Rain Alert: ಮಳೆ ಬಂತು ಮಳೆ.. ಬೇಸಿಗೆ ಸಮಯದಲ್ಲೂ ಬೀಳಲಿದೆ ಮಳೆ!
ಮಳೆಗಾಗಿ ಭೂಮಿ ತಾಯಿ ಕಾದು ಕೂತಿದ್ದಾಳೆ, ಮಳೆ ಬೀಳದೆ ಇದ್ದರೆ ಪರಿಸ್ಥಿತಿ ಕೂಡ ಕೈಮೀರಿ ಹೋಗಲಿದೆ. ಪರಿಸ್ಥಿತಿ ಹೀಗೆ ಹದ್ದು ಮೀರಿ ಹೋಗಿರುವ ಸಮಯದಲ್ಲೇ, ಭರ್ಜರಿ ಸುದ್ದಿಯೊಂದು ಸಿಕ್ಕಿದೆ. ಅದು ಏನೆಂದರೆ ಈ ಪ್ರದೇಶದಲ್ಲಿ ಭರ್ಜರಿ ಮಳೆ ಬೀಳುವ ಎಲ್ಲಾ ಮುನ್ಸೂಚನೆ ಇದೀಗ ಸಿಕ್ಕಿದೆ. ಹಾಗಾದ್ರೆ ಎಲ್ಲೆಲ್ಲಿ ಮಳೆ ಬೀಳಲಿದೆ? ಕನ್ನಡಿಗರ ನೀರಿನ ಸಮಸ್ಯೆಗೆ ಮುಕ್ತಿ ಸಿಗಲಿದೆಯಾ? ಮಳೆ ಬೀಳುವ ಬಗ್ಗೆ ಭರ್ಜರಿ ಸುದ್ದಿ ತಿಳಿಯಲು ಮುಂದೆ ಓದಿ.
ಮನುಷ್ಯ ಪ್ರಕೃತಿ ಮೇಲೆ ಮಾಡುತ್ತಿರುವ ದೌರ್ಜನ್ಯಕ್ಕೆ, ಪ್ರಕೃತಿ ಕೂಡ ದೊಡ್ಡ ಮಟ್ಟದಲ್ಲಿ ರಿವೇಂಜ್ ತೆಗೆದುಕೊಳ್ಳುತ್ತಿದೆ. ಒಂದು ಕಡೆ ಕರ್ನಾಟಕ ರಾಜ್ಯವೂ ಸೇರಿದಂತೆ ದಕ್ಷಿಣ ಭಾರತ ಬಿರು ಬಿಸಿಲಿನಲ್ಲಿ ನರಳಿ ಹೋಗುತ್ತಿದೆ. ಇನ್ನೊಂದು ಕಡೆ ಉತ್ತರ ಭಾರತ ಮಳೆಯ ಏಟಿಗೆ ಥರ ಥರ ನಡುಗಿ ಹೋಗಿದೆ. ಈ ಸಮಯದಲ್ಲಿ ಹವಾಮಾನ ಇಲಾಖೆ ಕೂಡ, ಈಗ ಭರ್ಜರಿ ಮಳೆ ಬಗ್ಗೆ ಭಾರಿ ಮುನ್ಸೂಚನೆಯನ್ನ ನೀಡಿದೆ. ಹಾಗಾದ್ರೆ ಯಾವೆಲ್ಲಾ ಜಾಗದಲ್ಲಿ ಮಳೆ ಬೀಳಿದೆ? ಕರ್ನಾಟಕದಲ್ಲಿ ಯಾವಾಗ ಮಳೆಯ ಅಬ್ಬರ ಶುರುವಾಗುತ್ತೆ? ಮುಂದೆ ಓದಿ.

ಮಳೆ ಬೀಳುವ ಪ್ರದೇಶಗಳು ಇವು!
ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಪ್ರಕಾರ ಅಸ್ಸಾಂ & ಮೇಘಾಲಯದಲ್ಲಿ ಭಾರಿ ಮಳೆಯು ಬೀಳಲಿದೆ. ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಪಶ್ಚಿಮ ಬಂಗಾಳ & ಸಿಕ್ಕಿಂನ ಹಲವು ಪ್ರದೇಶದಲ್ಲಿ ಮಾರ್ಚ್ 28ನೇ ದಿನಾಂಕವಾದ ಇಂದು ಗುಡುಗು ಮತ್ತು ಮಿಂಚು ಸಹಿತ ಮಳೆ ಬೀಳುವ ನಿರೀಕ್ಷೆ ಇದೆ. ಹಾಗೇ ನಾಳೆಯೂ ಮಳೆ ಅಬ್ಬರ ಈ ಪ್ರದೇಶಗಳಲ್ಲಿ ಮುಂದುವರಿಯಲಿದ್ದು, ಕನ್ನಡಿಗರಿಗೆ ಕೂಡ ಮಳೆ ವಿಚಾರದಲ್ಲಿ ಗುಡ್ ನ್ಯೂಸ್ ಇನ್ನೇನು ಶೀಘ್ರದಲ್ಲೇ ಸಿಗಲಿದೆ. ಹಾಗಿದ್ರೆ ಕರ್ನಾಟಕದಲ್ಲಿ ಮಳೆ ಯಾವಾಗ ಬರುತ್ತೆ? ಮುಂದೆ ಓದಿ.
ಕರ್ನಾಟಕದಲ್ಲಿ ಭರ್ಜರಿ ಮಳೆ ಪಕ್ಕಾ!
ಈಗಾಗಲೇ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮೆಲ್ಲಗೆ ಮಳೆ ಸಿಂಚನ ಆಗುತ್ತಿದೆ ಅದೇ ರೀತಿ ಮಾರ್ಚ್ 31ರ ಬಳಿಕ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತೆ ಎಂಬ ಮುನ್ಸೂಚನೆ ನೀಡಲಾಗಿದೆ. ಈಗಿನ ವಾತಾವರಣದ ಪರಿಸ್ಥಿತಿ ಗಮನಿಸುತ್ತಿದ್ದರೆ ಮಲೆನಾಡು ಭಾಗ & ಕರಾವಳಿ ಪ್ರದೇಶ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತೆ ಎನ್ನಲಾಗಿದೆ. ಶಿವಮೊಗ್ಗ, ಮೈಸೂರು, ದಕ್ಷಿಣ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ಉತ್ತರ ಕನ್ನಡ, ಉಡುಪಿ ಸೇರಿ ಹಲವು ಜಿಲ್ಲೆಗಳಲ್ಲಿ ಮಾರ್ಚ್ 31 ರಿಂದ ಎರಡು ದಿನ ಮಳೆಯಾಗಲಿದೆ ಅಂತಾ ಮುನ್ಸೂಚನೆ ಸಿಕ್ಕಿದೆ.
ಒಟ್ನಲ್ಲಿ ಮಳೆಗಾಗಿ ಜನರು ಕಾದು ಕುಳಿತಿದ್ದಾರೆ, ಹೀಗಾಗಿ ಮಳೆ ಯಾವಾಗ ಬರುತ್ತಪ್ಪಾ ದೇವರೆ ಅಂತಾ ಕಾಯುತ್ತಿದ್ದಾರೆ ಜನ. ಹೀಗೆ ಕಾಯುತ್ತಿರುವ ಕನ್ನಡಿಗರಿಗೆ ಶೀಘ್ರದಲ್ಲೇ ಸಖತ್ ಸುದ್ದಿಯು ಸಿಗುವ ನಿರೀಕ್ಷೆ ಇದೆ. ಇನ್ನೊಂದು ಕಡೆ, ಶೀಘ್ರದಲ್ಲೇ ಮಳೆ ಬೀಳದೆ ಇದ್ದರೆ ಕನ್ನಡ ನಾಡಿನಲ್ಲಿ ಪರಿಸ್ಥಿತಿ ಕೈಮೀರಿ ಹೋಗಲಿದೆ. ಅದ್ರಲ್ಲೂ ಬೆಂಗಳೂರು ನಗರದ ಪರಿಸ್ಥಿತಿ ಪ್ರತಿ ದಿನಕ್ಕೂ ಭಾರಿ ಸಮಸ್ಯೆ ಕೊಡುತ್ತಿದೆ. ಹೀಗಾಗಿ ಆದಷ್ಟು ಬೇಗ ಮಳೆ ಬೀಳಬೇಕಿದೆ.
ಮಳೆ ಬರದೇ ಇದ್ದರೆ ಭಾರಿ ಸಮಸ್ಯೆ
ಬೇಸಿಗೆ ಸಮಯದಲ್ಲಿ ಭೂಮಿ ಕೊತ ಕೊತ ಕುದಿಯುತ್ತಾ ಇರುತ್ತದೆ. ಯಾಕೆ ಅಂದ್ರೆ, ಈ ಸಮಯಕ್ಕೆ ಭೂಮಿ ಸೂರ್ಯನಿಗೆ ಅತಿ ಸಮೀಪದಲ್ಲಿ ಹಾದು ಹೋಗುತ್ತದೆ. ಮೊದಲೇ ವಾತಾವರಣದಲ್ಲಿ ಭಾರಿ ಬದಲಾವಣೆ ಎದುರಾಗಿ ಜನ ಈಗ ಪರದಾಡುತ್ತಿದ್ದಾರೆ, ಪರಿಸ್ಥಿತಿ ಹೀಗಿದ್ದಾಗ ಕಳೆದ ವರ್ಷ ಮಳೆಯೇ ಬೀಳದೆ ಭೀಕರ ಬರ ಎದುರಾಗಿದೆ. ಹೀಗೆ ಎಲ್ಲಾ ಕೈಮೀರಿ ಹೋಗಿರುವಾಗಲೆ ಮಳೆರಾಯ ಒಂದಷ್ಟು ಕರುಣೆ ತೋರಿಸಿದ್ದಾನೆ. ವರುಣನ ಕರುಣೆ ಈ ರೀತಿ ಮುಂದುವರಿದರೆ ಸಾಕಪ್ಪಾ ಅಂತಿದ್ದಾರೆ ಕನ್ನಡ ನಾಡಿನ ಪ್ರಜೆಗಳು.
ಕರ್ನಾಟಕದ ಜನರಿಗೆ ನೀರು ಅನ್ನೋದು ಚಿನ್ನಕ್ಕೆ ಸಮಾನ ಆಗಿದೆ. ದಕ್ಷಿಣ ಕರ್ನಾಟಕದಿಂದ ಹಿಡಿದು, ಉತ್ತರ ಕರ್ನಾಟಕದ ತನಕ. ಮಲೆನಾಡಿನ ಜಿಲ್ಲೆಗಳಿಂದ ಹಿಡಿದು, ಕರಾವಳಿಯ ಭಾಗದ ತನಕ ಎಲ್ಲೆಲ್ಲೂ ನೀರಿಗೆ ಭಾರಿ ಸಂಕಷ್ಟ ಎದುರಾಗಿದೆ. ಪರಿಸ್ಥಿತಿ ಕೈಮೀರಿ ಹೋದ ಕಾರಣಕ್ಕೆ ಈಗ ಮಳೆ ಬೀಳಲೇಬೇಕು ಎನ್ನುವ ಪರಿಸ್ಥಿತಿ ಇದೆ. ಮತ್ತೊಂದು ಕಡೆ ಡ್ಯಾಂಗಳಲ್ಲಿ ಕೂಡ ನೀರು ಖಾಲಿ ಆಗಿ ಜಲಾಶಯಗಳು ಒಣಗಿ ಹೋಗುತ್ತಿವೆ. ಪರಿಸ್ಥಿತಿ ಕೈಮೀರಿ ಹೋದ ಸಮಯದಲ್ಲಿ ಮಳೆ ಬೀಳಲೇಬೇಕು ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಹಿನ್ನೆಲೆ ಇನ್ನು ಕೆಲವೇ ದಿನದಲ್ಲಿ ಮಳೆ ಬೀಳುವ ನಿರೀಕ್ಷೆ ಕೂಡ ಮೂಡಿದೆ.












Click it and Unblock the Notifications