಿ ಮಹೇಶ್ ಅವರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಮಾಧ್ಯಮಗಳು ಅವರನ್ನು ಸಂಪರ್ಕಿಸಲು ನಡೆದಿ ಪ್ರಯತ್ನಗಳು ವಿಫಲವಾಗಿತ್ತು. ಈಗ ಅವರು ಪುನಃ ಸರ್ಕಾರಿ ಸೇವೆಗೆ ಮರಳಿದ್ದಾರೆ.

ಕೆಲಸ ಮಾಡಿದ ಇಲಾಖೆಯಲ್ಲಿ ಅಕ್ರಮ ನಡೆದಿದ್ದರೆ ಅದನ್ನು ಬಯಲಿಗೆಳೆಯುವ ದಿಟ್ಟ ಅಧಿಕಾರಿಯಾದ ರಶ್ಮಿ ಮಹೇಶ್ ಅವರು ಪದೇ-ಪದೇ ಇದೇ ಕಾರಣಕ್ಕೆ ವರ್ಗಾವಣೆಗೊಳ್ಳುತ್ತಿದ್ದರು.

ಪಿಯು ಮಂಡಳಿ ನಿರ್ದೇಶಕರಾಗಿದ್ದಾಗ ಅಲ್ಲಿನ ಅಕ್ರಮಗಳನ್ನು ಬಯಲು ಮಾಡಿದ್ದರು. ನಂತರ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಬಳಿಕ ಅವರನ್ನು ಮೈಸೂರಿನ ಆಡಳಿತ ಮತ್ತು ತರಬೇತಿ ಕೇಂದ್ರದ ಆಯುಕ್ತರಾಗಿ ನೇಮಿಸಲಾಗಿತ್ತು.

2014ರ ಅಕ್ಟೋಬರ್ 15ರಂದು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಅವರ ಮೇಲೆ ಹಲ್ಲೆ ನಡೆದಿತ್ತು. ಸಂಸ್ಥೆಯ ಮೇಲ್ವಿಚಾರಕ ವೆಂಕಟೇಶ್ ಎಂಬುವವರ ಸಾವಿಗೆ ರಶ್ಮಿ ಮಹೇಶ್ ಅವರ ಕಿರುಕುಳವೇ ಕಾರಣ ಎಂದು ವೆಂಕಟೇಶ್ ಸಂಬಂಧಿಕರು ರಶ್ಮಿ ಮಹೇಶ್ ಮೇಲೆ ಹಲ್ಲೆ ಮಾಡಿದ್ದರು.

ಬಳಿಕ ಅವರನ್ನು ಆಹಾರ ಮತ್ತು ಕೊಯ್ಲೋತ್ತರ ತಂತ್ರಜ್ಞಾನ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಕೆಲವೇ ದಿನಗಳಲ್ಲಿ ಬಿಬಿಎಂಪಿ ಹಣಕಾಸು ಮತ್ತು ಜಾಹೀರಾತು ವಿಭಾಗಕ್ಕೆ ವರ್ಗಾಯಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+