ರಾಮ ದೇವರಲ್ಲ, ರಾಮ ದೇವರಲ್ಲ ಅಂತ ಒತ್ತಿ ಒತ್ತಿ ಹೇಳಿದ ಕಾಂಗ್ರೆಸ್ ನಾಯಕ
ವಿಜಯನಗರ, ಫೆಬ್ರವರಿ 22: . ಕೋಟ್ಯಾಂತರ ಹಿಂದೂಗಳು ಶ್ರದ್ಧಾ ಭಕ್ತಿಯಿಂದ ಆರಾಧಿಸುವ, ಪೂಜಿಸುವ ಶ್ರೀರಾಮ ದೇವರಲ್ಲ, ರಾಮ ದೇವರಲ್ಲ ಅಂತ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಂಸದ ವಿಎಸ್ ಉಗ್ರಪ್ಪ ಕೂಡ ರಾಮನ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಹೌದು, ವಿಜಯನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ವಿ ಎಸ್ ಉಗ್ರಪ್ಪ, ರಾಮ ದೇವರಲ್ಲ, ರಾಮ ದೇವರಲ್ಲ ಅಂತ ಒತ್ತಿ ಒತ್ತಿ ಹೇಳಿದ್ರು. ರಾಮ ದೇವರಲ್ಲ, ರಾಮ ಮನುಷ್ಯ, ಆತ ರಾಜ, ರಾಜಕುಮಾರ. ನಿಮಗೇನಾದರೂ ಭಕ್ತಿ ಇದೆಯಾ ಅಂತ ಬಿಜೆಪಿ ನಾಯಕರನ್ನು ಪ್ರಶ್ನಿಸಿದ ಉಗ್ರಪ್ಪ ಅವರು, ರಾಮ ದೇವರಲ್ಲ, ಆತ ಮನುಷ್ಯ. ಆತ ರಾಜ, ರಾಜಕುಮಾರ ಎಂದಿದ್ದಾರೆ. ತನ್ನ ಆದರ್ಶಗಳ ಮೂಲಕ ರಾಮ ದೈವತ್ವವನ್ನು ಪಡೆದ ಅಂತ ಉಗ್ರಪ್ಪ ಪ್ರತಿಪಾದಿಸಿದ್ದಾರೆ.

ಕಳೆದ ಬಾರಿ ಪುಲ್ವಾಮಾ ಹೆಸರಲ್ಲಿ ಚುನಾವಣೆ ಮಾಡಿದ್ದಿರಿ, ಈ ಬಾರಿ ರಾಮನ ಹೆಸರಲ್ಲಿ ಲೋಕಸಭಾ ಚುನಾವಣೆ ಮಾಡಲು ಹೊರಟಿದ್ದಿರಿ. ಆದರೆ ರಾಮನ ಹೆಸರು ಹೇಳೋದಕ್ಕೆ ನಿಮಗೆ ಯೋಗ್ಯತೆ ಇಲ್ಲ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಮನ ಹೆಸರು ಹೇಳೋದಕ್ಕೆ ಯೋಗ್ಯರಿರುವರು ಕಾಂಗ್ರೆಸ್‌ನವರು. ರಾಮ ಕೊಟ್ಟ ವಚನವನ್ನು ಈಡೇರಿಸಿದನು, ಆದರೆ ಪ್ರಧಾನಿ ನರೇಂದ್ರ ಮೋದಿ ವಚನ ಭ್ರಷ್ಟ ಇದ್ದಾರೆ ಎಂದು ಕಾಂಗ್ರೆಸ್ ಮಾಜಿ ಸಚಿವ ವಿ ಎಸ್ ಉಗ್ರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಮನ ಆದರ್ಶಗಳು ಇಲ್ಲದಿದ್ದರೆ ನೀನು ಹೇಗಪ್ಪ ರಾಮನ ಭಕ್ತನಾಗುತ್ತೀಯಾ? ಪಾಪ ನಿಮ್ಮ ಶ್ರೀಮತಿ ಇಲ್ಲಿ ಅಂಜನಾದ್ರಿಗೆ, ಹಂಪಿಗೆ ಬಂದು ಹೋಗಿದ್ದಾರೆ. ಮೊದಲು ರಾಮಭಕ್ತನಾಗಿ ಆ ಹೆಣ್ಣು ಮಗಳ ರಕ್ಷಣೆ ಮಾಡಪ್ಪ ಅಂತ ಮಾತಿನ ಭರದಲ್ಲಿ ಪ್ರಧಾನಿ ಬಗ್ಗೆ ಏಕವಚನ ವಾಗ್ದಾಳಿ ನಡೆಸಿದ ಉಗ್ರಪ್ಪ, ರಾಮಾಯಣದಲ್ಲಿ ಅಶ್ವಮೇಧ ಯಾಗ ಮಾಡಬೇಕಾದ್ರೆ ಸತಿ ಪತಿ ಸೇರಿ ಮಾಡ್ಬೇಕು ಅಂತ ಗುರು ವಶಿಷ್ಠರು, ವಿಶ್ವಾಮಿತ್ರರು ಹೇಳುತ್ತಾರೆ. ಹಾಗಾಗಿ ಚಿನ್ನದ ಸೀತೆಯನ್ನು ಮಾಡಿ ರಾಮ ಪೂಜೆ ಮಾಡ್ತಾರೆ, ನೀನೇನು ಮಾಡಿದ್ಯಪ್ಪಾ ಮೊನ್ನೆ? ಧರ್ಮವಿರೋಧಿ, ರಾಮನ ವಿಚಾರಕ್ಕೆ ವಿರೋಧಿ ಅಲ್ವಾ ಅಂತ ಏಕವಚನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನ ಟೀಕಿಸಿದರು.












Click it and Unblock the Notifications