Karnataka Rain: ಉತ್ತರ ಕರ್ನಾಟಕದ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಗುಡುಗು ಸಹಿತ ಮಳೆ- ಬೆಂಗಳೂರಿನ ಕತೆ ಏನು? ವರದಿ, ವಿವರ
ಬೆಂಗಳೂರು, ಆಗಸ್ಟ್ 26: ಬಿಸಿಲಿನಿಂದ ಕಂಗೆಟ್ಟಿರುವ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಇಂದು ಸಂಜೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಗಸ್ಟ್‌ನಲ್ಲಿ ಮಳೆ ಅಭಾವ ಕಾಣಿಸಿಕೊಂಡಿದೆ. ಆದರೆ, ಮುಂದಿನ ತಿಂಗಳು ರಾಜ್ಯದಾದ್ಯಂತ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇವತ್ತಿನ ಹವಾಮಾನದ ಪ್ರಕಾರ, ಉತ್ತರ ಒಳನಾಡಿನ ಧಾರವಾಡ, ಬಳ್ಳಾರಿ, ದಾವಣಗೆರೆ, ಗದಗ, ಕೊಪ್ಪಳ, ವಿಜಯನಗರ, ರಾಯಚೂರು, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ( ವಿಶೇಷವಾಗಿ ಘಾಟ್‌ಗಳು ) ಮತ್ತು ಮಲೆನಾಡು ಜಿಲ್ಲೆಗಳಲ್ಲಿ (ಮುಖ್ಯವಾಗಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ) ಚದುರಿದ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಚದುರಿದ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ಗಾಳಿಯ ಕುಸಿತ ಮತ್ತು ತೇವಾಂಶದ ಲಭ್ಯತೆಯ ಪೂರೈಕೆಯಿಂದಾಗಿ ಇಂದು ಸಂಜೆಯಿಂದ ತಡರಾತ್ರಿ ವರೆಗೆ ಬೆಂಗಳೂರು ನಗರದಾದ್ಯಂತ ಚದುರಿದ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ.
ಗರಿಷ್ಠ ಮಳೆಯಾಗಿರುವ ಜಿಲ್ಲೆಗಳ ಅಂಕಿಅಂಶ
ಬಾಗಲಕೋಟೆ: 43 ಮಿ.ಮೀ
ಉಡುಪಿ: 42.5 ಮಿ.ಮೀ
ಬೆಳಗಾವಿ: 35.5 ಮಿ.ಮೀ
ಉತ್ತರ ಕನ್ನಡ: 35 ಮಿ.ಮೀ
ಯಾದಗಿರಿ: 33.5 ಮಿ.ಮೀ
ಧಾರವಾಡ: 30.5 ಮಿ.ಮೀ
ಚಿಕ್ಕಮಗಳೂರು: 30 ಮಿ.ಮೀ
ಶಿವಮೊಗ್ಗ: 27 ಮಿ.ಮೀ
ಕಲಬುರಗಿ: 26 ಮಿ.ಮೀ
ವಿಜಯಪುರ: 24.5 ಮಿ.ಮೀ
ರಾಯಚೂರು: 23.5 ಮಿ.ಮೀ
ಕರ್ನಾಟಕದಲ್ಲಿ ಹೆಚ್ಚು ಮಳೆ ಬಿದ್ದಿರುವ ಟಾಪ್ 5 ಸ್ಥಳಗಳು
ಕೋಟಿಕಲ್ಲ, ಬಾಗಲಕೋಟೆ: 43 ಮಿ.ಮೀ
ವರಂಗ, ಉಡುಪಿ: 42.5ಮಿ.ಮೀ
ಗುಳೇದಗುಡ್ಡ, ಬಾಗಲಕೋಟೆ: 41 ಮಿ.ಮೀ
ಹಳದೂರು, ಬಾಗಲಕೋಟೆ: 38.5 ಮಿ.ಮೀ
ಮುಸ್ತಿಗೇರಿ, ಬಾಗಲಕೋಟೆ: 37.5 ಮಿ.ಮೀ

ದೇಶದ ಈ ಭಾಗಗಳಲ್ಲಿ ಸುರಿಯಲಿದೆ ಮಳೆ
ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ವ್ಯಾಪಕ ಮಳೆ ಸುರಿಯಲಿದೆ. ಈ ರಾಜ್ಯಗಳಲ್ಲಿ ಪ್ರತ್ಯೇಕವಾದ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಗಂಗಾನದಿ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಬಿಹಾರದ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜಸ್ಥಾನ ಮತ್ತು ಸೌರಾಷ್ಟ್ರ-ಕಚ್ ಹೊರತುಪಡಿಸಿ, ದೇಶದ ಉಳಿದ ಭಾಗಗಳಲ್ಲಿ ಚದುರಿದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಉತ್ತರ ಪಂಜಾಬ್, ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಾದ್ಯಂತ ಮುಂದಿನ ಐದು ದಿನಗಳ ಕಾಲ ಮಳೆ ಬೀಳುವ ಸಾಧ್ಯತೆ ಇದೆ.












Click it and Unblock the Notifications