ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮತ್ತೆ ಮುಂದೂಡಿಕೆ?
ಬೆಂಗಳೂರು, ನವೆಂಬರ್ 13: ಉಪಚುನಾವಣೆ ಇದ್ದು ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿತರಣೆಯನ್ನು ಮುಂದೂಡಲಾಗಿತ್ತು. ಆದರೆ ಈಗ ಅದು ಮತ್ತಷ್ಟು ಮುಂದಕ್ಕೆ ಹೋಗುವ ಸಾಧ್ಯತೆ ಇದೆ.
ಉಪಚುನಾವಣೆ ಮುಗಿದ ನಂತರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಮಾಡುವುದಾಗಿ ಸರ್ಕಾರ ಹೇಳಿತ್ತು. ನವೆಂಬರ್ 15 ರಂದು ಸಮಾರಂಭವೂ ನಡೆಯಲಿದೆ ಎನ್ನಲಾಗಿತ್ತು ಆದರೆ ಅದು ಮತ್ತಷ್ಟು ಮುಂದೆ ಹೋಗಿದೆ.
ನಿನ್ನೆ ಕೇಂದ್ರ ಮಂತ್ರಿ ಅನಂತ್‌ಕುಮಾರ್ ಅವರು ನಿಧನ ಹೊಂದಿರುವ ಕಾರಣ ರಾಜ್ಯದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ. ಹಾಗಾಗಿ ನಾಳೆ ಸಹ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟಿಸುವುದು ಅನುಮಾನ.

ನವೆಂಬರ್ 15ರಂದು ಮಾಡಲು ಉದ್ದೇಶಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭವು ಮುಂದೂಡಲಾಗಿದೆ. 63 ವರ್ಷದ ಕನ್ನಡ ರಾಜ್ಯೋತ್ಸವ ಇದಾಗಿದ್ದು, 63 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ ಎನ್ನಲಾಗಿದೆ. ಆದರೆ ಸರ್ಕಾರವು ಪಟ್ಟಿ ಬಿಡುಗಡೆಗೆ ಆಲಸ್ಯ ತೋರುತ್ತಿದೆ.












Click it and Unblock the Notifications