ಸಿಡಿ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಂತ್ರಸ್ತ ಯುವತಿ ಸುಪ್ರೀಂ ಮೊರೆ
ಬೆಂಗಳೂರು, ಫೆ. 11: ಅಶ್ಲೀಲ ಸಿಡಿ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಎಸ್ಐಟಿ ರಚನೆ ಪ್ರಶ್ನಿಸಿ ಸಂತ್ರಸ್ತ ಯುವತಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾಳೆ.
ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ದಾಖಲಿಸಿದ್ದ ಪ್ರಕರಣದಲ್ಲಿ ತನಿಖಾ ವರದಿ ಸಲ್ಲಿಸಲು ಹೈಕೋರ್ಟ್ ಹಸಿರು ನಿಶಾನೆ ತೋರಿತ್ತು. ರಮೇಶ್ ಜಾರಕಿಹೊಳಿ ಮೇಲಿನ ಅತ್ಯಾಚಾರ, ಕೆಲಸದ ಅಮಿಷೆ ತೋರಿಸಿ ಲೈಂಗಿಕ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಎಸ್ಐಟಿ ಇತ್ತೀಚೆಗೆ ಬಿ ವರದಿಯನ್ನು ಸಲ್ಲಿಸಿತ್ತು.
ಇದೀಗ ಸಂತ್ರಸ್ತ ಯುವತಿ ಪರ ವಕೀಲರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣದಲ್ಲಿ ತನಿಖೆ ನಡೆಸಿದ ಎಸ್ಐಟಿ ರಚನೆ ಕಾನೂನು ಬಾಹಿರ. ಎಸ್ಐಟಿ ರಚನೆ ಸರಿಯಿಲ್ಲ. ಸರ್ಕಾರ ಸ್ವಯಂ ಪ್ರೇರಿತವಾಗಿ ಎಸ್ಐಟಿ ರಚನೆ ಮಾಡಿದೆ ಎಂದು ಸಂತ್ರಸ್ತ ಯುವತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಎಸ್ಐಟಿ ರಚನೆ ಕಾನೂನು ಬದ್ಧವಲ್ಲ. ಅದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ವಿಚಾರಣೆ ನಡೆಸುವುದು ಎಷ್ಟು ಸರಿ. ನನಗೆ ಈ ವರದಿ ಮೇಲೆ ನಂಬಿಕೆ ಇಲ್ಲ ಎಂಬುದು ಸಂತ್ರಸ್ತ ಯುವತಿಯ ವಾದ.
ಎಸ್ಐಟಿ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ಕಾರಣ ಇದೀಗ ಮತ್ತೆ ರಮೇಶ್ ಜಾರಕಿಹೊಳಿ ಇಕ್ಕಟ್ಟಿನಲ್ಲಿ ಸಿಲುಕಿದಂತಾಗಿದೆ. ಒಂದಡೆಗೆ ಸುಪ್ರೀಂನಲ್ಲಿ ಸಲ್ಲಿಸಿರುವ ಅರ್ಜಿ ಇತ್ಯರ್ಥವಾಗಬೇಕು. ಒಂದು ವೇಳೆ ಎಸ್ಐಟಿ ರಚನೆ ಸರಿಯಿಲ್ಲ ಎಂದು ಅರ್ಜಿದಾರಳ ಮನವಿಗೆ ಜಯ ಸಿಕ್ಕರೆ ಮತ್ತೆ ಸಿಡಿ ಪ್ರಕರಣ ಮತ್ತೆ ವಿವಾದಕ್ಕೆ ನಾಂದಿ ಹಾಡಲಿದೆ. ಒಂದು ವೇಳೆ ಹೈಕೋರ್ಟ್ ತೀರ್ಪನ್ನೇ ಸುಪ್ರೀಂಕೋರ್ಟ್ ಎತ್ತಿ ಹಿಡಿದರೆ, ಜಾರಕಿಹೊಳಿ ಸಚಿವರಾಗುವ ಹಾದಿ ಸುಗಮವಾಗಲಿದೆ.












Click it and Unblock the Notifications