Karnataka Rain: ಮಳೆ.. ಮಳೆ.. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆ ಕಾಟ...

ಮಳೆ ಸುರಿಯುತ್ತಿರುವ ರೀತಿ ನೋಡಿದರೆ ಅದು ಯಾವ ಕೇಡುಗಾಲ ಬಂದಿದೆಯೋ ಅಂತಾ ಇದೀಗ ಹಿರಿಯರು ಬೇಸರ ಹೊರ ಹಾಕುತ್ತಿದ್ದಾರೆ. ಯಾಕಂದ್ರೆ, ಚಳಿಗಾಲ ಬಂದರೂ ಮಳೆ ತನ್ನ ಆರ್ಭಟ ನಿಲ್ಲಿಸುತ್ತಿಲ್ಲ. ಮಳೆಯ ಆರ್ಭಟ ಕಡಿಮೆ ಆಗುವ ಬದಲು ಹೆಚ್ಚಾಗ್ತಾ ಇದ್ದು ಆತಂಕದ ವಾತಾವರಣ ನಿರ್ಮಾಣ ಆಗಿದೆ. ಮತ್ತೊಂದು ಕಡೆ, ಇನ್ನೇನು ಮಳೆ ಸೈಲೆಂಟ್ ಆಗೋಯ್ತು ಬಿಡು ಅನ್ನುವಾಗಲೇ ಮತ್ತೆ ಮಳೆಯ ಭಯ ಕಾಡುತ್ತಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆ ಕಾಟ...

ಹೌದು, ಸಾಮಾನ್ಯವಾಗಿ ಬಂಗಾಳ ಕೊಲ್ಲಿ & ಅರಬ್ಬೀ ಸಮುದ್ರ ಭಾಗದಲ್ಲಿ ಸೈಕ್ಲೋನ್ ಅಥವಾ ವಾಯುಭಾರ ಕುಸಿತದ ಘಟನೆಗಳು ಕಡಿಮೆ. ಆದರೆ ಈ ವರ್ಷ ಭಾರತದ ಪಾಲಿಗೆ ಅದ್ರಲ್ಲೂ ದಕ್ಷಿಣ ಭಾರತದ ಪಾಲಿಗೆ ಬಂಗಾಳ ಕೊಲ್ಲಿ ಪ್ರದೇಶವೇ ಶತ್ರುವಾಗಿದೆ. ಯಾಕಂದ್ರೆ ಈ ಪ್ರದೇಶ ಪದೇ ಪದೇ ವಾಯುಭಾರ ಕುಸಿತದ ಪರಿಣಾಮಕ್ಕೆ ಸಿಲುಕುತ್ತಿದೆ. ಅದೇ ರೀತಿ ಈಗಲೂ ಅದೇ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣ ಗೋಚರಿಸಿದ್ದು, ಈಗಾಗಲೇ ಭಾರಿ ದೊಡ್ಡ ಪ್ರಮಾಣದ ಮಳೆ ಮೋಡಗಳು ಸುತ್ತಮುತ್ತಲೂ ಆವರಿಸಿವೆ!

Rainfall Chances To Karnataka State After 2nd January 2025

ಮಳೆ.. ಮಳೆ.. ಭರ್ಜರಿ ಮಳೆ!

ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಇನ್ನೂ ಮಳೆಯ ಆರ್ಭಟ ನಿಂತಿಲ್ಲ, ಈ ಕಾರಣಕ್ಕೆ ಚೆನ್ನೈ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಈಗಲೂ ಮೋಡ ಮುಸುಕಿದ ವಾತಾವರಣ ಇದೆ. ಈ ನಡುವೆ ಶ್ರೀಲಂಕಾ ಸೇರಿದಂತೆ ತಮಿಳುನಾಡು ಗಡಿ ಭಾಗದಲ್ಲಿ ಮಳೆ ಜೋರಾಗಿ ಬರ್ತಿದೆ. ಈಗಿನ ಪರಿಸ್ಥಿತಿ ನೋಡಿದರೆ ಮಳೆಯ ಮೋಡಗಳು ಕರ್ನಾಟಕದ ಕಡೆಗೆ ಬರುವ ಮುನ್ಸೂಚನೆ ಇಲ್ಲ. ಆದರೆ ಅಕಸ್ಮಾತ್ ಸ್ವಲ್ಪ ಹೆಚ್ಚುಕಮ್ಮಿ ಆದರೂ ಪರಿಸ್ಥಿತಿ ಕೈಮೀರಿ ಮತ್ತೆ ಮಳೆ ಬರುವ ಭಯ ಕಾಡ್ತಿದೆ!

ಬೆಳೆ ಕಳೆದುಕೊಳ್ಳುವ ಭಯದಲ್ಲಿ ರೈತರು

ಅಕಾಲಿಕ ಮಳೆ ಸುರಿದ ಪರಿಣಾಮ ಈಗಾಗಲೇ ರೈತರು ಸಾಕಷ್ಟು ಬೆಳೆಯನ್ನು ಕಳೆದುಕೊಂಡು ಚಿಂತೆ ಮಾಡುವಂತೆ ಆಗಿದೆ. ಇಂತಹ ಸಮಯದಲ್ಲೇ ಮತ್ತಷ್ಟು ಮಳೆ ಸುರಿಯುವ ಭಯವೂ ಇದ್ದು, ಹಿಂದೂ ಮಹಾಸಾಗರ & ಬಂಗಾಳ ಕೊಲ್ಲಿ ಭಾಗದಲ್ಲಿ ಆವರಿಸಿರುವ ಮಳೆ ಮೋಡಗಳು ಬೆಂಗಳೂರಿನ ಕಡೆಗೆ ತಿರುಗುವ ಆತಂಕ ಕಾಡುತ್ತಿದೆ. ಮುಂದಿನ 72 ಗಂಟೆಗಳಲ್ಲಿ ಈ ಮಳೆ ಮೋಡಗಳು ಮರೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಇನ್ನೂ 72 ಗಂಟೆಗಳ ಕಾಲ ಮಳೆಯ ಭಯ ಇದ್ದೇ ಇರಲಿದೆ.

ಒಟ್ನಲ್ಲಿ ಮಳೆ ಬರಬೇಕಾದ ಸಮಯದಲ್ಲಿ ಕೈಕೊಟ್ಟು ಹೋಗುತ್ತಿದ್ದು, ಮಳೆ ಬೇಡವಾಗಿರುವ ಸಮಯದಲ್ಲಿ ಭಾರಿ ಮಳೆ ಸುರಿದು ಸಮಸ್ಯೆ ಮಾಡುತ್ತಿದೆ. ಇದು ರೈತರಿಗೆ ಮಾತ್ರವಲ್ಲ ಅತ್ತ ನಗರ ಪ್ರದೇಶಗಳಲ್ಲಿ ಕೂಡ ಹಲವು ರೀತಿಯ ಸಮಸ್ಯೆ ಮಾಡುತ್ತಿದೆ. ಹೀಗಾಗಿ ಮಳೆ ನಿಲ್ಲಲಿ ದೇವರೆ ಅಂತಾ ಜನರು ಕೂಡ ಈಗ ಬೇಡುವಂತೆ ಆಗಿದೆ. ಶ್ರೀಲಂಕಾ ಈಗಾಗಲೇ ಅಕಾಲಿಕ ಮಳೆಗೆ ಕೊಚ್ಚಿ ಹೋಗಿದೆ, ತಮಿಳುನಾಡು ರಾಜಧಾನಿ ಚೆನ್ನೈ ಕೂಡ ನಲುಗಿ ಹೋಗಿದೆ.

ಪ್ರಕೃತಿ ಮೇಲೆ ಮನುಷ್ಯರ ದೌರ್ಜನ್ಯ?

ಭೂ ತಾಯಿ ಮೇಲೆ ಮನುಷ್ಯರ ದೌರ್ಜನ್ಯ ಹೆಚ್ಚಾದಷ್ಟೂ ಪ್ರಾಕೃತಿಕ ವಿಕೋಪಗಳು ಕೂಡ ಈಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇವೆ. ಅದ್ರಲ್ಲೂ ಮನುಷ್ಯರು ಭೂಮಿ ಮೇಲೆ ತಮ್ಮ ದೌರ್ಜನ್ಯ ಮತ್ತಷ್ಟು ಹೆಚ್ಚು ಮಾಡಿದ್ದು, ಇದನ್ನು ಸಹಿಸದ ಭೂಮಿಯು ಮನುಷ್ಯರ ಎಡವಟ್ಟಿಗೆ ತಕ್ಕನಾದ ಶಿಕ್ಷೆ ನೀಡುತ್ತಿದೆ. ಚಂಡಮಾರುತ, ಅಕಾಲಿಕ ಮಳೆ, ವಾಯುಭಾರ ಕುಸಿತದ ನಡುವೆ ಮನುಷ್ಯ ತತ್ತರಿಸಿ ಹೋಗುವ ಸ್ಥಿತಿ ನಿರ್ಮಾಣ ಆಗಿದೆ. ಮತ್ತೊಂದು ಕಡೆ ರೈತರು ಬೆಳೆ ಕಳೆದುಕೊಂಡು ಪರದಾಡುತ್ತಿದ್ದು, ಈ ಸಮಯದಲ್ಲಿ ಸರ್ಕಾರ ನೆರವಿಗೆ ಬರುತ್ತೆ ಎಂಬ ನಿರೀಕ್ಷೆಯಲ್ಲಿ ಕೃಷಿಕರು ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+