Rain Alert: ಮಳೆ.. ಮಳೆ.. ಮತ್ತೆ ಕಾಡುತ್ತಿದೆ ಭಾರಿ ಮಳೆಯ ಭಯ!

ಮಳೆಯ ಅವಾಂತರಗಳಿಗೆ ಬ್ರೇಕ್ ಬೀಳುತ್ತಿಲ್ಲ, ಮಳೆರಾಯ ಮನುಷ್ಯರ ಮೇಲೆ ಯಾಕೋ ಈ ವರ್ಷ ಕರುಣೆ ತೋರಿಸುತ್ತಿಲ್ಲ ಅಂತಾ ಕಾಣುತ್ತೆ. ಯಾಕಂದ್ರೆ ಕರ್ನಾಟಕ ರಾಜ್ಯದಲ್ಲಿ ಚಳಿಗಾಲ ಶುರುವಾದರೂ ಮಳೆಯ ಆರ್ಭಟ ಮಾತ್ರ ನಿಂತಿಲ್ಲ. ಹೀಗೆ ಚಳಿಗಾಲದ ಸಮಯದಲ್ಲಿ ಮಳೆ ಬಂದ ಕಾರಣಕ್ಕೆ ರೈತರು ಬೆಳೆ ಕೂಡ ಕಳೆದುಕೊಂಡು ಪರದಾಡುತ್ತಿದ್ದು, ಸಂಕ್ರಾಂತಿ ಹಬ್ಬ ಬರುವ ಮೊದಲೇ ಸಾಕಷ್ಟು ಬೆಳೆ ಕೈತಪ್ಪಿದೆ. ಹೀಗಿದ್ದಾಗಲೇ ಮತ್ತೆ ಮಳೆಯ ಭಯ ಕಾಡ್ತಿದೆ!

ಹೌದು, ಮಳೆ ಇಲ್ಲದೆ 2023 ಪೂರ್ತಿ ಬರದ ಬೇಗೆಯಲ್ಲೇ ಜನರು ಪರದಾಡಿದ್ದರು. ನಂತರ ಅದು ಯಾಕೋ ಏನೋ 2024ರ ಆರಂಭದಲ್ಲೇ ಮಳೆ ಜೋರಾಗಿ ಅಬ್ಬರಿಸಲು ಶುರುವಾಯ್ತು. ಹೀಗೆ ಭರ್ಜರಿ ಮುಂಗಾರು ಮಳೆ ಸುರಿದ ಕಾರಣಕ್ಕೆ ಜನರು ಕೂಡ ಪರದಾಡಿದ್ದರು. ನಂತರ ಹಿಂಗಾರು ಮಳೆ ಕೂಡ ಅಬ್ಬರಿಸಿತ್ತು. ಹೀಗೆ ಮೇ ತಿಂಗಳಿಂದ ಅಕ್ಟೋಬರ್ ತನಕ ಭಾರಿ ಭರ್ಜರಿ ಮಳೆ ಸುರಿದಿತ್ತು, ಹೀಗಿದ್ದಾಗಲೇ ನವೆಂಬರ್ & ಡಿಸೆಂಬರ್ ತಿಂಗಳಲ್ಲೂ ಮಳೆರಾಯ ತನ್ನ ಆರ್ಭಟ ಮುಂದುವರಿಸಿದ್ದಾನೆ!

Rain Alert Given To These Parts Of Karnataka After 1st January 2025

ಮತ್ತೆ ಭಾರಿ ಮಳೆಯ ಭಯ?

ಅಂದಹಾಗೆ ಬಂಗಾಳ ಕೊಲ್ಲಿ ಭಾಗದಲ್ಲಿ ಮತ್ತೆ ವಾಯುಭಾರ ಕುಸಿತವಾಗಿದ್ದು, ಮಳೆ ಬಗ್ಗೆ ಭಯ ಕಾಡುತ್ತಿದೆ. ಈಗಾಗಲೇ ಶ್ರೀಲಂಕಾ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಮುಂದಿನ ಕೆಲವು ದಿನಗಳ ಕಾಲ ತಮಿಳುನಾಡು & ಕೇರಳದಲ್ಲಿ ಕೂಡ ಮಳೆಯ ಭಯ ಆವರಿಸಿದೆ. ಈ ಪರಿಸ್ಥಿತಿ ಇದ್ದಾಗಲೇ ಕರ್ನಾಟಕ ರಾಜ್ಯಕ್ಕೆ ಕೂಡ ಮಳೆಯ ಭಯ ಕಾಡುತ್ತಿದೆ.

ಯಾಕಂದ್ರೆ, ಬಂಗಾಳ ಕೊಲ್ಲಿಯ ಭಾಗದಲ್ಲಿ ಭಾರಿ ಮಳೆಯ ಮೋಡಗಳು ಆವರಿಸಿವೆ. ಗಾಳಿ ಬೀಸುವ ದಿಕ್ಕು ಒಂದು ಚೂರು ಬದಲಾದರೂ ಮತ್ತೆ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆ ಗ್ಯಾರಂಟಿ! ಅಕಸ್ಮಾತ್ ಈಗ ಮತ್ತೆ ಮಳೆ ಶುರುವಾದರೆ, ರೈತರಿಗೆ ಇದರಿಂದ ದೊಡ್ಡ ಸಂಕಷ್ಟ ಎದುರಾಗಲಿದ್ದು ನಗರ ಪ್ರದೇಶದಲ್ಲಿ ಜನರಿಗೆ ಜ್ವರ & ನೆಗಡಿ ಸೇರಿದಂತೆ ಹಲವು ಸಮಸ್ಯೆ ಕಾಡುವ ಭಯ ಆವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+