Karnataka Rains: ವಾಯುಭಾರ ಕುಸಿತ, ಮುಂದಿನ 3 ದಿನ ಈ ಜಿಲ್ಲೆಗಳಿಗೆ ಭಾರಿ ಮಳೆ: ಶಾಲಾ & ಕಾಲೇಜು....

ಮಳೆ... ಮಳೆ... ಮಳೆ... ಈ ರೀತಿ ಮಳೆ ಯಾಕಾದರೂ ಒಂದೇ ಸಮನೇ ಬೀಳುತ್ತಿದೆಯೋ ಗೊತ್ತಿಲ್ಲ. ಆದರೆ ಮಳೆ ಬೀಳುತ್ತಿರುವ ರಭಸಕ್ಕೆ ಕನ್ನಡ ನಾಡು ಮಾತ್ರ ತತ್ತರಿಸಿ ಹೊಗಿದ್ದು, ಜನರು ಅದರಲ್ಲೂ ಅನ್ನದಾತ ರೈತರು ತಲೆ ಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇದು ಸಾಲದು ಎನ್ನುವಂತೆ ಮತ್ತೆ ಮಳೆಯ ಎಚ್ಚರಿಕೆ ಇದೀಗ ನೀಡಲಾಗಿದೆ. ಈಗ ಸಿಕ್ಕಿರುವ ಮಾಹಿತಿ ಪ್ರಕಾರ ವಾಯುಭಾರ ಕುಸಿತದ ಪರಿಣಾಮವಾಗಿ, ಮುಂದಿನ 3 ದಿನ ಈ ಜಿಲ್ಲೆಗಳಿಗೆ ಭಾರಿ ಭರ್ಜರಿ ಮಳೆ ಗ್ಯಾರಂಟಿ ಆಗಿದೆ!

ಅದ್ಯಾವ ಕೇಡುಗಾಲ ಅಂತಾ ಹೀಗೆ ಚಳಿಗಾಲದ ಸಮಯದಲ್ಲೂ ಮಳೆ ಸುರಿಯುತ್ತಿದೆಯೋ ಗೊತ್ತಿಲ್ಲ. ಮೋಡಕ್ಕೆ ತೂತು ಬಿದ್ದ ರೀತಿ ಒಂದೇ ಸಮನೇ ಮಳೆಯ ಅಬ್ಬರ ಹೆಚ್ಚಾಗುತ್ತಿದೆ. ಕಳೆದ 2 ತಿಂಗಳಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ ಜನರು ಹೀಗೆ ಭಾರಿ ಮಳೆ & ನಿರಂತರ ಮಳೆಯ ಕಾಟಕ್ಕೆ ನರಳಿ ಹೋಗಿದ್ದಾರೆ. ಇದು ಸಾಲದು ಎಂಬಂತೆ ಇದೀಗ ವಾಯುಭಾರ ಕುಸಿತದ ಹಿನ್ನೆಲೆ, ಮುಂದಿನ 3 ದಿನಗಳ ಕಾಲ ಈ ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ ನೀಡಲಾಗಿದ್ದು, ಶಾಲಾ & ಕಾಲೇಜು....

Rain Alert Given To The Karnataka From December 11th Of 2024

ವಾಯುಭಾರ ಕುಸಿತ, ಮಳೆ ಅಬ್ಬರ!

ಬೆಳೆದ ಬೆಳೆ ಮಳೆ ಪಾಲಾಗಿ ಹೋಗುತ್ತಿದೆ, ಅಲ್ಲದೆ ಜನರು ಕೂಡ ಭಾರಿ ಮಳೆಯ ಕಾರಣ ತತ್ತರಿಸಿ ಹೋಗುತ್ತಿದ್ದಾರೆ. ಮಳೆ ಹೀಗೆ ಸುರಿಯುತ್ತಿದ್ದರೆ ಇನ್ನೊಂದು ಕಡೆ ಕೈಗೆ ಬಂದಿರುವ ಬೆಳೆ ಎಲ್ಲಾ ಮಣ್ಣು ಪಾಲಾಗಿ ಹೋಗುತ್ತಿದೆ. ಇದು ಸಾಕಷ್ಟು ದೊಡ್ಡ ಮಟ್ಟದ ಸಮಸ್ಯೆಗೆ ಕೂಡ ಕಾರಣವಾಗಿದ್ದು, ಏನು ಮಾಡಬೇಕು? ಎಂಬ ಚಿಂತೆಯಲ್ಲಿ ರೈತರು ಇದ್ದಾರೆ. ಇದೇ ಸಮಯದಲ್ಲಿ ಮತ್ತಷ್ಟು ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ. ಈ ನಡುವೆ ಮಳೆ ಅಬ್ಬರ ಜೋರಾದರೆ ಶಾಲಾ & ಕಾಲೇಜುಗಳ ಕಥೆ ಏನು? ಅನ್ನೋ ಚಿಂತೆ ಕೂಡ ಕಾಡುತ್ತಿದೆ.

ಈಗ ಡಿಸೆಂಬರ್ 12ರ ನಂತರ ಮತ್ತೊಂದು ಹೊಸ ಚಂಡಮಾರುತದ ಆರ್ಭಟ ಶುರುವಾಗುವ ಭಯ ಕಾಡ್ತಿದೆ. ಪರಿಣಾಮ ಕರ್ನಾಟಕ, ತಮಿಳುನಾಡು, ಶ್ರೀಲಂಕಾದಲ್ಲಿ ಭಾರಿ ಮಳೆ ಬರುತ್ತೆ, ಅಂತಾ ಹವಾಮಾನ ಇಲಾಖೆಯು ಇದೀಗ ವಾರ್ನಿಂಗ್ ಕೊಟ್ಟಿದೆ. ಯಾವ ಯಾವ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ? ಮುಂದೆ ಓದಿ.

ಬೆಂಗಳೂರು ಸೇರಿ ಇಲ್ಲೆಲ್ಲಾ ಭಾರಿ ಮಳೆ!

ಕರ್ನಾಟಕದ ರಾಜಧಾನಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ & ಉತ್ತರ ಕನ್ನಡ ಜಿಲ್ಲೆಗಳಲ್ಲು ಮಳೆ ಅಬ್ಬರಿಸುವ ಮುನ್ನೆಚ್ಚರಿಕೆ ನೀಡಲಾಗಿದೆ. ಇದರ ಜೊತೆ ಹಾಸನ ಸೇರಿ ಕೊಡಗು, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಕೂಡ ಮಳೆ ಅಬ್ಬರ ಜೋರಾಗಿ ಇರಲಿದೆ. ಚಿಕ್ಕಬಳ್ಳಾಪುರ & ಕೋಲಾರ ಜಿಲ್ಲೆಗೂ ಮಳೆಯ ಮೋಡಗಳು ಅಪ್ಪಳಿಸಲಿವೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

ಮಳೆ ಅಬ್ಬರ ಕಾರಣ ನೆಗಡಿ & ಜ್ವರ?

ಮಳೆ.. ಮಳೆ.. ಮಳೆ.. ಮಳೆ.... ಎಲ್ಲಿ ನೋಡಿದರೂ ಬರೀ ಮಳೆಯದ್ದೇ ಸುದ್ದಿ, ಹೀಗೆ ಮಳೆಯದ್ದೇ ಸದ್ದು. ಮಳೆ ಸುರಿಯುತ್ತಿರುವ ರೀತಿಗೆ ಜನರು ಕೂಡ ಬೆಚ್ಚಿ ಬಿದ್ದಿದ್ದಾರೆ. ಯಾಕೆ ಅಂದ್ರೆ, ಚಳಿಗಾಲ ಡಿಸೆಂಬರ್ ತಿಂಗಳಲ್ಲಿ ಕೂಡ ಈ ರೀತಿ ಭಾರಿ ಮಳೆ ಬರ್ತಾ ಇರೋದು ರೈತರು ಬೆಳೆದ ಬೆಳೆಗೆ & ನಗರ ಪ್ರದೇಶದ ಜನರ ಆರೋಗ್ಯದ ಮೇಲೆ ಭಾರಿ ದೊಡ್ಡ ಪರಿಣಾಮ ಬೀರುತ್ತಿದೆ. ಪರಿಸ್ಥಿತಿ ಹೀಗೆ ಸೂಕ್ಷ್ಮವಾಗಿರುವ ಸಮಯದಲ್ಲೇ, ಮುಂದಿನ 24 ಗಂಟೆಗಳ ಕಾಲ ಭಾರಿ ಭರ್ಜರಿ ಮಳೆ ಸುರಿಯುವುದು ಗ್ಯಾರಂಟಿ ಆಗಿದೆ. ಈಗ ಸುರಿಯುವ ಮಳೆ ಘೋರವಾಗಿ ಇರಲಿದೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+