Ranji trophy 2024: ತವರು ನೆಲದಲ್ಲಿ ಅಬ್ಬರಿಸಿದ 'ಕರ್ನಾಟಕ ಟೀಂ', ಪಂಬಾಬ್ ವಿರುದ್ಧ ಜಯ, ರನ್-ವಿಕೆಟ್ ವಿವರ

ಹುಬ್ಬಳ್ಳಿ, ಜನವರಿ 09: ಕೊನೆಯ ದಿನ ಪಂಜಾಬ್ ತಂಡಕ್ಕೆ ಇನಿಂಗ್ಸ್‌ ಸೋಲು ತಪ್ಪಿಸಿಕೊಂಡಿದ್ದೊಂದೇ ಸಮಾಧಾನವಾಯಿತು. ಕರ್ನಾಟಕ ತಂಡ ರಣಜಿ ಟ್ರೋಫಿ ಪ್ರಸಕ್ತ ಋತುವಿನ ಮೊದಲ ಪಂದ್ಯವನ್ನು ಪಂಜಾಬ್ ವಿರುದ್ಧ ಏಳು ವಿಕೆಟ್‌ಗಳಿಂದ ಗೆದ್ದುಕೊಂಡು ಶುಭಾರಂಭ ಮಾಡಿತು.

ಇಲ್ಲಿನ ರಾಜನಗರದ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (KSCA) ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ನಾಲ್ಕನೇ ದಿನವಾದ ಸೋಮವಾರ ಪಂಜಾಬ್ ತಂಡ ಮಧ್ಯಾಹ್ನದ ನಂತರ ಎರಡನೇ ಇನಿಂಗ್ಸ್‌ನಲ್ಲಿ 413 ರನ್‌ಗಳಿಗೆ ಆಲೌಟ್‌ ಆಯಿತು.

Ranji Cricket 2024: Karnataka team Victory in Home State With 7 Wickets Against Punjab, Check Runs

ಇನ್ನೂ ಮೊದಲ ಇನಿಂಗ್ಸ್‌ನಲ್ಲಿ 362 ರನ್‌ಗಳ ಭಾರಿ ಮುನ್ನಡೆ ಪಡೆದಿದ್ದ ಮಯಂಕ್ ಅಗರವಾಲ ಬಳಗ ಗೆಲುವಿಗೆ ಬೇಕಾಗಿದ್ದ 52 ರನ್‌ಗಳ ಅಲ್ಪ ಗುರಿಯನ್ನು 3 ವಿಕೆಟ್ ಕಳೆದುಕೊಂಡಿತು. ಕರ್ನಾಟಕ ಮುಂದಿನ ಪಂದ್ಯವನ್ನು ಗುಜರಾತ್‌ ವಿರುದ್ಧ ಅಹಮದಾಬಾದಿನಲ್ಲಿ ಜನವರಿ 12 ರಿಂದ ಜರುಗಲಿದೆ.

2ನೇ ಇನ್ನಿಂಗ್ಸ ನಲ್ಲಿ ಖಾತೆ ತೆರೆಯದ ಮಯಂಕ್

ನಾಯಕ ಮಯಂಕ್ ಅಗರ್‌ವಾಲ್ (0) ಎರಡನೇ ಇನಿಂಗ್ಸ್‌ನಲ್ಲಿಯೂ ರನ್‌ಗಳ ಖಾತೆ ತೆರೆಯಲಿಲ್ಲ. ಉಪನಾಯಕ ನಿಕಿನ್‌ ಜೋಸ್‌ ಕೂಡ ಮತ್ತೊಮ್ಮೆ ವಿಫಲರಾಗಿ ಎಡಗೈ ಸ್ಪಿನ್ನರ್ ಪ್ರೇರಿತ್‌ ದತ್ತಾ ಬೌಲಿಂಗ್‌ನಲ್ಲಿ ನಿರ್ಗಮಿಸಿದರು.

Ranji Cricket 2024: Karnataka team Victory in Home State With 7 Wickets Against Punjab, Check Runs

ಈ ಹಂತದಲ್ಲಿ ಆರ್‌.ಸಮರ್ಥ್ (21) ಮತ್ತು ಎಸ್.ಶರತ್‌ (ಔಟಾಗದೇ 21) ಕುಸಿತ ತಡೆದರು. ಶರತ್‌ ಶ್ರೀನಿವಾಸ್ ಜೊತೆಗೂಡಿ ಮನೀಷ್‌ ಪಾಂಡೆ 17ನೇ ಓವರ್‌ನಲ್ಲಿ ಗೆಲುವಿನ ವಿಧಿ ಪೂರೈಸಿದರು. ಮೊದಲ ಇನಿಂಗ್ಸ್‌ನಲ್ಲಿ 193 ರನ್‌ ಗಳಿಸಿದ್ದ ಬ್ಯಾಟರ್ ದೇವದತ್ತ ಪಡಿಕ್ಕಲ್‌ ಹೊಟ್ಟೆ ಕೆಟ್ಟಿದ್ದ ಕಾರಣ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಮಾಡಲಿಲ್ಲ. ಅವರು ಫೀಲ್ಡಿಂಗ್‌ಗೂ ಬಂದಿರಲಿಲ್ಲ.

ಸ್ಪಿನ್ನರ್‌ಗಳ ಕೌಶಲದಿಂದ ಪಂಜಾಬ್ ವಿಕೇಟ್ ನಷ್ಟ

ಇದಕ್ಕೂ ಮುನ್ನ 3 ವಿಕೆಟ್‌ಗೆ 238 ರನ್‌ಗಳಿಂದ ಬೆಳಗ್ಗೆ ಆಟ ಮುಂದುವರಿಸಿದ ಪಂಜಾಬ್ ತಂಡ ಕರ್ನಾಟಕ ಸ್ಪಿನ್ನರ್‌ಗಳ ಶಿಸ್ತಿನ ದಾಳಿಗೆ ನಿಯಮಿತವಾಗಿ ವಿಕೆಟ್‌ಗಳ ನಷ್ಟ ಅನುಭವಿಸಿತು. ಮನದೀಪ್ ಸಿಂಗ್ (27: 96ಎ, 4X2) ಅವರನ್ನು ಎಡಗೈ ಸ್ಪಿನ್ನರ್‌ ರೋಹಿತ್ ಕುಮಾರ್ ಬೌಲ್ಡ್ ಮಾಡಿದರು. ನಂತರ ಇನ್ನೊಬ್ಬ ಸ್ಪಿನ್ನರ್‌ ಶುಭಾಂಗ್‌ ಹೆಗ್ಡೆ ಪೆಟ್ಟು ನೀಡಿದರು.

ನೇಹಲ್‌ ವಧೇರಾ (26:79ಎ, 4X4) ಅವರನ್ನು ತಮ್ಮದೇ ಬೌಲಿಂಗ್‌ನಲ್ಲಿ ಕ್ಯಾಚ್‌ ಹಿಡಿದ ಶುಭಾಂಗ್, ನಂತರ ಪ್ರೇರಿತ್ ದತ್ತಾ ಅವರನ್ನು ಎಲ್‌ಬಿ ಬಲೆಗೆ ಕೆಡವಿದರು. ಅನುಭವಿ ಬ್ಯಾಟರ್ ಗೀತಾಂಶ್ ಖೇರಾ (43, 81 ಎಸೆತ) ಮತ್ತು ಮಯಂಕ್ ಮಾರ್ಕಂಡೆ (36) ಏಳನೇ ವಿಕೆಟ್‌ ಜತೆಯಾಟದಲ್ಲಿ 61 ರನ್‌ ಸೇರಿಸಿ ಆತಿಥೇಯ ತಂಡಕ್ಕೆ ಕೆಲಕಾಲ ಪ್ರತಿರೋಧ ಒಡ್ಡಿದರು. ರೋಹಿತ್‌ಕುಮಾರ್ ಸ್ವಲ್ಪ ಹೊತ್ತಿನ ನಂತರ ಈ ಜೋಡಿಯನ್ನು ಬೇರ್ಪಡಿಸಿದರು

ತವರು ನೆಲದಲ್ಲಿ ಕರ್ನಾಟಕ ತಂಡಕ್ಕೆ ವಿಜಯ

ಅರ್ಷದೀಪ್ ಸಿಂಗ್, ಎರಡು ಸಿಕ್ಸರ್ .ಸಹಿತ 14 ರನ್‌ ಗಳಿಸಿ ತಂಡವನ್ನು ಇನಿಂಗ್ಸ್‌ ಸೋಲಿನಿಂದ ಪಾರು ಮಾಡಿದರು. ಅವರು ವೇಗವಾಗಿ 36 (34ಎ, 4X3, 6X3) ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ರೋಹಿತ್ ಕುಮಾರ್ ಎಸೆತದಲ್ಲಿ ಮುನ್ನುಗ್ಗಿ ಹೊಡೆಯಲು ಯತ್ನಿಸಿದ ಮಯಂಕ್ ಮಾರ್ಕಂಡೆ (36: 67ಎ, 4x6) ಸ್ಟಂಪ್ಡ್ ಆಗಿ ಕೊನೆಯವರಾಗಿ ನಿರ್ಗಮಿಸಿದರು.

ತವರು ನೆಲದಲ್ಲಿ ತಂಡದ ಗೆಲುವಿಗೆ ಕಾಣಿಕೆ ನೀಡಿದ್ದು ಹೆಮ್ಮೆಯ ಕ್ಷಣ. ಹಿರಿಯ ಆಟಗಾರರ ಮಾರ್ಗದರ್ಶನಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. ಹುಬ್ಬಳ್ಳಿಯಲ್ಲಿ ನಡೆದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪ್ರಸಕ್ತ ವರ್ಷದ ಮೊದಲ ಪಂದ್ಯದಲ್ಲಿ 4 ವಿಕೆಟ್ ಅನ್ನು ಎಡಗೈ ಸ್ಪಿನ್ನರ್ ಎ.ಸಿ.ರೋಹಿತ್‌ಕುಮಾರ್‌ ಅವರು ಪಡೆದರು.

2023-24 ಜನವರಿ 5 ರಂದು ರಣಜಿ ಕ್ರಿಕೇಟ್ ಟ್ರೋಫಿ ಆರಂಭವಾಗಿದೆ.ಇದರಲ್ಲಿ ಒಟ್ಟು 38 ತಂಡಗಳು ಭಾಗವಹಿಸಲಿವೆ. ಎರಡು ಲೀಗ್‌ಗಳಲ್ಲಿ 40 ದಿನಗಳವರೆಗೆ ಮುಖಾ ಮುಖಿ ಸ್ಪರ್ಧೆ ಏರ್ಪಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+