ಬಿಜೆಪಿಯ ಮತ್ತೊಂದು ಅಕ್ರಮ ಬಯಲು; ಬರೋಬ್ಬರಿ 23 ಕೋಟಿ ಹಗರಣ: ತನಿಖೆಗೆ ಆಗ್ರಹ
ಬೆಂಗಳೂರು, ಸೆಪ್ಟೆಂಬರ್ 06: ಭಾಗ್ಯಲಕ್ಷ್ಮಿ ಯೋಜನೆಯಡಿ ಉಚಿತ ಸೀರೆ ಹಂಚಿಕೆಯಲ್ಲಿ 23 ಕೋಟಿ ಹಗರಣ ನಡೆದಿರುವುದಾಗಿ ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಸಂವಹನ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಬಹಿರಂಗಪಡಿಸಿದ್ದಾರೆ.
2011 ರಲ್ಲಿ ಭಾಗ್ಯಲಕ್ಷ್ಮಿ ಯೋಜನೆಯ ಅಡಿ ಉಚಿತ ಸೀರೆ ಹಂಚಿಕೆಯಲ್ಲಿ 23 ಕೋಟಿ ಹಗರಣ ನಡೆದಿದೆ. ಸುಮಾರು 10 ಲಕ್ಷ ಸೀರೆಗಳನ್ನು ಹಂಚಿಕೆ ಮಾಡಲಾಗಿತ್ತು. ರೂ.100 ಮುಖಬೆಲೆಯ ಸೀರೆಗಳಿಗೆ ಹೆಚ್ಚು ಬೆಲೆ ಕೊಟ್ಟು ಸೂರತ್ ಇಂದ ತರಿಸಲಾಗಿತ್ತು. ಈ ಹಗರಣದ ಬಗ್ಗೆ ವಿಧಾನ ಪರಿಷತ್ ಅಲ್ಲಿ ಮೋಟಮ್ಮ ಅವರು ವಿರೋಧ ಪಕ್ಷದ ನಾಯಕರಾಗಿ ಇದ್ದಾಗ ಈ ವಿಚಾರದ ಬಗ್ಗೆ ಚರ್ಚೆಯಾಗಿದೆ. ಸದಸ್ಯರಾಗಿದ್ದ ಯು. ಬಿ. ವೆಂಕಟೇಶ್ ಅವರು ಹಾಗೂ ದಯಾನಂದ ಅವರು ಇದರ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದ್ದರು. ಈ ಹಗರಣದ ಬಗ್ಗೆ ತನಿಖೆ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ.

ರಾಜಸ್ಥಾನದಿಂದ ಬಂದಿರುವ ಲೆಹರ್ ಸಿಂಗ್ ಅವರು ನಮ್ಮ ಕರ್ನಾಟಕದ ಹಿತ ಕಾಪಾಡುತ್ತಾರೋ ಅಥವಾ ರಾಜಸ್ಥಾನದ ಹಿತ ಕಾಪಾಡುತ್ತಾರೋ ನೋಡಬೇಕು. ಅಕ್ರಮಗಳ ಬಗ್ಗೆ ಮಾತನಾಡುವ ಅವರು ಈ ಸೀರೆ ಹಗರಣದ ಬಗ್ಗೆ ದನಿ ಎತ್ತಬೇಕು, ತನಿಖೆ ನಡೆಸಿ ಎಂದು ಸಿಎಂಗೆ ಪತ್ರ ಬರೆಯಬೇಕು. ಅಮೇರಿಕಾ ಅಧ್ಯಕ್ಷರು ಬಂದು ದೂರು ನೀಡಬೇಕು ಎಂದು ಭಾವಿಸಿದ್ದರು ಎನಿಸುತ್ತದೆ ಎಂದು ರಮೇಶ್ ಬಾಬು ಹೇಳಿದರು.
ಶಾಲೆ ನಡೆಸುತ್ತೇನೆ ಎಂದು ಬಿರಿಯಾನಿ ಹೋಟೆಲ್ ನಡೆಸುತ್ತಿರುವ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ರಾಜ್ಯಪಾಲರಿಗೆ ದೂರನ್ನು ಕಾಂಗ್ರೆಸ್ ಪಕ್ಷದ ಎರಡನೇ ಸಾಲಿನ ನಾಯಕರು ಹೋಗಿದ್ದಾರೆ ಎನ್ನುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಬಾಲಿಶ ಮಾತುಗಳನ್ನು ಆಡಿದ್ದಾರೆ. ಅವರಿಗೆ ಅಮೇರಿಕಾ ಅಧ್ಯಕ್ಷರು ಬಂದು ದೂರು ನೀಡಬೇಕು ಎಂದು ನಿರೀಕ್ಷೆ ಮಾಡಿದ್ದರು ಎನಿಸುತ್ತದೆ.

ವಿಜಯೇಂದ್ರ, ಆರ್. ಅಶೋಕ್, ಸಂಸದ ಸುಧಾಕರ್, ಅಶ್ವಥ್ ನಾರಾಯಣ ಅವರು ಜಗನ್ನಾಥ ಭವನದ ನಾಯಕರಲ್ಲ ಬಾಲಭವನದ ನಾಯಕರು ಎಂದು ಜಗನ್ನಾಥ ಭವನದ ನಾಯಕರಾದ ಬಿ. ಎಲ್. ಸಂತೋಷ, ಸಿ. ಟಿ. ರವಿ, ಯತ್ನಾಳ್, ರವಿಕುಮಾರ್ ಅವರು ಹೇಳುತ್ತಿದ್ದಾರೆ. ವಿಜಯೇಂದ್ರ ಅವರು ತಮ್ಮ ತಂದೆಯ ನಕಲಿ ಸಹಿ ಮಾಡಿ ಅವ್ಯವಹಾರ ಮಾಡಿದ ಆರೋಪ ಹೊತ್ತಿದ್ದಾರೆ. ಎಚ್ ವಿಶ್ವನಾಥ್ ಅವರು 20 ಸಾವಿರ ಕೋಟಿಯ ನೀರಾವರಿ ಹಗರಣದ ಆರೋಪ ಮಾಡಿದ್ದರು. ಯತ್ನಾಳ್ ಹಾಗೂ ಅರವಿಂದ ಬೆಲ್ಲದ ಅವರು ಹೈ ಕಮಾಂಡ್ ಗೆ ಪತ್ರ ಬರೆದಿದ್ದರು. ಒಂದು ಪಕ್ಷದ ಅಧ್ಯಕ್ಷರಾದ ವಿಜಯೇಂದ್ರ ಅವರು ಈ ಆರೋಪಗಳ ಮೇಲೆ ತನಿಖೆ ನಡೆಸಿ ಎಂದು ಪತ್ರ ಸಿಎಂ ಗೆ ಪತ್ರ ಬರೆಯಲಿ ಎಂದು ಆಶಿಸುತ್ತೇನೆ.
ಇನ್ನೂ ಕೆಪಿಸಿಸಿ ವಕ್ತಾರರಾದ ಲಕ್ಷ್ಮಣ್ ಅವರು ಮಾತನಾಡಿ, ಮುಡಾ ಪ್ರಕರಣದಲ್ಲಿ ಕೇಸ್ ದಾಖಲಿಸಿರುವ ಟಿ.ಜೆ. ಅಬ್ರಹಾಂ, ಪ್ರದೀಪ್ ಕುಮಾರ್, ಸ್ನೇಹಮಹಿ ಕೃಷ್ಣ ಈ ಮೂರು ಜನರ ಹಿನ್ನೆಲೆಯ ಬಗ್ಗೆ ತಿಳಿಸಲಾಗುವುದು. ಈ ಮೂರು ಜನರ ದೂರಿನ ಆಧಾರದ ಮೇಲೆ ಮುಖ್ಯಮಂತ್ರಿ ಗಳ ಸೆಕ್ಷನ್ 17 ಎ ಅಡಿ ತನಿಖೆ ನಡೆಸಲು ಸೂಚಿಸಲಾಗಿದೆ. ಇವರುಗಳು ಸುಪ್ರೀಂ ಕೋರ್ಟಿನಲ್ಲಿ ಹೇಗೆ ಫೀಸ್ ಅನ್ನು ಕಟ್ಟುತ್ತಾರೆ. ಅಷ್ಟೊಂದು ಹಣ ಇವರ ಬಳಿ ಇದೆಯೇ? ಎಂದು ಪ್ರಶ್ನಿಸಿದರು.
ಸ್ನೇಹಮಹಿ ಕೃಷ್ಣ ಅವರ ಮೇಲೆ ಮೈಸೂರು ನಗರ ಒಂದರಲ್ಲಿ 22 ಎಫ್ಐಆರ್ ಗಳಾಗಿವೆ. ಪೊಲೀಸರು ಈತನ ಮೇಲೆ ಸಲ್ಲಿಸಿರುವ ಚಾಟ್ ಶೀಟ್ ನಲ್ಲಿ ಹೇಳಿರುವಂತೆ, ಒಂದೇ ವರ್ಷದಲ್ಲಿ 110 ಅರ್ಜಿಗಳ ಮೂಲಕ ದಾಖಲಾತಿಯನ್ನು ಪಡೆದುಕೊಂಡಿದ್ದಾರೆ. ಸ್ನೇಹಮಹಿ ಕೃಷ್ಣ ಭೂ ಹಗರಣಗಳನ್ನು ಸೃಷ್ಟಿ ಮಾಡಿ ಅದಕ್ಕೆ ಸಂಬಂಧಿಸಿದ ಪಟ್ಟವರಿಗೆ ಕಿರುಕುಳ ನೀಡುವ ವ್ಯಕ್ತಿ. ಅಮಾಯಕ ಭೂಮಾಲೀಕರನ್ನು ಹೆದರಿಸಿ ಸಣ್ಣ ಪುಟ್ಟ ಜಗಳಗಳನ್ನು ಸೃಷ್ಟಿ ಮಾಡಿ ಕಾನೂನನ್ನು ದುರುಪಯೋಗ ಮಾಡಿಕೊಂಡಿರುವ ವ್ಯಕ್ತಿ.
ಈತ ಕೊಟ್ಟ ಕಿರುಕುಳಕ್ಕೆ ಮೈಸೂರಿನ ಕುವೆಂಪು ನಗರದ ಮಹಿಳೆ ಮಾನಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಯಾವುದಾದರುಭೂಮಿ ಕಂಡರೆ ಬೇಲಿ ಹಾಕಿ, ಶೆಡ್ ನಿರ್ಮಾಣ ಮಾಡಿ ಕಿರುಕುಳ ನೀಡುವುದೇ ಇವರ ಕೆಲಸ. ಆರ್ ಟಿಐ ನಲ್ಲಿ ದಾಖಲೆ ಪಡೆಯುವುದು, ಅದಕ್ಕೆ ವೈಟ್ನರ್ ಹಾಕುವುದು, ನಕಲಿ ಸೀಲುಗಳನ್ನು ಹಾಕಿ ದಾಖಲೆ ಸೃಷ್ಟಿ ಮಾಡುವುದು ಹೀಗೆ ಈತ ನಕಲಿಗಳ ಸರದಾರ. ಮುಡಾ ಪ್ರಕರಣದಲ್ಲಿ ಒಂದಷ್ಟು ನಕಲಿ ದಾಖಲೆ ಸೃಷ್ಟಿ ಮಾಡಿದ್ದಾನೆ ಎಂದು ಪೊಲೀಸ್ ಕಮಿಷನರ್ ಗೆ ದೂರು ನೀಡಲಾಗಿದೆ. ಆದರೆ ಇದುವರೆಗೂ ಕ್ರಮ ತೆಗೆದುಕೊಂಡಿಲ್ಲ.
ಸ್ನೇಹಮಹಿ ಕೃಷ್ಣ, ನಾಗಾಲಾಂಬಿಕಾ, ಅಶೋಕ, ಕೃಷ್ಣ ಈ ನಾಲ್ಕು ಜನರ ಅಕ್ರಮ ಕೂಟ ಕಟ್ಟಿಕೊಂಡು ಒಂದು ಕೋಟಿ ಹಣಕ್ಕೆ ಇದೇ ರೀತಿಯ ಭೂಅಕ್ರಮದಲ್ಲಿ ವಸೂಲಿಗೆ ಮುಂದಾದ ಪ್ರಕರಣವಿದೆ. ಮೈಸೂರಿನ ಪೊಲೀಸರು ನನ್ನ ಕಂಡರೆ ಉಚ್ಚೆ ಹೊಯ್ದು ಕೊಳ್ಳುತ್ತಾರೆ ಎಂದಿದ್ದರ ಬಗ್ಗೆ ಸ್ನೇಹಮಹಿ ಕೃಷ್ಣನ ವಿರುದ್ದ ದಾಖಲಾಗಿರುವ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಪೇದೆಯ ವಿಡಿಯೋ ಚಿತ್ರೀಕರಣ ಮಾಡಿ ಅಶೀಲ್ಲ ವಾಗಿ ಬಿಂಬಿಸಿದ ಪ್ರಕರಣ ಈತನ ಮೇಲಿದೆ. ಈತನ ಮೇಲೆ ಮೈಸೂರು ನಗರ, ಗ್ರಾಮಾಂತರ ಸೇರಿ 44 ಪ್ರಕರಣಗಳು ದಾಖಲಾಗಿವೆ.
ಮೂಡದಲ್ಲಿ ಒಂದಷ್ಟು ದಾಖಲೆಗಳನ್ನು ಸೃಷ್ಟಿ ಮಾಡಿ ಫೈಲ್ ಗಳಲ್ಲಿ ಸೇರಿಸುವ ಕೆಲಸ ಮಾಡುತ್ತಾನೆ. ಈತನದ್ದು ಬರೀ ಭೂಮಿಗೆ ಸಂಬಂಧಪಟ್ಟ ಪ್ರಕರಣಗಳು. ಪೊಲೀಸರ ಬಳಿ ದಾಖಲೆಗಳನ್ನು ವಸೂಲಿ ಮಾಡಲು ತನ್ನದೇ ಆದ ಗ್ಯಾಂಗ್ ಮಾಡಿಕೊಂಡಿದ್ದಾನೆ. ಆರು ತಿಂಗಳು ಜೈಲಿನಲ್ಲಿ ಇದ್ದುಬಂದವನು ಈತ. ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಎಲ್ಲಾ ದಾಖಲೆಗಳು ಇದೇ ಸ್ನೇಹಮಹಿ ಕೃಷ್ಣ ನೀಡಿದವುಗಳು. ಇವನು ಓದಿರುವುದು ಎಸ್ ಎಸ್ ಎಲ್ ಸಿ ಆದರೆ ಭೂ ಹಗರಣದಲ್ಲಿ ಪಿಎಚ್ ಡಿ ಮಾಡಿದ್ದಾನೆ ಎಂದು ತಿಳಿಸಿದರು.












Click it and Unblock the Notifications