ಮುಂಗಾರು ಮಳೆ ಆರ್ಭಟ ನಿಂತಿಲ್ಲ: ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ!

ಮಳೆ.. ಮಳೆ.. ಮಳೆ.. ಜನರಿಗೆ ಇದೀಗ ಮಳೆ ಸಹವಾಸ ಸಾಕಾಗಿ ಹೋಗಿದೆ. ಯಾಕಂದ್ರೆ ಕರ್ನಾಟಕದಲ್ಲಿ ಈ ಬಾರಿ ಸಾಕು ಸಾಕು ಎನಿಸುವಷ್ಟು ಮಳೆ ಬಂದಿದೆ. ಅದರಲ್ಲೂ ಕೆಲವೇ ಕೆಲವು ತಿಂಗಳ ಹಿಂದೆ, ಅಂದ್ರೆ ಇದೇ ವರ್ಷದ ಮಾರ್ಚ್ & ಏಪ್ರಿಲ್ ತಿಂಗಳಲ್ಲಿ ಜನ ಮಳೆ ಬರಲಿ ದೇವರೆ ಅಂತಾ ಪೂಜೆ ಮಾಡಿದ್ದರು. ಹೀಗಾಗಿ ಕರ್ನಾಟಕದ ಮೂಲೆ ಮೂಲೆಯಲ್ಲೂ ಮುಂಗಾರು ಮಳೆ ಅಬ್ಬರಿಸಿತ್ತು. ಹೀಗೆ ಮಳೆ ಶುರುವಾಗಿ 4 ತಿಂಗಳು ಕಳೆದರೂ ಮಳೆ ಅಬ್ಬರ ಕಡಿಮೆ ಆಗುತ್ತಿಲ್ಲ. ಇಂತಹ ಸಮಯದಲ್ಲೇ ಮುಂದಿನ 24 ಗಂಟೆ ಏನಾಗಲಿದೆ ಗೊತ್ತಾ?

ಹೌದು, ಮುಂಗಾರು ಮಳೆ ಮತ್ತೆ ಅಲರ್ಟ್ ಆಗಿ ಚಚ್ಚಿ ಬಿಸಾಡುತ್ತಿದೆ. ಯಾಕೆ ಹೀಗೆ ದಿಢೀರ್ ಮತ್ತೆ ಮುಂಗಾರು ಮಳೆ ಅಬ್ಬರಿಸುತ್ತಿದೆ ಅಂದ್ರೆ ಅದಕ್ಕೆ ಕಾರಣ ಅರಬ್ಬಿ ಸಮುದ್ರ & ಬಂಗಾಳ ಕೊಲ್ಲಿ. ಎರಡೂ ಸಮುದ್ರ ಪ್ರದೇಶದಲ್ಲಿ ಇದೀಗ ವಾಯುಭಾರ ಕುಸಿತ ಕಂಡ ಪರಿಣಾಮವಾಗಿ, ಮುಂಗಾರು ಮಳೆ ಮತ್ತೆ ಅಲರ್ಟ್ ಆಗಿ ಹೆಚ್ಚು ಮಳೆ ಬೀಳುತ್ತಿದೆ. ಈ ಕಾರಣಕ್ಕೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿ ಉತ್ತರ ಕರ್ನಾಟಕದ ಬೀದರ್, ಬಾಗಲಕೋಟೆ, ಕಲಬುರಗಿ, ರಾಯಚೂರು, ಬೆಳಗಾವಿ ಸುತ್ತಮುತ್ತಲ ಪ್ರದೇಶದಲ್ಲಿ ಭಾರಿ ಭರ್ಜರಿ ಮಳೆ ಬೀಳುತ್ತಿದೆ. ಈ ಸಮಯದಲ್ಲೇ ಮತ್ತಷ್ಟು ಭಾರಿ ಮಳೆ ಆಗುವ ಮುನ್ನೆಚ್ಚರಿಕೆ ನೀಡಲಾಗಿದೆ.

Rain Alert Given To Karnataka And Bengaluru On 03 September Of 2024

ಕರ್ನಾಟಕದ ಈ ಜಿಲ್ಲೆಗಳಿಗೆ ಮಳೆ!

ಕನ್ನಡ ನಾಡಿನ ಎಲ್ಲಾ ಜಲಾಶಯಗಳು ತುಂಬಿ ಹೋಗಿದ್ದು, ಈಗಾಗಲೇ ನದಿಗೆ ನೀರು ಕೂಡ ಹರಿಸಲಾಗುತ್ತಿದೆ. ಹೀಗಿದ್ದಾಗ ಕೂಡ ಮುಂಗಾರು ಮಳೆ ಇನ್ನೂ ಸೈಲೆಂಟ್ ಆಗದೆ, ಮಳೆಯ ಅಬ್ಬರ ಹೆಚ್ಚಿಸುತ್ತಿದೆ. ಅದರಲ್ಲಿಯೂ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈಗಲೂ ಮಳೆರಾಯ ಸೈಲೆಂಟ್ ಆಗುತ್ತಿಲ್ಲ. ಜೊತೆಗೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕೂಡ ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಭಾರಿ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ.

ಅದ್ರಲ್ಲೂ ಮುಂದಿನ 24 ಗಂಟೆಗಳ ಕಾಲ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ಭಾರಿ ಭರ್ಜರಿ ಮಳೆ ಬೀಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಹಾಗೇ ಬೆಂಗಳೂರು ನಗರ & ಗ್ರಾಮಾಂತರ ಜಿಲ್ಲೆಯ ಭಾಗಗಳಲ್ಲಿ ಕೂಡ ಮಳೆ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಭರ್ಜರಿ ಮಳೆ ಬಿದ್ದು, ಸೋಮವಾರ ಜನ ಪರದಾಡಿದ್ದರು. ಮಂಗಳವಾರ ಕೂಡ ಮಳೆರಾಯ ಅಬ್ಬರಿಸುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸಜ್ಜಾಗಿದ್ದಾರೆ.

ಭಾರಿ ಮಳೆಗೆ ಹೆದರಿದ ಜನ

ಮಳೆ ಆರ್ಭಟ ಸ್ವಲ್ಪ ಕೂಡ ಕಡಿಮೆ ಆಗಿಲ್ಲ. ಕರ್ನಾಟಕದಲ್ಲಿ ಮಳೆರಾಯ ತನ್ನ ಅಸಲಿ ರೂಪ ತೋರಿಸಿ ಭಯಪಡಿಸಿದ್ದಾನೆ. ಕಳೆದ ವರ್ಷ ಅಂದ್ರೆ 2023 ರಲ್ಲಿ ಭೀಕರ ಬರ ಎದುರಾಗುವಂತೆ ಮಾಡಿದ್ದ ಮಳೆಯ ಮೋಡಗಳು, ಈ ಬಾರಿ ಅಂದ್ರೆ 2024 ರಲ್ಲಿ ಭೀಕರ ಪ್ರವಾಹ & ನೆರೆ ಪರಿಸ್ಥಿತಿ ನಿರ್ಮಾಣ ಮಾಡಿ ಭಯಪಡಿಸಿವೆ. ಈ ಸಮಯದಲ್ಲೇ ಮತ್ತೆ ಮುಂದಿನ 24 ಗಂಟೆ ಕಾಲ ರಣಮಳೆ ಅಬ್ಬರ ಎದುರಾಗುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಇದು ಕರ್ನಾಟಕದ ಹಲವು ಜಿಲ್ಲೆಗಳ ಜನರಿಗೆ ಮತ್ತೆ ಆತಂಕ ಎದುರಾಗುವಂತೆ ಮಾಡಿದೆ. ಅದರಲ್ಲೂ ಉತ್ತರ ಕರ್ನಾಟಕದ ಸ್ಥಿತಿ, ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+