ಬೆಂಗಳೂರಿನಲ್ಲಿ ಮೇ 9ರವರೆಗೆ ಮಳೆ: ಎಲ್ಲೆಲ್ಲಿ ವರುಣ ತಂಪೆರೆಯಲಿದ್ದಾನೆ ತಿಳಿಯಿರಿ

ಬೇಸಿಗೆ ಬಿಸಿಲಿಗೆ ಹೈರಾಣಾಗಿದ್ದ ರಾಜ್ಯದ ಜನರಿಗೆ ವರುಣ ತಂಪೆರೆದಿದ್ದಾನೆ. ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿದೆಡೆ ಮಳೆಯಾಗುತ್ತಿದ್ದು ತಾಪಮಾನ ಕಡಿಮೆಯಾಗಿದೆ. ರಾಜ್ಯದಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಮೇ 9ರ ವರೆಗೆ ರಾಜ್ಯದ ಹಲವು ಪ್ರದೇಶಗಳಲ್ಲಿ ಮಳೆಯಾಗಲಿದೆ. ಮುಂದಿನ ಎರಡು ದಿನಗಳ ಕಾಲ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ಮುಂದಿನ 24 ಗಂಟೆಗಳಲ್ಲಿ ಕರಾವಳಿ ಎಲ್ಲ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು/ಮಿಂಚಿನ ಸಾಧ್ಯತೆಯಿದೆ. ಜೊತೆಗೆ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗಾಳಿಯ ವೇಗ ಪ್ರತಿ ಘಂಟೆಗೆ 30ರಿಂದ 40ಕಿ.ಮೀ. ಇರಲಿದ್ದು ಬಿರುಗಾಳಿ ಸಹಿತ ಗುಡುಗು/ಮಿಂಚಿನ ಸಾಧ್ಯತೆಯಿದೆ. ಇಂದು ಬೆಳಿಗ್ಗೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಾಗು ಉತ್ತರ ಒಳನಾಡಿನಲ್ಲಿ ಮಳೆಯಾಗಿದೆ.

ಬೆಂಗಳೂರಿನಲ್ಲಿ ಎರಡು ದಿನ ಮಳೆ ಮನ್ಸೂಚನೆ

ಮುಂದಿನ ಎರಡು ದಿನ (ಮೇ 9ರವರೆಗೆ) ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಕೂಡ ಇದೆ. ಈ ವೇಳೆ ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದ್ದು ರಾಜ್ಯದಲ್ಲಿ ಅತೀ ಹೆಚ್ಚಿನ ಉಷ್ಣಾಂಶ (42 ಡಿ.ಸೆ.) ಕಲಬುರ್ಗಿಯಲ್ಲಿ ದಾಖಲಾಗಿದೆ.

Rain Forecast Till May 9 in Many Parts of Karnataka

ಎಲ್ಲೆಲ್ಲಿ ಎಷ್ಟು ಮಳೆ?

ಮುಖ್ಯ ಮಳೆಯ ಪ್ರಮಾಣ (ಸೆಂ.ಮೀನಲ್ಲಿ): ಬೆಳ್ಳೂರು (ಮಂಡ್ಯ ಜಿಲ್ಲೆ) 6; ಕಾರ್ಕಳ (ಉಡುಪಿ ಜಿಲ್ಲೆ), ಮಧುಗಿರಿ (ತುಮಕೂರು ಜಿಲ್ಲೆ) ತಲಾ 5;

ಕೆಲವರಕೊಪ್ಪ, ಹಿರೇಕೆರೂರು (ಎರಡೂ ಹಾವೇರಿ ಜಿಲ್ಲೆ), ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ, ಬುಕ್ಕಪಟ್ಟಣ (ತುಮಕೂರು ಜಿಲ್ಲೆ), ಮೂರ್ನಾಡು (ಕೊಡಗು ಜಿಲ್ಲೆ) ತಲಾ 4;

ಧರ್ಮಸ್ಥಳ (ದಕ್ಷಿಣ ಕನ್ನಡ ಜಿಲ್ಲೆ), ಬನವಾಸಿ, ಸಿರ್ಸಿ ಆಗ್ರೋ (ಉತ್ತರ ಕನ್ನಡ ಜಿಲ್ಲೆ), ಸವಣೂರು (ಹಾವೇರಿ ಜಿಲ್ಲೆ), ಹೆಸರಘಟ್ಟ (ಬೆಂಗಳೂರು), ಹರಪ್ಪನಹಳ್ಳಿ (ದಾವಣಗೆರೆ ಜಿಲ್ಲೆ), ಮಾಗಡಿ (ರಾಮನಗರ ಜಿಲ್ಲೆ), ನಾಲಫಕ್ಲು(ಕೊಡಗು ಜಿಲ್ಲೆ), ಹೊಳೆನರಸೀಪುರ (ಹಾಸನ ಜಿಲ್ಲೆ) ತಲಾ 3; ಹೊನಾವರ,

Rain Forecast Till May 9 in Many Parts of Karnataka

ಸಿರ್ಸಿ ಪಿಡಬ್ಲುಡಿ (ಉತ್ತರ ಕನ್ನಡ ಜಿಲ್ಲೆ), ಮೂಡುಬಿದರೆ (ದಕ್ಷಿಣ ಕನ್ನಡ ಜಿಲ್ಲೆ), ಶಿಗ್ಗಾಂವ್ (ಹಾವೇರಿ ಜಿಲ್ಲೆ), ಹೊಸಕೋಟೆ (ಬೆಂಗಳೂರು ಗ್ರಾಮಾಂತರ), ಕಳಸ (ಚಿಕ್ಕಮಗಳೂರು ಜಿಲ್ಲೆ), ಮಳವಳ್ಳಿ (ಮಂಡ್ಯ ಜಿಲ್ಲೆ), ಕೊಟ್ಟ್ಊರು (ಬಳ್ಳಾರಿ), ಕೆಎಸ್‌ಎನ್‌ಡಿ ಕ್ಯಾಂಪಸ್ (ಬೆಂಗಳೂರು ನಗರ) ತಲಾ 2;

Rain Forecast Till May 9 in Many Parts of Karnataka

ಬೆಳ್ತಂಗಡಿ ಬಂಟ್ವಾಳ, ಉಪ್ಪಿನಂಗಡಿ(ದಕ್ಷಿಣ ಕನ್ನಡ ಜಿಲ್ಲೆ), ಮುಂಡುಗೋಡು, ಸಿದ್ದಾಪರು, (ಉತ್ತರ ಕನ್ನಡ), ಅಕ್ಕಿಆಲೂರು, ಗುತ್ತಲ್( ಹಾವೇರಿ), ಬೆಳ್ಳಟ್ಟಿ, ಲಕ್ಷ್ಮೇಶ್ವರ(ಗದಗ), ಉತ್ತರ ಹಳ್ಳಿ, ಬೆಂಗಳೂರು ಕೆಐಎಎಲ್, ಜಿಕೆವಿಕೆ, ಉಲಹಂಕ ಟಿಸಿ, (ಬೆಂಗಳೂರು ನಗರ) ತಿಪಟೂರು(ತುಮಕೂರು), ಸಂಡೂರು, ಹಡಗಲಿ( ಬಳ್ಳಾರಿ) ಚಿಂತಾಮಣಿ ಪಿಟಿಒ(ಚಿಕ್ಕಬಳ್ಳಾಪುರ) ಆನವಟ್ಟಿ(ಶಿವಮೊಗ್ಗ) ತಲಾ ಒಂಸು ಸೆಂ.ಮೀ ಮಳೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+