Ramesh Jarakiholi: ವಿಜಯೇಂದ್ರ, ಅವರ ಕಾಲಿನ ಧೂಳಿಗೂ ಸಮನಲ್ಲ: ರಮೇಶ ಜಾರಕಿಹೊಳಿ ಕಿಡಿ
ಬೆಳಗಾವಿ, ಡಿಸೆಂಬರ್ 03: , ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಎರಡು ದಿನಗಳ ಹಿಂದೆಯೇ ಶೋಕಾಸ್ ನೋಟಿಸ್ ಬಂದಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಹುಟ್ಟು ಹೋರಾಟಗಾರ. ಆದರೆ, ವಿಜಯೇಂದ್ರ, ಬಿಎಸ್ ಯಡಿಯೂರಪ್ಪ ಅವರ ಕಾಲಿನ ಧೂಳಿಗೂ ಸಮನಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಹೇಳಿದರು.
ನನ್ನ ಬೆನ್ನಿಗೆ ನಿಲ್ಲುವಂತೆ ವಿಜಯೇಂದ್ರ ಹಿಂದುಳಿದ ನಾಯಕರನ್ನು ಬೆದರಿಸುತ್ತಿದ್ದಾರೆ. ವಿಜಯೇಂದ್ರ ಜೊತೆಯಲ್ಲಿರುವ ಬಹುತೇಕರು ಹಿಂದುಳಿದ ಸಮುದಾಯದವರು. ಲಿಂಗಾಯತ, ಒಕ್ಕಲಿಗರು ಯಾರೂ ಇಲ್ಲ. ಪಾಪ ರೇಣುಕಾಚಾರ್ಯ ರಾಜಕೀಯ ಅಸ್ತಿತ್ವಕ್ಕಾಗಿ ಅವರ ಜೊತೆಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಾರಾಗಬೇಕು ಎಂದು ನಾನು ಬಹಿರಂಗವಾಗಿ ಹೇಳಲ್ಲ. ಇನ್ ಡೋರ್ ಸಭೆ ಮಾಡಿ ಕೇಳಲಿ ಹೇಳುತ್ತೇನೆ ಎಂದು ಹೇಳಿದರು.

ಜೀನ್ಸ್ ಪ್ಯಾಂಟ್, ಟೀ ಶರ್ಟ್ ಹಾಕಿ ಅಡ್ಡಾಡುವ ವಯಸ್ಸು ಅವರದು. ಇನ್ನೂ 4 ವರ್ಷಗಳ ಬಳಿಕ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಬೇಕಿತ್ತು. ನಾವು ಯತ್ನಾಳ್ ಬೆನ್ನಿಗೆ ನಿಲ್ಲುತ್ತೇವೆ. ಕೇಂದ್ರ ನಾಯಕರ ಮನವೊಲಿಸುತ್ತೇವೆ ಎಂದ ಅವರು ಶಾಸಕ ಬಿ.ವೈ.ವಿಜಯೇಂದ್ರಗೆ ನಾಲ್ಕು ವರ್ಷದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕಿತ್ತು ಎಂದು ತಿಳಿಸಿದರು.
ವಿಜಯೇಂದ್ರ ಜೊತೆಯಲ್ಲಿರುವ ಬಹುತೇಕರು ಹಿಂದುಳಿದ ಸಮುದಾಯದವರು. ಲಿಂಗಾಯತ, ಒಕ್ಕಲಿಗರು ಯಾರೂ ಇಲ್ಲ. ಪಾಪ ರೇಣುಕಾಚಾರ್ಯ ರಾಜಕೀಯ ಅಸ್ತಿತ್ವಕ್ಕಾಗಿ ಅವರ ಜೊತೆಗಿದ್ದಾರೆ. ನನ್ನ ಬೆನ್ನಿಗೆ ನಿಲ್ಲುವಂತೆ ವಿಜಯೇಂದ್ರ ಹಿಂದುಳಿದ ನಾಯಕರನ್ನು ಬೆದರಿಸುತ್ತಿದ್ದಾರೆ ಎಂದು ಮಾಜಿ ಸಚಿವ ರಮೇಶ್ವ ಜಾರಹೊಳಿ ಕಿಡಿದ್ದಾರೆ.
ಗೋಕಾಕ: ವಿದ್ಯಾರ್ಥಿ ಜೀವನದಿಂದ ರಾಜಕಾರಣ ಮಾಡುತ್ತ ಬಂದಿದ್ದು, 25 ವರ್ಷಗಳಿಂದ ಶಾಸಕನಾಗಿದ್ದೇನೆ. ನನ್ನ ಜನರಿಗೆ ಅನ್ಯಾಯವಾದಾಗ ನಾನು ರೆಬಲ್ ಆಗಲೇಬೇಕು. ಅದು ನನ್ನ ಸ್ವಭಾವ. ರೆಬಲ್ ಅನ್ನೋದೇ ನನಗೆ ಸಚಿವ ಸ್ಥಾನವಿದ್ದಂತೆ ಎಂದ ಶಾಸಕ ರಮೇಶ ಜಾರಕಿಹೊಳಿ ಅವರು, ನನಗೆ ಕಾಂಗ್ರೆಸ್ ಪಕ್ಷದಲ್ಲೂ ಅನ್ಯಾಯ ಆಗಿದೆ. ಬಿಜೆಪಿ ಕೆಲ ಮುಖಂಡರಿಂದಲೂ ಅನ್ಯಾಯವಾಗಿದೆ. ನನ್ನದು ಹೋರಾಟದ ಬದುಕು ಎಂದರು.
ಇನ್ನೂ ಮಾಜಿ ಸಚಿವ ಕುಮಾರ ಬಂಗಾರಪ್ಪ ಅವರು ಮಾತನಾಡಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ನಾವು ಹೈಕಮಾಂಡ್ ನಾಯಕರ ಭೇಟಿ ಮಾಡಿ ಯತ್ನಾಳ್ ಅವರ ಪರವಾಗಿ ಮಾತನಾಡುತ್ತೇವೆ.ವಕ್ಫ್ ಬೋರ್ಡ್ ಭೂಕಬಳಿಕೆ ವಿಚಾರವಾಗಿ ನಡೆಯುತ್ತಿರುವ ಹೋರಾಟಕ್ಕೆ ಶೋಕಾಸ್ ನೋಟಿಸ್ ನೀಡಿಲ್ಲ ಅನಿಸುತ್ತದೆ. ನಮ್ಮ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಮನವೊಲಿಸುತ್ತೇವೆ. ಬಿಜೆಪಿ ಸಂಘಟನೆಯಲ್ಲಿ ಯತ್ನಾಳ್ ಅವರ ಪಾತ್ರ ಬಹುಮುಖ್ಯವಾಗಿದ್ದು, ನಾವೆಲ್ಲರೂ ಯತ್ನಾಳ್ ಬೆನ್ನಿಗೆ ನಿಲ್ಲುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನೂ ನೋಟಿಸ್ ಕುರಿತು ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ನೋಟಿಸ್ ಅಧಿಕೃತವಾಗಿ ಬಂದಿಲ್ಲ, ಅದುಕ್ಕೆ ಉತ್ತರ ಕೊಡ್ತೀನಿ. ಮೂರು ಸಾರಿ ಕೊಟ್ಟಿದ್ದಾರೆ, ಅದೇ ರೀತಿ ಅಂತ ಅಂದುಕೊಂಡಿದ್ದೇನೆ
ನನಗೆ ಮೇಲ್ ನಲ್ಲಿ ಬಂದಿಲ್ಲ, ಪೋಸ್ಟ್ ನಲ್ಲಿ ಬಂದಿಲ್ಲ. ಇದನ್ನ ಡೂಪ್ಲಿಕೇಟ್ ಅಂತ ಅಂದಿಕೊಂಡಿದ್ದೇನೆ, ಬಿಜೆಪಿ ನಲ್ಲಿ ವಂಶವಾದ ಇರಬಾರದು ಅಂತ ಇದೆ. ವಂಶವಾದ ವಿಚಾರವಾಗಿ ವಿಜಯೇಂದ್ರ ಪರವಾಗಿ ತಿದ್ದುಪಡಿ ಆಗಿದ್ರೆ ಅದರ ಬಗ್ಗೆ ಕೇಳ್ತಿನಿ ಎಂದು ಹೇಳಿದರು.
ವಿಜಯೇಂದ್ರ ಬಹಳ ಸಣ್ಣ ಹುಡುಗ ಇದ್ದಾನೆ. ಯಡಿಯೂರಪ್ಪ ರೀತಿ ಬಚ್ಚಾ ಲೀಡರ್ ಅಲ್ಲ ನಾನು, ನಾನು ಯಾವುದಕ್ಕೂ ಅಂಜುವುದಿಲ್ಲ. ನನಗೆ ನೋಟಿಸ್ ಬಂದ್ರೆ ನಾನು ಅಂಜುವುದಿಲ್ಲ, ಅವರು ಅಂಜಬೇಕು, ನಾನು ಅಂಜುವುದಿಲ್ಲ, ಅಪ್ಪ. ಮಗ ಅಂಜಬೇಕು, ನಾನು ಅಂಜುವುದಿಲ್ಲ ಎಂದು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications