Karnataka Rains: ಮಳೆ.. ಮಳೆ... ಮತ್ತೆ ಆರ್ಭಟಿಸಲಿದೆ ಜೋರಾದ ಮಳೆ!

ಮಳೆ ಈ ರೀತಿಯಾಗಿ ಅಬ್ಬರಿಸುತ್ತಿರುವುದು ನೋಡಿದ ಜನ ಗೊಣಗುತ್ತಿದ್ದಾರೆ, ಅಲ್ಲದೆ ಹೀಗೆ ಸುರಿಯುತ್ತಿರುವ ಮಳೆ ನಿಂತು ಹೋಗಲಿ ದೇವರೆ ಅಂತಾ ಬೇಡುತ್ತಿದ್ದಾರೆ. ಯಾಕಂದ್ರೆ ಇಲ್ಲಿ ಮಳೆಯ ಅಬ್ಬರಕ್ಕೆ ಬ್ರೇಕ್ ಬೀಳುತ್ತಿಲ್ಲ. ಹೀಗಾಗಿ ಜನರು ಕೂಡ ಮಳೆಯ ಅಬ್ಬರ ಕಂಡು, ಸಿಕ್ಕಾಪಟ್ಟೆ ಬೇಸರಗೊಂಡಿದ್ದಾರೆ. ಹೀಗಿದ್ದರೂ, ಮತ್ತೆ ಮಳೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಮಳೆ ಸುರಿಯುವ ಪ್ರದೇಶಗಳು ಯಾವುವು?

ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಿನ್ನೆ ಸರಿಯಾಗಿ ಮಳೆ ಬಿದ್ದಿದೆ. ಇದೇ ಕಾರಣಕ್ಕೆ ನಿನ್ನೆ ರಾತ್ರಿಯಿಂದಲೇ ಚಳಿಯ ಪ್ರಮಾಣ ಕೂಡ ಭಾರಿ ಹೆಚ್ಚಾಗಿದ್ದು, ಈ ಹಿನ್ನೆಲೆ ಜನರು ಕೂಡ ಚಳಿಯಲ್ಲಿ ನರಳುತ್ತಿದ್ದಾರೆ. ಮತ್ತೊಂದು ಕಡೆ ಈ ಚಳಿಯಿಂದ ರಕ್ಷಣೆ ಪಡೆಯಲು ಬೇರೆ ಬೇರೆ ತಂತ್ರದ ಮೊರೆ ಹೋಗುತ್ತಿದ್ದಾರೆ. ಇನ್ನೇನು ಬಿಡು ಮತ್ತೆ ಈ ವರ್ಷ ಮಳೆ ಬರಲ್ಲ ಅಂತಾ ಅಂದುಕೊಳ್ಳುವ ಸಮಯದಲ್ಲೇ....

Rain Alert Given To Karnataka On December 13th Of 2024

ಮಳೆ ಆರ್ಭಟ ಮತ್ತೆ ಶುರು!

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಕೂಡ ಭಾರಿ ಮಳೆ ಸುರಿಯುವ ಮುನ್ನೆಚ್ಚರಿಕೆಯ ನೀಡಲಾಗಿದೆ. ಅದರಲ್ಲೂ ಬೆಂಗಳೂರಲ್ಲಿ ಇಂದು ಕೂಡ ತುಂತುರು ಮಳೆ ಸುರಿಯುವ ಭೀತಿ ಇದ್ದು, ಮೋಡ ಕವಿದ ವಾತಾವರಣ & ವಿಪರೀತ ಚಳಿ ಜನರನ್ನು ಕಾಡಲಿದೆ. ಮತ್ತೊಂದು ಕಡೆ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ಅಂದ್ರೆ ಡಿಸೆಂಬರ್ 16ರ ನಂತರ ಮತ್ತೊಂದು ಚಂಡಮಾರುತ ಅಪ್ಪಳಿಸುವ ಬಗ್ಗೆ ವಾರ್ನಿಂಗ್ ಕೊಡಲಾಗಿದೆ!

ಯಾವ ಯಾವ ಜಿಲ್ಲೆಗಳಲ್ಲಿ ಮಳೆ?

ಬೆಂಗಳೂರಿನಲ್ಲಿ ಇಂದು ಕೂಡ ಮೋಡ ಕವಿದ ವಾತಾವರಣ ಇರಲಿದ್ದು, ತುಂತುರು ಮಳೆ ಕಾಟ ಕೊಡಲಿದೆ. ಮತ್ತೊಂದು ಕಡೆ ದಕ್ಷಿಣ ಒಳನಾಡು & ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುನ್ಸೂಚನೆ ಸಿಕ್ಕಿದೆ. ಹೀಗಿದ್ದಾಗ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಸೇರಿದಂತೆ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಮೈಸೂರಿನ ಸುತ್ತಮುತ್ತ ಪ್ರದೇಶದಲ್ಲಿ ಮಳೆ ಸುರಿಯುವ ಮುನ್ಸೂಚನೆ ಇದೆ.

ಈ ಜಿಲ್ಲೆಗಳ ಜೊತೆಗೆ ಚಿತ್ರದುರ್ಗ, ದಾವಣಗೆರೆ, ತುಮಕೂರು & ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೂಡ ಮಳೆ ಸುರಿಯಲಿದ್ದು, ಇದೀಗ ಕೋಲಾರ ಕೂಡ ಮಳೆಗೆ ಸಾಕ್ಷಿ ಆಗಲಿದೆ. ಇನ್ನೊಂದು ಕಡೆ ನಾಳೆ ಅಂದ್ರೆ ಡಿಸೆಂಬರ್ 14ರ ನಂತರ ಮಳೆ ಸ್ವಲ್ಪ ಸೈಲೆಂಟ್ ಆಗುವ ನಿರೀಕ್ಷೆ ಇದೆ. ಆದರೆ ಮತ್ತೆ ಡಿಸೆಂಬರ್ 17ರ ನಂತರ ಮಳೆರಾಯ ತನ್ನ ಪ್ರತಾಪ ತೋರಿಸುವ ಭಯ ಕಾಡ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+