ಜೂನ್ 19ರಂದು ರಾಜ್ಯಸಭೆ, ವಿಧಾನಪರಿಷತ್ ಚುನಾವಣೆ

ಬೆಂಗಳೂರು, ಮೇ 20 : ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆ ಎದುರಾಗಿದೆ. ಜೂನ್ 19ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಜೂನ್ 9 ಕೊನೆಯ ದಿನವಾಗಿದೆ.

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ಎಸ್.ಎಂ. ಕೃಷ್ಣ, ರಾಮಾಜೋಯಿಸ್, ಪ್ರಭಾಕರ ಕೋರೆ ಹಾಗೂ ಬಿ.ಕೆ. ಹರಿಪ್ರಸಾದ್ ಜೂ.24ರಂದು ನಿವೃತ್ತರಾಗಲಿದ್ದಾರೆ. ಈ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಪಿ.ಚಿದಂಬರಂ ಅವರು ಆಯ್ಕೆಯಾಗುವ ಸಾಧ್ಯತೆ ಇದೆ. [ಗೌಡರಿಂದ ತೆರವಾದ ಸ್ಥಾನಕ್ಕೆ ಈಶ್ವರಪ್ಪ]

Legislative Council

ವಿಧಾನಸಭೆಯಿಂದ ಪರಿಷತ್ತಿಗೆ ಆಯ್ಕೆಯಾದ ಸದಸ್ಯರಾದ ಬಿಜೆಪಿಯ ಕೆ. ಮೋನಪ್ಪ ಭಂಡಾರಿ, ಭಾರತಿ ಶೆಟ್ಟಿ, ಕೆ.ವಿ. ನಾರಾಯಣಸ್ವಾಮಿ, ಡಿ.ವಿ. ಸದಾನಂದಗೌಡ, ಸಿದ್ದರಾಜು, ಡಾ.ಎ.ಎಚ್.ಶಿವಯೋಗಿಸ್ವಾಮಿ ಹಾಗೂ ಜೆಡಿಎಸ್‌ ಪಕ್ಷದ ಎಂ.ಸಿ. ನಾಣಯ್ಯ ಅವರ ಅವಧಿ ಜೂನ್ 30ರಂದು ಮುಕ್ತಾಯವಾಗಲಿದೆ. ಆದ್ದರಿಂದ ರಾಜ್ಯಸಭೆ ಜೊತೆಗೆ ಪರಿಷತ್ತಿಗೂ ಮತದಾನ ನಡೆಯಲಿದೆ.

ವಿಧಾನಸಭೆಯಲ್ಲಿ 122 ಶಾಸಕರ ಬಲ ಹೊಂದಿರುವ ಕಾಂಗ್ರೆಸ್ ಪಕ್ಷ ನಾಲ್ಕು ಸದಸ್ಯರನ್ನು ಪರಿಷತ್ತಿಗೆ ಆಯ್ಕೆ ಮಾಡುವ ಅವಕಾಶವಿದೆ. ಉಳಿದ ಮೂರು ಸ್ಥಾನಗಳಲ್ಲಿ ತಲಾ ಒಂದು ಬಿಜೆಪಿ, ಒಂದು ಜೆಡಿಎಸ್‌ ಪಕ್ಷಕ್ಕೆ ದೊರೆಯಲಿದೆ. ಒಂದು ಸ್ಥಾನ ಉಳಿದ ಮತಗಳಿಗೆ ಹಂಚಿಕೆಯಾಗಲಿದ್ದು, ಇದನ್ನು ಯಾರು ಪಡೆಯುತ್ತಾರೆ ಎಂದು ಕಾದು ನೋಡಬೇಕಿದೆ.

ಚುನಾವಣೆ ವೇಳಾಪಟ್ಟಿ
ಜೂ.2ರಂದು - ಅಧಿಸೂಚನೆ ಪ್ರಕಟ
ಜೂ.9ರಂದು- ನಾಮಪತ್ರ ಸಲ್ಲಿಸಲು ಕೊನೆಯದ ದಿನ
ಜೂ.10ರಂದು - ನಾಮಪತ್ರಗಳ ಪರಿಶೀಲನೆ
ಜೂ.12 - ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ
ಜೂ.19 - ಮತದಾನ (ಬೆಳಗ್ಗೆ 9ರಿಂದ ಸಂಜೆ 4ಗಂಟೆ )
ಜೂ.19- ಮತ ಎಣಿಕೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+