ಸಿಡಿ ಪ್ರಕರಣ; ಯುವತಿ 3ನೇ ವಿಡಿಯೋ ಬಿಡುಗಡೆ, ಹೇಳಿದ್ದೇನು?
ಬೆಂಗಳೂರು, ಮಾರ್ಚ್ 26; ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿ 3ನೇ ವಿಡಿಯೋವನ್ನು ಬಿಡುಗಡೆ ಮಾಡಿದ್ದಾಳೆ. ಮಾಜಿ ಸಚಿವರ ವಿರುದ್ಧ ವಕೀಲರ ಮೂಲಕ ದೂರು ದಾಖಲು ಮಾಡುವುದಾಗಿ ಹೇಳಿದ್ದಾಳೆ.
Recommended Video
ಶುಕ್ರವಾರ ಅಜ್ಞಾತ ಸ್ಥಳದಿಂದಲೇ ಯುವತಿ 3ನೇ ವಿಡಿಯೋ ಬಿಡುಗಡೆ ಮಾಡಿದ್ದಾಳೆ. ಗುರುವಾರ 2ನೇ ವಿಡಿಯೋವನ್ನು ಬಿಡುಗಡೆ ಮಾಡಿದ್ದ ಯುವತಿ, "ಎಸ್‌ಐಟಿ ಮುಂದೆ ಹಾಜರಾಗುತ್ತೇನೆ ನನಗೆ ತಂದೆ-ತಾಯಿಯ ರಕ್ಷಣೆ ಮುಖ್ಯ" ಎಂದು ಹೇಳಿದ್ದಳು.

"ವಕೀಲ ಜಗದೀಶ್ ಅವರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಕೊಡುವೆ" ಎಂದು 3ನೇ ವಿಡಿಯೋದಲ್ಲಿ ಯುವತಿ ಹೇಳಿದ್ದಾಳೆ. ಇದರಿಂದಾಗಿ ಸಿಡಿ ಪ್ರಕರಣ ಮತ್ತೊಂದು ತಿರುವು ಪಡೆಯುವ ನಿರೀಕ್ಷೆ ಇದೆ.
24 ದಿನದಿಂದ ಜೀವ ಭಯ, ಹೆದರಿಕೆಯಿಂದಲೇ ಇದ್ದೆ
— oneindiakannada (@OneindiaKannada) March 26, 2021
ರಾಜ್ಯದ ಜನರು ನನಗೆ ಬೆಂಬಲ ನೀಡುತ್ತಿದ್ದಾರೆ
ನನಗೆ ಈಗ ಧೈರ್ಯ ಬಂದಿದೆ, ವಕೀಲರ ಮೂಲಕ ದೂರು ನೀಡುತ್ತೇನೆ
3ನೇ ವಿಡಿಯೋದಲ್ಲಿ ಸಂತ್ರಸ್ತ ಯುವತಿಯಿಂದ ಹೇಳಿಕೆ#RameshJarkiholi #Cd #Girl pic.twitter.com/oEkrkYQXmJ
"ಕರ್ನಾಟಕದ ಜನತೆ ತಂದೆ-ತಾಯಿ ಆಶೀರ್ವಾದದಿಂದ, ಎಲ್ಲಾ ಪಕ್ಷದ ನಾಯಕರಿಂದ, ಎಲ್ಲಾ ಸಂಘಟನೆಗಳ ನಾಯಕರು ತುಂಬಾ ಬೆಂಬಲ ಕೊಡುತ್ತಿದ್ದಾರೆ" ಎಂದು ಯವತಿ ಹೇಳಿದ್ದಾಳೆ.
"24 ದಿನದಿಂದ ನಾನು ಜೀವ ಬೆದರಿಕೆಯಿಂದ, ಭಯ ಭಯದಲ್ಲೇ ಬದುಕುತ್ತಿದ್ದೆ. ಇವತ್ ನನಗೆ ಎಲ್ಲೋ ಒಂದು ಕಡೆ ಧೈರ್ಯ ಬಂದಿದೆ. ನನ್ನನ್ನು ಬೆಂಬಲಿಸುತ್ತೀರಿ ಎಂಬ ಕಾರಣಕ್ಕೆ ನಾನು ವಕೀಲ ಜಗದೀಶ್ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತೇನೆ" ಎಂದು ಹೇಳಿಕೆ ನೀಡಿದ್ದಾಳೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಂತ್ರಸ್ತ ಯುವತಿ ಪರ ವಕೀಲ ಜಗದೀಶ್ ಅವರು, "ಇಂದು ಮಧ್ಯಾಹ್ನ 2.30ಕ್ಕೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಎರಡೂವರೆ ಪುಟಗಳ ದೂರು ನೀಡುತ್ತೇನೆ" ಎಂದು ಹೇಳಿದ್ದಾರೆ.












Click it and Unblock the Notifications