ಹಲವು ಜಿಲ್ಲೆಗಳಲ್ಲಿ ಮಳೆ, ಸಿಡಿಲು ಬಡಿದು ಇಬ್ಬರು ಅಸ್ವಸ್ಥ

ಬೆಂಗಳೂರು, ನವೆಂಬರ್ 20 : ಕರಾವಳಿ, ಉತ್ತರ ಕನ್ನಡ, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಮಳೆಯಾಗಿದೆ. ಉತ್ತರ ಕನ್ನಡದಲ್ಲಿ ಸಿಡಿಲು ಬಡಿದು ಇಬ್ಬರು ಅಸ್ವಸ್ಥಗೊಂಡಿದ್ದಾರೆ.

ಹಿಂಗಾರು ಮಳೆಯ ಭಾಗವಾಗಿ ಕರಾವಳಿ ಭಾಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ನಗರದಲ್ಲಿಯೂ ಮೋಡ ಕವಿದ ವಾತಾವರಣವಿದ್ದು, ಸುಡುವ ಬಿಸಿಲಿಲ್ಲ.

Rain to continue in Karnataka for 3 more days

ಮುಂದಿನ ಎರಡು-ಮೂರು ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. 'ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣ ವಾಗುತ್ತಿದೆ. ಆದ್ದರಿಂದ, ಚಳಿಯ ಅನುಭವವಾಗುತ್ತಿಲ್ಲ' ಎಂದು ಹವಾಮಾನ ಇಲಾಖೆ ಹಂಗಾಮಿ ನಿರ್ದೇಶಕ ಸುಂದರ್ ಎಂ.ಮೇತ್ರಿ ಹೇಳಿದ್ದಾರೆ.

ಸಿಡಿಲು ಬಡಿದು ಇಬ್ಬರು ಅಸ್ವಸ್ಥ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅಳ್ಳಂಕಿ ಗ್ರಾಮದಲ್ಲಿ ಸಿಡಿಲು ಬಡಿದು ನರಸಿಂಹ ಮಾಳು ನಾಯ್ಕ, ರಾಜೇಶ್ವರಿ ಎಂಬುವವರು ಅಸ್ವಸ್ಥಗೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ, ಮುಂಡಗೋಡದಲ್ಲಿ ಭಾನುವಾರ ಮಳೆಯಾಗಿದೆ. ಧಾರವಾಡ ನಗರ, ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿಯೂ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನ ನೆರಿಯದಲ್ಲಿ 39 ಮಿ.ಮೀ., ಪಣಂಬೂರಿನಲ್ಲಿ 38.5 ಮಿ.ಮೀ.ಮಳೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+