ಹಾವೇರಿ: ಅಂಧನ ಕೈ ಹಿಡಿದು ಸಾರ್ಥಕತೆ ಮೆರೆದ ಯುವತಿ

ನವಲಗುಂದದ ಅಂಧ ಯುವಕ ಜಗದೀಶ್ ನನ್ನು ವರಿಸಿದ ರಾಣೆಬೆನ್ನೂರು ತಾಲೂಕಿನ ಯುವತಿ ನಂದಾ. ಅಂಧ ಯುವಕನಿಗೆ ಹೊಸ ಬಾಳು ಇತ್ತು ಮಾದರಿಯಾದ ಯುವತಿ. ಮದುವೆಗೆ ಎರಡೂ ಕುಟುಂಬಗಳ ಸಮ್ಮತಿ. ಹಾವೇರಿ ನಗರದ ಹರಸೂರು ಬಣ್ಣದ ಮಠದ ಆವರಣದಲ್ಲಿ ಮದುವೆ.

ಹಾವೇರಿ, ಜೂನ್ 19: ಆತ ಎರಡೂ ಕಣ್ಣುಗಳು ಕಾಣದಿರೋ ಅಂಧನಾಗಿದ್ದರೂ, ಆತನ ಬಾಳಿಗೆ ಬೆಳಕು ನೀಡುವ ನಿಟ್ಟಿನಲ್ಲಿ ಯುವತಿಯೊಬ್ಬಳು ಆತನ ಕೈ ಹಿಡಿಯುವ ಮೂಲಕ ಮಾದರಿಯಾಗಿದ್ದಾಳೆ.

ತಾನು ಎಸ್‌ಎಸ್‌ಎಲ್‌ಸಿ ವರೆಗೆ ಓದಿದ್ದರೂ ಅಂಧ ಯುವಕನನ್ನು ಮದುವೆಯಾಗಿರುವುದು ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಯುವತಿ ನಂದಾ. ಆ ಅದೃಷ್ಟವಂತ ಯುವಕ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಾಲಕುಸುಗಲ್ ಗ್ರಾಮದ ಜಗದೀಶ್.

Ranebennur Woman married to a blind man

ಪ್ರತಿಭಾವಂತನಾದ ಜಗದೀಶ್ ಸಮಾಜಶಾಸ್ತ್ರ ವಿಷಯದಲ್ಲಿ ಎಂಎ ಪದವೀಧರ. ದೃಷ್ಟಿ ವೈಕಲ್ಯ ಆತನ ಓದಿಗೆ ಎಂದೂ ಅಡ್ಡಿಯಾಗಲಿಲ್ಲ. ತರಗತಿಯಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದ ಜಗದೀಶನಿಗೆ ದೃಷ್ಟಿ ಇಲ್ಲದಿದ್ದರೂ ಮನಸ್ಸಿನ ದೃಷ್ಟಿಗೆ ಮಂಕು ಬಡಿದಿಲ್ಲ. ಇಂಥ ಜಗದೀಶನ ಕೈ ಹಿಡಿಯುವ ಮೂಲಕ ಮಾದರಿಯಾಗಿರುವ ನಂದಾಳ ನಿರ್ಧಾರ ಎಲ್ಲರ ಪ್ರಶೆಂಸೆಗೆ ಕಾರಣವಾಗಿದೆ.

ಇಂಥ ಅಪರೂಪದ ಜೋಡಿಗೆ ಗುರುವಾರ ವಿವಾಹ ಬಂಧನ ಏರ್ಪಟ್ಟಿದ್ದು, ಹಾವೇರಿ ನಗರದ ಹರಸೂರು ಬಣ್ಣದ ಮಠದ ಆವರಣದಲ್ಲಿ. ಹುಟ್ಟು ಕುರುಡನಾಗಿರುವ ಜಗದೀಶನ ಇಬ್ಬರು ಸಹೋದರಿಯರಿಗೆ ಆಗಲೇ ವಿವಾಹ ಆಗಿತ್ತು. ಆದರೆ, ದೃಷ್ಟಿ ಇಲ್ಲದ ಜಗದೀಶನಿಗೆ ಮದುವೆ ಕನಸಾಗಿಯೇ ಉಳಿದಿತ್ತು. ಆದರೆ, ನಂದಾ ಆತನ ಬಾಳಲ್ಲಿ ಬೆಳಕಾಗಿ ಬಂದಿದ್ದಾರೆ. ಪರಸ್ಪರ ಎರಡೂ ಕುಟುಂಬಗಳ ಒಪ್ಪಿಗೆ ಮೇರಗೆ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದಾರೆ.

Ranebennur Woman married to a blind man

ಹಿಂದೂ ಸಂಪ್ರದಾಯದಂತೆ ಇಬ್ಬರಿಗೂ ಬಾಸಿಂಗ ಕಟ್ಟಿಕೊಂಡು ಹಾರ ಬದಲಾಯಿಸಿಕೊಂಡ ನೂತನ ಜೋಡಿ, ಅಂತಿಮವಾಗಿ ತಾಳಿ ಕಟ್ಟುವ ಮೂಲಕ ನಂದಾ ಜಗದೀಶನ ಬಾಳಲ್ಲಿ ಪ್ರವೇಶ ಮಾಡಿದಳು. ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೂರಾರು ಬಂದುಗಳು ಹಾಗೂ ಸ್ನೇಹಿತರು ನೂತನ ದಂಪತಿಗೆ ಹರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+