Get Updates
Get notified of breaking news, exclusive insights, and must-see stories!

ಅಂಗಾಂಗ ದಾನ ಜಾಗೃತಿಗಾಗಿ ರಾಮನಗರ ಮ್ಯಾರಥಾನ್

ರಾಮನಗರ, ಡಿ. 20: ಜಿಲ್ಲೆಯ ಮೈಸೂರು ರಸ್ತೆಯಲ್ಲಿರುವ ಬಸವನಪುರದಲ್ಲಿ ಅಂಗಾಂಗ ದಾನ ಜಾಗೃತಿ ಮೂಡಿಸಲು 2015ರ ಫೆಬ್ರವರಿ 1ರಂದು ರಾಮನಗರ ಮ್ಯಾರಥಾನ್ ಆಯೋಜಿಸಲಾಗಿದೆ.

ಜಿಗ್ಗೇನಹಳ್ಳಿಯಲ್ಲಿರುವ ಯೆಲ್ಲೊ ಆ್ಯಂಡ್ ರೆಡ್ ಫೌಂಡೇಶನ್ ಈ ಮ್ಯಾರಥಾನ್ ಆಯೋಜಿಸಿದೆ. ಆಸಕ್ತರು 2015ರ ಜನವರಿ 15ರೊಳಗೆ ಹೆಸರು ನೋಂದಾಯಿಸಬೇಕು.

ಭಾಗವಹಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಕನಿಷ್ಠ 550 ರೂ. ಶುಲ್ಕ ನೀಡಬೇಕು. ಭಾಗವಹಿಸುವವರಿಗೆ ಬೆಂಗಳೂರಿನಿಂದ ರಾಮನಗರಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ ವಿಶೇಷ 200 ರೂ. ಪಾವತಿಸಬೇಕಾಗುತ್ತದೆ.

marth

ಆಸಕ್ತರು ಹೆಸರು ನೋಂದಾಯಿಸಲು ರಾಮನಗರ ಮ್ಯಾರಥಾನ್ ವೆಬ್ ಸೈಟ್ ಗೆ ಭೇಟಿ ನೀಡಬೇಕು. ವಿವರಗಳಿಗಾಗಿ ಯೆಲ್ಲೊ ಆ್ಯಂಡ್ ರೆಡ್ ಫೌಂಡೇಶನ್ ದೂ. 080 27275624 ಅಥವಾ ಇಮೇಲ್ [email protected] ಸಂಪರ್ಕಿಸಬೇಕು. ಅಥವಾ ವೆಬ್‌ಸೈಟ್‌ನಲ್ಲಿನ 'ರಿಜಿಸ್ಟ್ರೇಶನ್' ಐಕಾನ್ ಕ್ಲಿಕ್ ಮಾಡಬೇಕು.

ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸಲು ಈ ಮ್ಯಾರಥಾನ್ ಆಯೋಜಿಸಲಾಗಿದೆ. ಜಾಗೃತಿ ಓಟವನ್ನು ನಿಸರ್ಗದ ನಡುವೆ ಇರುವ ದಾರಿಯಲ್ಲಿ ಆಯೋಜಿಸಲಾಗುತ್ತದೆ ಎಂದು ಯೆಲ್ಲೊ ಆ್ಯಂಡ್ ರೆಡ್ ಫೌಂಡೇಶನ್ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+