ರಾಮನಗರ ಮೆಮು ರೈಲು ಮೈಸೂರಿನ ತನಕ ವಿಸ್ತರಣೆ
ಬೆಂಗಳೂರು, ಡಿಸೆಂಬರ್ 18 : ಬೆಂಗಳೂರು-ಮೈಸೂರು ನಡುವೆ ವಿಶೇಷ ವಿದ್ಯುತ್ ರೈಲು (ಮೆಮು) ಸಂಜೆ ಹೊತ್ತಿನಲ್ಲಿ ಸಂಚಾರ ನಡೆಸುವ ಸಾಧ್ಯತೆ ಇದೆ. ನೈಋತ್ಯ ರೈಲ್ವೆ ವಾರದಲ್ಲಿ ನಾಲ್ಕು ದಿನ ರೈಲು ಸಂಚಾರ ನಡೆಸಲು ಅನುಮತಿ ನೀಡುವಂತೆ ಕೇಂದ್ರ ರೈಲ್ವೆ ಮಂಡಳಿಗೆ ಪತ್ರ ಬರೆದಿದೆ.
ಕಣ್ಣೂರು/ಕಾರವಾರ ಎಕ್ಸ್‌ಪ್ರೆಸ್ ರೈಲು ವಾರದಲ್ಲಿ ನಾಲ್ಕು ದಿನ ಶ್ರವಣಬೆಳಗೊಳ ಮಾರ್ಗವಾಗಿ ಸಂಚಾರ ನಡೆಸುತ್ತಿದೆ. ಫೆಬ್ರವರಿಯಲ್ಲಿ ಮಾರ್ಗ ಬದಲಾವಣೆ ಮಾಡಿದ ಬಳಿಕ ಮೈಸೂರಿಗೆ ಸಂಜೆ 7ಗಂಟೆ ಬಳಿಕ ಬೆಂಗಳೂರಿನಿಂದ ರೈಲುಗಳಿಲ್ಲ.
ಆದ್ದರಿಂದ, ರಾಮನಗರದ ತನಕ ಸಂಚಾರ ನಡೆಸುವ ವಿಶೇಷ ಮೆಮು (06576) ರೈಲನ್ನು ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಮೈಸೂರಿನ ತನಕ ಓಡಿಸಲು ಕೇಂದ್ರ ರೈಲ್ವೆ ಮಂಡಳಿ ಒಪ್ಪಿಗೆ ಕೇಳಲಾಗಿದೆ.

ರಾಮನಗರ ಮೆಮು ರೈಲು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ 7.55ಕ್ಕೆ ಹೊರಡಲಿದೆ. 9 ಗಂಟೆಗೆ ರಾಮನಗರದಿಂದ ಹೊರಡಲಿದ್ದು, ಮೈಸೂರನ್ನು 11.15ಕ್ಕೆ ತಲುಪುವ ನಿರೀಕ್ಷೆ ಇದೆ. ರೈಲು ವಾಪಸ್ ಬರುವ ಸಮಯವನ್ನು ಇನ್ನೂ ಅಂತಿಮಗೊಳಿಸಿಲ್ಲ.
ರಾಮನಗರ ವಿಶೇಷ ಮೆಮು ರೈಲು ವಿಶೇಷ ರೈಲಾಗಿದ್ದು 2019ರ ಫೆಬ್ರವರಿ ತನಕ ಮಾತ್ರ ಸಂಚಾರ ನಡೆಸಲಿದೆ. ಬಳಿಕ ಮತ್ತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ರೈಲು ನೀಡುವಂತೆ ಕೋರಬೇಕಿದೆ.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ.
After d diversion of Blr-Karwar Express via Mys, the commuters of my constituency had no train between 7.30 n 10.30 PM weekly 4 days. So requested @PiyushGoyal ji to extend Blr-Ramnagar MEMU upto Mys n he immediately instructed d officials. It vl be a reality soon. Thanq Piyushji pic.twitter.com/3GX168uCp1
— Pratap Simha (@mepratap) December 17, 2018












Click it and Unblock the Notifications