ರಾಮನಗರ ಜಿಲ್ಲೆ ಇನ್ನುಮುಂದೆ ಇರಲ್ಲ, ಬೆಂಗಳೂರಿನ ಹೆಸರಿನ ಜೊತೆ ರಾಮನಗರ... Ramanagara District
ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ವಿಚಾರದಲ್ಲಿ ದೊಡ್ಡ ತಿರುವು ಸಿಕ್ಕಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ & ಹಾಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಡುವೆ ಶುರುವಾಗಿದ್ದ ತಿಕ್ಕಾಟದಲ್ಲಿ ಡಿಕೆಶಿ ಅವರಿಗೆ ಗೆಲುವು ಸಿಕ್ಕಿದೆ. ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಿ ಬೆಂಗಳೂರಿನ ಜೊತೆಯಲ್ಲಿ ಬೆರೆಸಬೇಕು ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕನಸು & ಪ್ಲಾನ್ ಇದೀಗ ಭರ್ಜರಿ ಸಕ್ಸಸ್ ಕಂಡಿದೆ.
ಬೆಂಗಳೂರು ಅತಿ ವೇಗದಿಂದ ಬೆಳೆಯುತ್ತಿದ್ದು, ರಾಮನಗರ ಜಿಲ್ಲೆ ಬೆಂಗಳೂರಿನ ಪಕ್ಕದಲ್ಲೇ ಇದೆ. ಹೀಗಿದ್ದಾಗ ರಾಮನಗರ & ಕನಕಪುರ ಮೂಲದಿಂದಲೇ ರಾಜಕೀಯವಾಗಿ ಬೆಳೆದಿರುವ ಎಚ್.ಡಿ. ಕುಮಾರಸ್ವಾಮಿ ಅವರು, ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿಚಾರದಲ್ಲಿ ಭಾರಿ ವಿರೋಧ ಮಾಡಿದ್ದರು. ಹೀಗಿದ್ದಾಗ ಇದನ್ನ ಚಾಲೆಂಜ್ ರೀತಿ ತೆಗೆದುಕೊಂಡ ಡಿ.ಕೆ. ಶಿವಕುಮಾರ್ ಅವರು, ಕೊನೆಗೂ ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿಚಾರದಲ್ಲಿ ಭಾರಿ ದೊಡ್ಡ ಗೆಲುವು ಕಂಡಿದ್ದಾರೆ. ಹಾಗಾದ್ರೆ ಇನ್ನುಮುಂದೆ ರಾಮನಗರ ಜಿಲ್ಲೆ ಹೆಸರು ಏನೆಂದು ಬದಲಾವಣೆ ಆಗಲಿದೆ?

ರಾಮನಗರ ಜಿಲ್ಲೆ ಹೆಸರು ಬದಲಾವಣೆ!
ಹೌದು, ಸಿದ್ದರಾಮಯ್ಯ ಅವರ ಸರ್ಕಾರ ಇಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಈಗ ರಾಮನಗರ ಜಿಲ್ಲೆ ಹೆಸರನ್ನ ಬದಲಾವಣೆ ಮಾಡಿ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ನೀಡಲಾಗಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರವನ್ನ ಕೈಗೊಳ್ಳಲಾಗಿದೆ. ಈ ಮೂಲಕ ಹಿಂದೆ ಬೆಂಗಳೂರು ಗ್ರಾಮಾಂತರ & ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿ ಸೇರಿ ಪ್ರತ್ಯೇಕ ಜಿಲ್ಲೆಯಾಗಿದ್ದ ರಾಮನಗರಕ್ಕೆ ಇದೀಗ ಬೆಂಗಳೂರಿನ ಹೆಸರು ಸಿಗುತ್ತಿದೆ. ಇನ್ನು ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಿರುವ ವಿಚಾರವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ!
— DK Shivakumar (@DKShivakumar) May 22, 2025
ರಾಮನಗರ ಜಿಲ್ಲೆ ಈ ಮೊದಲು ಬೆಂಗಳೂರು ಗ್ರಾಮಾಂತರ ಎಂದಿತ್ತು. ನಂತರ ಬೆಂಗಳೂರು ನಗರ ಜಿಲ್ಲೆ ಎಂದಾಗಿತ್ತು. ರಾಮನಗರದ ಹೆಸರನ್ನು ಉಳಿಸಿಕೊಳ್ಳಬೇಕೆಂಬ ಕಾರಣಕ್ಕೆ ಜಿಲ್ಲೆಯ ಎಲ್ಲಾ ಶಾಸಕರುಗಳು ಸೇರಿ ತೀರ್ಮಾನ ಕೈಗೊಂಡು, ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಮರು ನಾಮಕರಣ ಮಾಡಲು ಸಂಪುಟದಲ್ಲಿ… pic.twitter.com/vE6DlMu4CR
ಡಿಸಿಎಂ ಡಿ.ಕೆ. ಶಿವಕುಮಾರ್ ಟ್ವೀಟ್
ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ವಿಚಾರ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು, ಇದೇ ವಿಚಾರ ಕೇಂದ್ರ ಸರ್ಕಾರದ ತನಕ ಹೋಗಿತ್ತು. ಇದೀಗ ಅಂತಿಮವಾಗಿ ಈ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಅವರು ಗೆದ್ದು ಬೀಗಿದ್ದಾರೆ. ಈ ಖುಷಿಯ ವಿಚಾರವನ್ನು ಟ್ವೀಟ್ ಮೂಲಕವೇ ಹಂಚಿಕೊಂಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, 'ರಾಮನಗರ ಜಿಲ್ಲೆ ಈ ಮೊದಲು ಬೆಂಗಳೂರು ಗ್ರಾಮಾಂತರ ಎಂದಿತ್ತು. ನಂತರ ಬೆಂಗಳೂರು ನಗರ ಜಿಲ್ಲೆ ಎಂದಾಗಿತ್ತು ರಾಮನಗರದ ಹೆಸರನ್ನು ಉಳಿಸಿಕೊಳ್ಳಬೇಕೆಂಬ ಕಾರಣಕ್ಕೆ ಜಿಲ್ಲೆಯ ಎಲ್ಲಾ ಶಾಸಕರುಗಳು ಸೇರಿ ತೀರ್ಮಾನ ಕೈಗೊಂಡು, ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಮರು ನಾಮಕರಣ ಮಾಡಲು ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.' ಎಂದು ಮಾಹಿತಿ ನೀಡಿದ್ದಾರೆ.
ಹಾಗೇ ಇದೇ ಟ್ವೀಟ್‌ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, 'ರಾಮನಗರವೇ ಜಿಲ್ಲಾ ಕೇಂದ್ರ ಸ್ಥಾನ ಆಗಿರಲಿದೆ. ಇದರಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ. ಆದರೆ, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಸಂಪುಟ ಒಪ್ಪಿಗೆ ಸೂಚಿಸಿದೆ.' ಎಂದು ತಿಳಿಸಿದ್ದಾರೆ. ವಿರೋಧ ಪಕ್ಷಗಳ ನಾಯಕರು ಸರ್ಕಾರದ ಕ್ರಮ ವಿರೋಧಿಸಿದ್ದು, ರಾಜಕೀಯ ಜಟಾಪಟಿ ಕೂಡ ಇದೀಗ ಶುರುವಾಗಿದೆ.












Click it and Unblock the Notifications