ಸಂಕ್ರಾಂತಿ ಪಾಲಿಟಿಕ್ಸ್: ರಾಜ್ಯಕ್ಕೆ ಸುರ್ಜೆವಾಲ ಆಗಮನ, ಸೋಮವಾರ ಕಾಂಗ್ರೆಸ್ ಸರಣಿ ಸಭೆ: ಏನೆಲ್ಲ ವಿಚಾರ ಚರ್ಚೆ?
ಬೆಂಗಳೂರು, ಜನವರಿ 12: ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಬೇಕಿದ್ದ ರಾಜ್ಯ ಸರ್ಕಾರವು ಬಣ ರಾಜಕೀಯ, ಗೌಪ್ಯಸಭೆ, ಡಿನ್ನರ್ ಮೀಟಿಂಗ್, ಅಧಿಕಾರ ಹಂಚಿಕೆ ವಿಚಾರಗಳಲ್ಲಿ ಮುಳುಗಿದಿದೆ. ಇದರಿಂದ ಪಕ್ಷದ ಒಳಗೆ ಆಂತರಿಕ ಬೇಗುದಿ ಹೆಚ್ಚಾದಂತೆ ಕಾಣುತ್ತಿದೆ. ಇದೆಲ್ಲದರ ನಿವಾರಣೆಗೆಗಾಗಿ, ಅಗತ್ಯ ಸಲಹೆ ಸೂಚನೆಗಾಗಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಸಕ್ರಾಂತಿಗೆ ಒಂದು ದಿನ ಮೊದಲೇ ಕಾಂಗ್ರೆಸ್ ನಾಯಕರ ಜತೆಗೆ ಸರಣಿ ಸಭೆ ನಡೆಸಲಿದ್ದಾರೆ.
ಸೋಮವಾರ ಕಾಂಗ್ರೆಸ್ ಸಿಎಲ್‌ಪಿ ಸಭೆ ನಡೆಯಲಿದೆ. ಇದರೊಂದಿಗೆ ರಾಜ್ಯದಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆ ಪರ ವಿರೋಧಗಳು ಆಡಳಿತ ಯಂತ್ರದ ಹಾದಿ ತಪ್ಪಿಸುತ್ತಿವೆ. ಕಾಂಗ್ರೆಸ್ ಆಂತರಿಕ ವಿಚಾರ ರಾಜಕಾರಣದಲ್ಲಿ ಭಾರಿ ಚರ್ಚೆ ಆಗುತ್ತಿವೆ. ಇದೆಲ್ಲದ್ದಕ್ಕೂ ಬ್ರೇಕ್ ಹಾಕಲು ರಣದೀಪ್ ಸುರ್ಜೆವಾಲ ಅವರು ರಾಜ್ಯಕ್ಕೆ ಆಗಮಿಸಿದ್ದಾರೆ.

ರಣದೀಪ್ ಸುರ್ಜೆವಾಲ ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿಸೆಂಬರ್ 21ರಂದು ಔತಣ ಕೂಟ ನಡೆದಿತ್ತು. ಈ ರಹಸ್ಯ ಸಭೆ ನಡಿಸಿದ್ದ, ಸರ್ಕಾರದ ಒಳಗಿನ ಬೇಗುದಿ, ಬಣ ರಾಜಕೀಯ ಜೋರಾಗಿದೆ. ಕೆಪಿಸಿಸಿ ಅಧ್ಯಕ್ಷಗಿರಿಯತ್ತ ತಲೆ ಕೆಡಿಸಿಕೊಂಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರು ಇದೀಗ ಅಧಿಕಾರ ಹಂಚಿಕೆಗಾಗಿ ಕಸರತ್ತು ಜೋರಾಗಿದೆ.
ಡಿನ್ನರ್ ಮೀಟಿಂಗ್, ಬಣ ರಾಜಕಾರಣ ಸೇರಿದಂತೆ ಕೆಲವು ಪ್ರಮುಖ ವಿಚಾರಗಳ ಸಂಬಂಧ ಸೋಮವಾರ ಜನವರಿ 13ರಂದು ರಣದೀಪ್ ಕಾಂಗ್ರೆಸ್ ಎಲ್ಲ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಈ ವೇಳೆ ಕಿರಿಯ ಹಾಗೂ ಹಿರಿಯ ನಾಯಕರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡುವ ಸಾಧ್ಯತೆ ಇದೆ.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಪ್ರತ್ಯೇಕವಾಗಿ ರಣದೀಪ್ ಸುರ್ಜೆವಾಲ ಅರು ಸಭೆ ನಡೆಸುವ ಸಂಭವವೂ ಇದೆ. ಅಧಿಕಾರ ಹಂಚಿಕೆ, ಬಣ ರಾಜಕೀಯ, ಅದರಿಂದ ಪಕ್ಷ ಸಂಘಟನೆ ಮತ್ತು ಸರ್ಕಾರದ ಮೇಲೆ ಉಂಟಾಗುವ ದುಷ್ಪರಿಣಾ ಬಗ್ಗೆ ಚರ್ಚಿಸಲಿದ್ದಾರೆ. ಉಭಯ ನಾಯಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬಹುದು ಎನ್ನಲಾಗಿದೆ.
ಎರಡೂವರೆ ವರ್ಷದ ಬಳಿಕ ಡಿಕೆ ಶಿವಕುಮಾರ್ ಅವರು ರಾಜ್ಯದ ಸಿಎಂ ಆಗಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಇದೀಗ ಆ ಬಗ್ಗೆ ಹಕ್ಕು ಮಂಡನೆ ಮಂಡಿಸಲು ಡಿಕೆ ಶಿವಕುಮಾರ್ ಕಸರತ್ತು ನಡೆಸಿದ್ದಾರೆ. ಇತ್ತ ಸಿದ್ದರಾಮಯ್ಯ ಬಣ ದವರು ಹಾಲಿ ಸಿಎಂ ಐದು ವರ್ಷ ಮುಂದುವರಿಯುತ್ತಾರೆ ಎಂದು ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಿದ್ದಾರೆ. ಈ ವಿಚಾರವನ್ನು ವಿದೇಶದಿಂದ ಬಂದ ಬಳಿಕ ದೆಹಲಿಯಲ್ಲಿ ವರಿಷ್ಠರ ಗಮನಕ್ಕೆ ಡಿಸಿಎಂ ತಂದಿದ್ದರು.
ಈ ಮಧ್ಯೆ ಡಿನ್ನರ್ ಮೀಟಿಂಗ್ ಸದ್ದು ಜೋರಾಗಿತ್ತು. ಸಚಿವ ಜಿ.ಪರಮೇಶ್ವರ ಅವರು ಕರೆದಿದ್ದ ಡಿನ್ನರ್ ಮೀಟಿಂಗ್ ಅನ್ನು ಡಿಸಿಎಂ ರದ್ದುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿತ್ತು. ರಹಸ್ಯ ಸಭೆಗೆ ಡಿಕೆ ಶಿವಕುಮಾರ್ ಅವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಸಚಿವ ಎಂಬಿ ಪಾಟೀಲ್ ಅವರು ಸ್ವಪಕ್ಷ, ವಿಪಕ್ಷದವರು ಊಟಕ್ಕೆ ಸೇರಬಹುದು. ಇದಕ್ಕೆ ಪ್ರತ್ಯೇಕ ಆಯಾಮ ಕಲ್ಪಿಸುವ ಅಗತ್ಯವಿಲ್ಲ ಎಂದಿದ್ದರು. ಮೊನ್ನೆಯಷ್ಟೇ ಸಿಎಂ ಪರ ಬ್ಯಾಟ್ ಬೀಸಿದ್ದ ಸಚಿವರು, ಮುಂದಿನ ಐದು ವರ್ಷ ಸಿದ್ದರಾಮಯ್ಯ ಅವರೇ ಅಧಿಕಾರ ಹಿಡಿಯಲಿದ್ದಾರೆ ಎಂದು ತಿಳಿಸಿದ್ದರು. ಸಿದ್ದರಾಮಯ್ಯ ಬಣದವರು ಬಹಿರಂಗ ಹೇಳಿಕೆಗಳು ಡಿಕೆ ಶಿವಕುಮಾರ್ ಅವರ ನಿದ್ದೆಗೆಡಿಸಿತ್ತು.
ಸರಣಿ ಸಭೆಯತ್ತ ಎಲ್ಲರ ಚಿತ್ತ
ಮತ್ತೊಂದೆಡೆ ಖ್ಯಾತ ಸ್ವಾಮೀಜಿಗಳು ಡಿಕೆ ಶಿವಕುಮಾರ್ ಮುಂದಿನ ಸಿಎಂ ಎಂದು ಭವಿಷ್ಯ ನುಡಿದಿದ್ದರು. ಇದು ಸಹ ರಾಜಕಾರಣದಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಕಾಂಗ್ರೆಸ್ ಆಂತರಿಕ ವಿಚಾರಗಳು, ಭಿನ್ನಮತ ಸ್ಪೋಟಿಸದಂತೆ ಸುರ್ಜೆವಾಲರು ಬ್ರೇಕ್ ಹಾಕಲಿದ್ದಾರೆ. ಈ ಸಂಬಂಧ ಸೋಮವಾರದ ಕಾಂಗ್ರೆಸ್ ಸರಣಿ ಸಭೆಗಳ ಮೇಲೆ ಎಲ್ಲ ಚಿತ್ತ ನೆಟ್ಟಿದೆ.












Click it and Unblock the Notifications