Breaking: ರಾಜ್ಯಸಭೆ ಚುನಾವಣೆ: ಕಾಂಗ್ರೆಸ್‌ಗೆ ಮತ ಹಾಕಿದ ಜೆಡಿಎಸ್ ಶಾಸಕ

ಬೆಂಗಳೂರು, ಜೂ. 10: ರಾಜ್ಯಸಭೆ ಚುನಾವಣೆಯ ಮತದಾನದಲ್ಲಿ ಮೊದಲ ಅಡ್ಡಮತದಾನವೊಂದು ದಾಖಲಾಗಿದ್ದು, ಜೆಡಿಎಸ್ ಶಾಸಕರೊಬ್ಬರು ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದಾರೆ.

ರಾಜ್ಯಸಭೆ ಚುನಾವಣೆ ಸಂಬಂಧ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ನಡೆಯುತ್ತಿರುವ ಮತದಾನ ಪ್ರಕ್ರಿಯೆಯಲ್ಲಿ ಕೋಲಾರ ಶಾಸಕ ಶ್ರೀನಿವಾಸಗೌಡ ಅವರು ಕಾಂಗ್ರೆಸ್ ಪರ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮತ ಚಲಾವನೆಯ ಬಳಿಕ ಪೋಲಿಂಗ್ ಏಜೆಂಟರಿಗೆ ಯಾರಿಗೆ ಮತ ಹಾಕಿದ್ದೇವೆ ಎಂಬುದನ್ನು ತೋರಿಸುವ ಸಂದರ್ಭದಲ್ಲಿ ಶ್ರೀನಿವಾಸಗೌಡ ಅವರು ಕಾಂಗ್ರೆಸ್ ಪರ ತಮ್ಮ ಮತ ಚಲಾಯಿಸಿರುವುದು ಗೊತ್ತಾಗಿದೆ.

Rajya Sabha Election Karnataka : Kolar JDS MLA Srinivas Gowda Cross Vote to Congress Candidate

ಮತದಾನದ ಬಳಿಕ ಮಾಧ್ಯಮ ಪ್ರತಿನಿಧಿಗಳನ್ನು ಈ ಸಂಬಂಧ ಪ್ರಶ್ನಿಸಿದಾಗ, "ಅದನ್ನೆಲ್ಲಾ ಇಲ್ಲಿ ಹೇಳುವುದಕ್ಕೆ ಆಗುವುದಿಲ್ಲ. ಮತದಾನದ ಕೌಂಟಿಂಗ್ ನಡೆದಾಗ ನಿಮಗೇ ತಿಳಿಯುತ್ತದೆ," ಎಂದು ಹೇಳಿದರು.

ಕುಮಾರಸ್ವಾಮಿ ಅವರನ್ನು ಟೀಕಿಸಿದ್ದ ಶ್ರೀನಿವಾಸಗೌಡ:

ಶ್ರೀನಿವಾಸಗೌಡ ಜಡಿಎಸ್ ಶಾಸಕರಾದರೂ ಸಹ ಕಳೆದೊಂದು ವರ್ಷದಿಂದಲೂ ಜೆಡಿಎಸ್ ನಾಯಕರನ್ನು ಟೀಕಿಸುತ್ತಾ, ಕಾಂಗ್ರೆಸ್ ನಾಯಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಸ್ಥಳೀಯ ಕಾರ್ಯತಕರ್ತರಲ್ಲಿ ವೈರತ್ವ ಬೆಳಸಿಕೊಂಡಿದ್ದಾರೆ.

"ಕೋಲಾರ ಜಿಲ್ಲೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಕೆಸಿ ವ್ಯಾಲಿ ನೀರು ತರುವ ಮೂಲಕ ಜಿಲ್ಲೆಗೆ ಕೊಡುಗೆ ನೀಡಿದ್ದಾರೆ. ಜಿಲ್ಲೆಯಲ್ಲಿ ಅವರ ಹೆಸರು ಶಾಶ್ವತವಾಗಿದೆ. ಆದರೆ, ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವರು ಅದನ್ನು ಕೊಳಚೆ ನೀರು ಹೀಗಳೆದಿದ್ದಾರೆ. ನಾನು ಜೆಡಿಎಸ್‌ನಲ್ಲಿ ಅನಿವಾರ್ಯವಾಗಿ ಜೆಡಿಎಸ್ ನಲ್ಲಿ ಇದ್ದೇನೆ," ಎಂದು ಹೇಳಿದ್ದರು. ಇದು ಸ್ಥಳೀಯ ನಾಯಕರಲ್ಲಿ ಬೇಸರ ಮೂಡಿಸಿತ್ತು.

ಐ ಲವ್ ಕಾಂಗ್ರೆಸ್:

Recommended Video

      Rajyasabha Election ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ | Oneindia Kannada

      "ನಾನು ಕಾಂಗ್ರೆಸ್‌ಗೆ ಮತ ಹಾಕಿದ್ದೇನೆ. ಕಾರಣ ನಾನು ಕಾಂಗ್ರೆಸ್‌ ಲವ್ ಮಾಡುತ್ತೇನೆ," ಎಂದು ಶ್ರೀನಿವಾಸಗೌಡ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+