ಕರ್ನಾಟಕದ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್: 3 ದಿನ ಸುರಿಯಲಿದೆ ಭಾರಿ ಮಳೆ
ಬೆಂಗಳೂರು, ಸೆಪ್ಟೆಂಬರ್ 10: ಕರ್ನಾಟಕದ 8 ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಇಂದಿನಿಂದ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಚಿಸಲಾಗಿದ್ದು, ಬಳಿಕ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ.
ಕರಾವಳಿ ಕರ್ನಾಟಕದಲ್ಲಿ 10-13, ದಕ್ಷಿಣ ಒಳನಾಡಿನಲ್ಲಿ ಸೆಪ್ಟೆಂಬರ್ 10-11ರಂದಿ ಧಾರಾಕಾರ ಮಳೆಯಾಗಲಿದೆ.ಬೆಳಗಾವಿ ಏರ್‌ಪೋರ್ಟ್‌ನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಚಿತ್ತಾಪುರ, ಆನೇಕಲ್, ಕೆಆರ್ ನಗರ, ಕಂಪ್ಲಿ, ಕಿಬ್ಬನಹಳ್ಳಿ, ತುಮಕೂರಿನಲ್ಲಿ ಹೆಚ್ಚು ಮಳೆಯಾಗಿದೆ.

ಬಸವನಬಾಗೇವಾಡಿ, ಶಿರಾ, ಹೊಸಕೋಟೆ, ಮುದ್ದೇಬಿಹಾಳ, ಕೊಟ್ಟಿಗೆಹಾರ, ಚಿಕ್ಕನಾಯಕನಹಳ್ಳಿ, ವಿಜಯಪುರ, ಲಿಂಗಸುಗೂರು, ವಿರಾಜಪೇಟೆ, ಮುಲ್ಕಿ, ಕಲಬುರಗಿ, ಕುಶಾಲನಗರ, ನೆಲಮಂಗಲ, ಭರಮಸಾಗರ, ಕಡೂರು, ಅಜ್ಜಂಪುರ, ಬಂಡೀಪುರ, ಕೊಲ್ಲೂರು, ಹೊಳಲ್ಕೆರೆ, ರಾಮನಗರ, ತರೀಕೆರೆ, ಲಕ್ಕವಳ್ಳಿ, ಆನವಟ್ಟಿ, ಕೆಂಭಾವಿ, ಕೊಟ್ಟೂರು, ಮೊಣಕಾಲ್ಮೂರರಿನಲ್ಲಿ ಮಳೆಯಾಗಿದೆ.
ಬೆಂಗಳೂರಿನಲ್ಲಿ ಗರಷ್ಠ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ. ಮಂಗಳವಾರ ಹಾಗೂ ಬುಧವಾರ ಇಡೀ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಮಳೆ ಸುರಿದಿದ್ದು, ಪ್ರವಾಹದಂತಹ ಸ್ಥಿತಿಯನ್ನು ನಿರ್ಮಾಣ ಮಾಡಿದೆ.












Click it and Unblock the Notifications