'ಅವರಿಂದಲೇ ನಾನು ಹೀಗೆ ಇರೋದು.. 'ಎಂದು ಭಾವುಕರಾದ ರಾಜೇಶ್ವರಿ ತೇಜಸ್ವಿ

Recommended Video

      ಪೂರ್ಣಚಂದ್ರ ತೇಜಸ್ವಿ ಅವರ 81 ನೇ ಹುಟ್ಟು ಹಬ್ಬ | Oneindia Kannada

      ಚಿಕ್ಕಮಗಳೂರು, ಸೆಪ್ಟೆಂಬರ್.08: ಇಂದು ಕಾಡಿನ‌ಸಂತ, ಕನ್ನಡ ಸಾಹಿತ್ಯ ಲೋಕದ ಮೇರು ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ 81ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ರಾಜೇಶ್ವರಿ ತೇಜಸ್ವಿ ಅವರು ತೇಜಸ್ವಿಯವರ ಕುರಿತಾಗಿ ಮನದಾಳದ ಮಾತುಗಳನ್ನು ಒನ್ ಇಂಡಿಯಾ ಜೊತೆ ಹಂಚಿಕೊಂಡದ್ದು ಹೀಗೆ...

      "ತೇಜಸ್ವಿಯವರು ಬದುಕಿದ್ದಾರೆ ಎಂದೇ ನಾನು ಬದುಕುತ್ತಿದ್ದೇನೆ. ಅವರಿಲ್ಲ ಎಂದು ನಾನೂ ಯಾವಾಗಲೂ ಅಂದುಕೊಂಡೇ ಇಲ್ಲ. ಇಂದಿಗೂ ರಾಜ್ಯದ ಮೂಲೆ ಮೂಲೆಗಳಿಂದ ತೇಜಸ್ವಿ ಅಭಿಮಾನಿಗಳು ಈ ಮನೆಗೆ ಬರುತ್ತಲೇ ಇರುತ್ತಾರೆ. ಅವರ ಪ್ರೀತಿ ಕಂಡು ನನಗೆ ಹೃದಯ ತುಂಬಿ ಬರುತ್ತದೆ.

      ತೇಜಸ್ವಿ ಬರೆದ 'ಕರ್ವಾಲೋ' ಎಲ್ಲರಿಗೂ ಅಚ್ಚುಮೆಚ್ಚು. ಅದೊಂದು ಕನ್ನಡದ ಕ್ಲಾಸಿಕ್ ಕೃತಿ. ಆ ಕಥೆಯಲ್ಲಿ ಬರುವ ಎಲ್ಲಾ ವಿಷಯಗಳು ಚೆನ್ನಾಗಿವೆ. ಪರಿಸರ ಸಂರಕ್ಷಣೆ, ಜೀವ ಸಂಕುಲದ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದಾರೆ.

      Rajeshwari Tejasvi says I always think they are alive

      'ಕರ್ವಾಲೋ' ದಲ್ಲಿ ಸಾಂಕೇತಿಕವಾಗಿ ಹಾರುವ ಓತಿ ಇಟ್ಟುಕೊಂಡು ಬರೆದಿರುವ ಪ್ರತಿಯೊಂದು ಅಂಶವೂ ಚೆನ್ನಾಗಿ ಬಂದಿದೆ. ಅದನ್ನು ಅವರು ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ಕುಳಿತು ಬರೆದಿದ್ದರು. ಅದಕ್ಕೆ ಇವತ್ತಿಗೂ ಆ ದೀಪವನ್ನು ಆಂಟಿಕ್ ತರಹ ಹಾಗೆಯೇ ಜೋಪಾನವಾಗಿ ಸಂರಕ್ಷಿಸಿಟ್ಟುಕೊಂಡಿದ್ದೇನೆ.

      ಇವತ್ತಿಗೆ ಅವರಿಂದಲೇ ನಾನು ಹೀಗೆ ಇರೋದು ಎಂದು ಯಾವಾಗಲೂ ಅನಿಸುತ್ತೆ "ಎಂದು ಹಳೆಯ ನೆನಪುಗಳನ್ನು ಬಿಚ್ಚಿಡುತ್ತಾ ಭಾವುಕರಾದರು ರಾಜೇಶ್ವರಿ ತೇಜಸ್ವಿ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+