Breaking: ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ

ಬೆಂಗಳೂರು, ಜೂ 2: ರಾಜ್ಯಸಭೆಗೆ ಜೂ.10 ರಂದು ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿದೆ.

ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 106ರಲ್ಲಿ ಜೂ.10 ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ರಾಜ್ಯಸಭೆ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆ. ನಮ್ಮ ಪಕ್ಷದಿಂದ ಸ್ಪರ್ಧಿಸಿರುವ ಅಧಿಕೃತ ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕಿರುವುದರಿಂದ ತಾವುಗಳು ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಧರ್ಮಸಿಂಗ್ ಎಲ್ಲಾ ಶಾಸಕರಿಗೂ ಗುರುವಾರವೇ ವಿಪ್ ಜಾರಿ ಮಾಡಿದ್ದಾರೆ.

ರಾಜ್ಯಸಭೆಯ ಒಟ್ಟು ನಾಲ್ಕು ಸ್ಥಾನಗಳ ಪೈಕಿ ಕಾಂಗ್ರೆಸ್ ಎರಡು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಮೊದಲ ಅಭ್ಯರ್ಥಿಯಾಗಿ ಜಯರಾಮ್ ರಮೇಶ್ ಮತ್ತು ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಆಲಿ ಖಾನ್ ಅವರು ಕಣದಲ್ಲಿದ್ದಾರೆ. ಇದರಲ್ಲಿ ಜಯರಾಮ್ ರಮೇಶ್ ಆಯ್ಕೆ ಖಚಿತವಾಗಿದೆ. ಮನ್ಸೂರ್ ಆಲಿ ಖಾನ್ ಗೆಲ್ಲಬೇಕಾದರೆ ಇತರೆ ಕಾಂಗ್ರೆಸ್ ಜೊತೆಗೆ ಇತರೆ ಪಕ್ಷದ ಶಾಸಕರ ನೆರವು ಸಹ ಅಗತ್ಯವಿದೆ. ನಾಮಪತ್ರ ಹಿಂತೆಗೆದುಕೊಳ್ಳಲು ಗುರುವಾರ ಮಧ್ಯಾಹ್ನ ಕೊನೆಯ ದಿನವಾಗಿತ್ತು. ಆದರೆ, ಯಾವುದೇ ಕಾರಣಕ್ಕೂ ಮನ್ಸೂರ್ ಆಲಿ ಖಾನ್ ನಾಮಪತ್ರ ವಾಪಸ್ ಪಡೆಯುವುದಿಲ್ಲ ಎಂದು ಸಿದ್ದರಾಮಯ್ಯ ಮಾಧ್ಯಮಗೋಷ್ಠಿ ನಡೆಸಿ ಸ್ಪಷ್ಟಪಡಿಸಿದ್ದಾರೆ.

Rajya Sabha election: Whip issue for Karnataka Congress MLAs

Recommended Video

      Kshama Bindu ತನ್ನನ್ನು ತಾನೇ ಮದುವೆಯಾಗುತ್ತಿರುವುದು ಹೀಗೆ | OneIndia Kannada

      ಈ ಮಧ್ಯೆ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸಹ ಕಾಂಗ್ರೆಸ್ ಶಾಸಕರ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಕುದುರೆ ವ್ಯಾಪಾರ ನಡೆದರೆ ಕಾಂಗ್ರೆಸ್ ಮತಗಳು ಚದುರಬಾರದು ಎಂಬ ಉದ್ದೇಶದಿಂದ ಈಗಲೇ ವಿಪ್ ಜಾರಿ ಮಾಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+