Cauvery Dispute: ರಾಜ್ಯದ ಸಂಕಷ್ಟವನ್ನು ಸೂತ್ರ ಮಾಡಿಕೊಳ್ಳಲಿರುವ ಕರ್ನಾಟಕ

ಬೆಂಗಳೂರು, ಆಗಸ್ಟ್ 28: ಶತಮಾನದಷ್ಟು ಹಳೆಯದಾದ ಕಾವೇರಿ ನೀರು ಹಂಚಿಕೆಯ ವಿವಾದ ಮತ್ತೆ ಉದ್ವಿಗ್ನ ಸ್ವರೂಪ ಪಡೆಯುತ್ತಿದೆಯೋ ಎಂದು ಭಾಸವಾಗುತ್ತಿದೆ. ಕಾರಣ ಕರ್ನಾಟಕದಿಂದ ತಮಿಳುನಾಡಿಗೆ ಬಿಡಬೇಕಾದ ಕಾವೇರಿ ನೀರಿನ ಪ್ರಮಾಣ ಕುರಿತು ನಿಯೋಜಿತ ತಜ್ಞರ ಸಮಿತಿಯ ವರದಿಯನ್ನು ಪರಿಶೀಲಿಸುವವರೆಗೆ ಆದೇಶ ನೀಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಎಚ್ಚರಿಕೆ ಕ್ರಮ ಕೈಗೊಂಡಿದೆ.

ಕಾವೇರಿ ಜಲಾಶಯದಲ್ಲಿ ಮಳೆ ಕೊರೆತೆಯಿಂದ ನೀರಿಕ್ಷಿತ ನೀರು ಇಲ್ಲ ಎಂಬ ಕಾರಣದಿಂದ ದೈನದಂದಿನವಾಗಿ 15,000 ಕ್ಯೂಸೆಕ್ ನೀರು ಬಿಡಲು ಸಾಧ್ಯವಾಗುವುದಿಲ್ಲ ಎಂದು ಕರ್ನಾಟಕ ಹೇಳಿತ್ತು. ಇದರ ವಿರುದ್ಧ ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ವೇಳೆ ಕೋರ್ಟ್ ಹೀಗೆ ನಿರ್ಣಯಿಸಿತು.

rain-water-shortage-formula

ಈ ವರ್ಷದ ಮುಂಗಾರು ನಿರೀಕ್ಷೆಯಷ್ಟು ಆಗದ ಹಿನ್ನೆಲಯಲ್ಲಿ ಬರಗಾಲದ ಛಾಯೆ ಆವರಿಸಿದೆ. ಈ ಮಳೆ ಕೊರತೆಯು ಶತಮಾನದಷ್ಟು ಹಳೆಯದಾದ ಕಾವೇರಿ ನೀರು ವಿವಾದದಲ್ಲಿ ಮತ್ತೆ ಜೀವಂತವಾಗಲು ಕಾರಣವಾಗಿದೆ. ಇನ್ನೂ ನ್ಯಾಯಾಲಯದಲ್ಲಿ ಕಾವೇರಿ ನದಿ ನೀರು ಹಂಚಿಕೆಯ ಕುರಿತು ಉಭಯ ರಾಜ್ಯಗಳು ಸಮರ್ಥ ವಾದ ಮಂಡನೆ ಮಾಡಿವೆ.

ನೀರಿನ ಕೊರತೆ ಬಗ್ಗೆ ವಿವರಿಸಲಿರುವ ಸರ್ಕಾರ

ಸದ್ಯ ತಮಿಳುನಾಡು ನೀರಿನ ಅಗತ್ಯತೆ ಕುರಿತು ಈ ಹಿಂದೆ ಮನವರಿಕೆ ಮಾಡಿತ್ತು. ಇದೀಗ ಕರ್ನಾಟಕ ಸರ್ಕಾರ ಮಳೆ ಕೊರತೆಯಿಂದ ಉಂಟಾದ 'ಸಂಕಷ್ಟವನ್ನು ಸೂತ್ರವಾಗಿ ಇಟ್ಟುಕೊಂಡು ನ್ಯಾಯಾಲಯಕ್ಕೆ ವಿವರಿಸಲು ಸಿದ್ಧವಾಗಿದೆ ಎನ್ನಲಾಗಿದೆ.

ಅಂದರೆ ಯಾವ ಯಾವ ವರ್ಷ ಮಳೆ ಕೊರತೆ ಉಂಟಾಗಿತ್ತು. ಆ ಎಲ್ಲ ಮಾಹಿತಿ ಆಧಾರದಲ್ಲಿ ಕಾವೇರಿ ನದಿ ನೀರಿನ ಹಂಚಿಕೆಯ ಪ್ರಮಾಣವನ್ನು ಅತ್ಯಗತ್ಯವಾಗಿ ವಿವರಿಸಲಿದೆ. ಮತ್ತೊಂದೆಡೆ ನೆರೆ ರಾಜ್ಯ ತಮಿಳುನಾಡಿನ ಕಾವೇರಿ ನೀರಿನ ಎಷ್ಟು ಎಂಬುದರ ಮೇಲೆ ಬೆಳಕು ಚೆಲ್ಲಲಿದೆ.

rain-water-shortage-formula

ಎರಡು ರಾಜ್ಯಗಳ ಮಧ್ಯದಲ್ಲಿರುವ ಕಾವೇರಿ ನೀರು ಹಂಚಿಕೆ ವಿಚಾರ ತೀರಾ ಹಳೆಯದು. ಇದನ್ನು ಅತ್ಯಂತ ತೀವ್ರವಾದ ಜಲ ವಿವಾದಗಳಲ್ಲಿ ಒಂದು ಅಂತಲೂ ಕರೆಯುತ್ತಾರೆ.

ನಿತ್ಯ 5,000 ಕ್ಯೂಸೆಕ್ ನೀರು ಹರಿಸಲು ರಾಜ್ಯಕ್ಕೆ ಸೂಚನೆ

ತಮಿಳುನಾಡು ರಾಜ್ಯಕ್ಕೆ ಪ್ರತಿ ನಿತ್ಯ 5000 ಕ್ಯೂಸೆಕ್ ನೀರು ಹರಿಸಲು ಕರ್ನಾಟಕ ಸರ್ಕಾರಕ್ಕೆ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸೂಚನೆ ನೀಡಿದೆ. ಈ ಮೂಲಕ ರಾಜ್ಯಕ್ಕೆ ತುಸು ಹಿನ್ನಡೆ ಆಗಿದೆ ಎನ್ನಬಹುದು. ಸೂಚನೆ ಪ್ರಕಾರ ಮುಂದಿನ 15 ದಿನ ನಿತ್ಯ 5000 ಕ್ಯೂಸೆಕ್ ನೀರು ಹರಿಸಬೇಕಿದೆ.

ಕರ್ನಾಟಕ ರಾಜ್ಯ ತಮಿಳುನಾಡಿಗೆ 1900 ಕ್ಯೂಸೆಕ್‌ ನೀರು ಹರಿಸುತ್ತಿದ್ದು, ಇದೀಗ ಹೆಚ್ಚುವರಿಯಾಗಿ 3,100 ಕ್ಯೂಸೆಕ್ಸ್​ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯು ಕರ್ನಾಟಕಕ್ಕೆ ನಿರ್ದೇಶಿಸಿದೆ.

ಇದೇ ವಿಚಾರವಾಗಿ ನಾಳೆ ಮಂಗಳವಾರ ಬೆಂಗಳೂರಿನ ಶಾಸಕರ ಭವನದಲ್ಲಿ ತಜ್ಞರು, ನೀರಾವರಿ ತಜ್ಞರು, ಸಾಹಿತಿಗಳು, ರೈತ ಮುಖಂಡರು ಸಭೆ ನಡೆಸಿ ಚರ್ಚಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+