Rain Alert: 48 ಗಂಟೆಗಳ ಕಾಲ ಅಬ್ಬರಿಸಲಿದೆ ಮಳೆ, ಯಾವ ಯಾವ ಜಿಲ್ಲೆಗೆ ಮಳೆ ವಾರ್ನಿಂಗ್...

ಮಳೆ... ಮಳೆ... ಜನರಿಗೆ ಈ ಶಬ್ಧ ಕೇಳಿದರೆ ಸಾಕು ಭಯ ಹುಟ್ಟುತ್ತಿದೆ. ಅದರಲ್ಲೂ ಈ ಚಳಿಗಾಲದ ಸಮಯದಲ್ಲೂ, ಮಳೆರಾಯ ಈ ರೇಂಜ್‌ಗೆ ಕಾಟ ಕೊಡುತ್ತಿರುವುದು ಆಕ್ರೋಶ ಮೂಡುವಂತೆ ಮಾಡಿದೆ. ಮಳೆ ಕಾರಣ ಈಗಾಗಲೇ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ದೊಡ್ಡ ದೊಡ್ಡ ಅನಾಹುತ ಎದುರಾಗುತ್ತಿವೆ. ಇಂತಹ ಸಮಯದಲ್ಲೇ ಮಳೆ ನಿಲ್ಲುತ್ತದೆ ಅಂತಾ ಜನರು ಇಟ್ಟುಕೊಂಡಿದ್ದ ನಿರೀಕ್ಷೆ ಮತ್ತೆ ಸುಳ್ಳಾಗಿದ್ದು, 48 ಗಂಟೆಗಳ ಕಾಲ ಅಬ್ಬರಿಸಲಿದೆ ಮಳೆ ಅಂತಾ ಹವಾಮಾನ ಇಲಾಖೆ ಎಚ್ಚರಿಕೆ ರವಾನಿಸಿದೆ. ಹಾಗಿದ್ರೆ, ಯಾವ ಯಾವ ಜಿಲ್ಲೆಗೆ ಮಳೆ ಕಂಟಕ ಇದೆ?

ಮಳೆಗಾಲ ಮುಗಿದು ಹೋಗಿದ್ದರೂ ಮಳೆ ಮಾತ್ರ ನಿಲ್ಲುತ್ತಿಲ್ಲ, ಇದರ ಪರಿಣಾಮ ಜನ ಕೂಡ ಸಾಕಷ್ಟು ಸಮಸ್ಯೆ ಎದುರಿಸುತ್ತಾ ಪರದಾಡುತ್ತಿದ್ದಾರೆ. ಅಕಾಲಿಕ ಮಳೆ ಪರಿಣಾಮ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ದೊಡ್ಡ ದೊಡ್ಡ ಸಮಸ್ಯೆಗಳು ಎದುರಾಗಿವೆ. ಹೀಗಿದ್ದಾಗ ಮಳೆ ಇವತ್ತು ನಿಲ್ಲಬಹುದು, ನಾಳೆ ನಿಲ್ಲಬಹುದು ಅಂತಾ ನಿರೀಕ್ಷೆಗಳು ಇದ್ದವು. ಆದರೆ ಈ ನಿರೀಕ್ಷೆಗಳು ಇದೀಗ ಸುಳ್ಳಾಗಿದ್ದು, ಮಂದಿನ 5 ದಿನಗಳ ಕಾಲ ಭರ್ಜರಿ ಮಳೆಯು ಸುರಿಯುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಅದರಲ್ಲೂ ಮುಂದಿನ 48 ಗಂಟೆಗಳ ಕಾಲ ಅಬ್ಬರಿಸಲಿದೆ ಮಳೆ!

Rain Alert Given To Karnataka And Bengaluru From November 28th Of 2024

ಮಳೆ.. ಮಳೆ.. ಭರ್ಜರಿ ಮಳೆ!

ಯಾಕಪ್ಪಾ ಮಳೆ ಈ ರೇಂಜ್‌ಗೆ ಕಾಟ ಕೊಡುತ್ತಿದೆ? ಅಂತಾ ನಿಮ್ಮಲ್ಲಿ ಪ್ರಶ್ನೆ ಮೂಡಿರಬಹುದು. ಅಷ್ಟಕ್ಕೂ ಹೀಗೆ ದಿಢೀರ್ ಅಕಾಲಿಕ ಮಳೆ ಸುರಿಯಲು ಕಾರಣ, ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಕಂಡು ಬಂದಿರುವ ವಾಯುಭಾರ ಕುಸಿತ. ಹೀಗೆ ವಾಯುಭಾರ ಕುಸಿತದ ಹಿನ್ನೆಲೆ ಮಳೆ ಆರ್ಭಟ ಚಳಿಗಾಲದಲ್ಲೂ ಜೋರಾಗಿದೆ. ಇದೇ ಕಾರಣಕ್ಕೆ ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ.

ಭರ್ಜರಿ ಮಳೆ ಬೀಳುವ ಜಿಲ್ಲೆಗಳು ಇವು

ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ಸೇರಿದಂತೆ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಹಲವೆಡೆ ಮಳೆಯಾಗುವ ಮುನ್ಸೂಚನೆ ಇದೆ. ಇದರ ಜೊತೆಗೆ ಬೆಂಗಳೂರು ಗ್ರಾಮಾಂತರ & ರಾಮನಗರ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲೂ ಮಳೆ ಬೀಳುವ ಮುನ್ಸೂಚನೆ ನೀಡಲಾಗಿದೆ. ಹಾಗೇ ಇದೇ ರೀತಿ ಮುಂದಿನ ಕೆಲವು ದಿನಗಳ ಕಾಲ ಮಳೆರಾಯ ಅಬ್ಬರಿಸಿ, ಸದ್ದು ಮಾಡುವ ಮುನ್ಸೂಚನೆ ನೀಡಲಾಗಿದೆ.

ಮಳೆ ನಿಲ್ಲಲಿ ದೇವರೆ ಅಂತಿದ್ದಾರೆ ಜನ!

ಒಟ್ನಲ್ಲಿ ಹೀಗೆ ಚಳಿಗಾಲದಲ್ಲಿ ಸುರಿಯುತ್ತಿರುವ ಮಳೆಯು ಹಲವು ರೀತಿಯ ಸಮಸ್ಯೆಗೆ ಕೂಡ ಕಾರಣವಾಗುತ್ತಿದೆ. ಮತ್ತೊಂದು ಕಡೆ, ಆದಷ್ಟು ಬೇಗ ಮಳೆ ನಿಲ್ಲಲಿ ದೇವರೇ ಅಂತಾ ಈಗ ಜನರು ಬೇಡಿಕೊಳ್ಳುವಂತೆ ಆಗಿದೆ. ಈ ಹಿಂದೆ ಮಳೆ ಬರಲಿ ದೇವರೇ ಅಂತಾ ಜನರು ದೇವರ ಬಳಿ ಬೇಡಿಕೊಂಡಿದ್ದರು. ಆದರೆ ಈಗ, ಮಳೆ ನಿಲ್ಲಲಿ ಅಂತಾ ಪ್ರಾರ್ಥನೆ ಮಾಡುವ ಪರಿಸ್ಥಿತಿ ಬಂದಿದೆ.

ಮಳೆ ಅಬ್ಬರಕ್ಕೆ ಕನ್ನಡಿಗರಲ್ಲಿ ಆತಂಕ!

ಮಳೆ.. ಮಳೆ.. ಚಳಿಗಾಲದಲ್ಲೂ ಅಬ್ಬರಿಸುತ್ತಿರುವ ಮಳೆ ಜನರನ್ನು ಈಗ ರೊಚ್ಚಿಗೇಳುವ ರೀತಿ ಮಾಡಿದೆ. ಯಾಕಂದ್ರೆ ಮಳೆಗಾಲ ಮುಗಿದು ಹೋಗಿ, ಇನ್ನೇನು ಚಳಿಗಾಲ ಶುರುವಾಗುವ ಸಮಯದಲ್ಲಿ ಕೂಡ ಈ ರೇಂಜ್‌ಗೆ ಮಳೆ ಬೀಳುತ್ತಿರುವುದು ಚಿಂತೆ ಹೆಚ್ಚು ಮಾಡುತ್ತಿದೆ. ಈ ಹೊತ್ತಲ್ಲೇ ರೈತರು ಕಷ್ಟಪಟ್ಟು ಬೆಳೆದಿದ್ದ ಬೆಳೆ ಕೂಡ ಅಕಾಲಿಕ ಮಳೆಯ ಪರಿಣಾಮ ನಾಶ ಆಗುತ್ತಿದ್ದು, ಅನ್ನದಾತ ರೈತರು ತಲೆಮೇಲೆ ಕೈಹೊತ್ತು ಕೂರುವ ವಾತಾವರಣ ನಿರ್ಮಾಣ ಆಗಿದೆ. ಪರಿಸ್ಥಿತಿ ಹೀಗಿದ್ದರೂ, ಮುಂದಿನ 48 ಗಂಟೆಗಳ ಕಾಲ ಮತ್ತಷ್ಟು ರಣಮಳೆ ಕರ್ನಾಟಕ ರಾಜ್ಯದಲ್ಲಿ ಮಳೆ ಆರ್ಭಟಿಸುವುದು ಪಕ್ಕಾ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+