Rain Alert: ಮಳೆ.. ಮಳೆ.. ಇಂದು ಕೂಡ ಭಾರಿ ಭರ್ಜರಿ ಮಳೆ!

ಮುಂಗಾರು ಮಳೆ ಆರ್ಭಟ ಮತ್ತಷ್ಟು ಹೆಚ್ಚಾಗುತ್ತಿದೆ, ಕರ್ನಾಟಕ ರಾಜ್ಯದಲ್ಲಿ ಈ ಬಾರಿಯ ಮಳೆಗಾಲ ಸಖತ್ ಆಗಿತ್ತು ಯಾಕಂದ್ರೆ ಭರ್ಜರಿಯಾಗಿ ಮಳೆ ಬಂದು ಕರ್ನಾಟಕದ ಎಲ್ಲಾ ಡ್ಯಾಂ & ಕೆರೆಗಳು ತುಂಬಿ ಹೋಗಿವೆ. ಅದರಲ್ಲೂ ಈ ಬಾರಿ ಮಳೆಗಾಲದ ವೇಳೆ ನದಿಗಳು ತುಂಬಿ ಹರಿದಿವೆ. ಹೀಗಿದ್ದಾಗ ಮಳೆ ಕಾಟ ಸಾಕು ಸಾಕು ಅನಿಸುತ್ತಿದೆ. ಪರಿಸ್ಥಿತಿ ಇಷ್ಟೆಲ್ಲಾ ಕೈಮೀರಿ ಹೋಗಿದ್ದರೂ ಮುಂಗಾರು ಮಳೆ ಮಾತ್ರ ನಿಲ್ಲುತ್ತಿಲ್ಲ. ಅದರಲ್ಲೂ ಇವತ್ತು ಕೂಡ ಮಳೆಯ ಆರ್ಭಟ ಜೋರಾಗಿ ಇರಲಿದೆ ಅಂತಾ ಎಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಯಾವೆಲ್ಲ ಜಿಲ್ಲೆ & ಪ್ರದೇಶಗಳಲ್ಲಿ ಮಳೆ ಅಬ್ಬರಿಸಲಿದೆ? ಮುಂದೆ ಓದಿ.

ಕರ್ನಾಟಕದ ನದಿಗಳಲ್ಲಿ ಬರ ಬಂದಿತ್ತು, ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕುಡಿವ ನೀರಿಗೂ ಪರದಾಟ ಶುರುವಾಗಿತ್ತು. ಮಾರ್ಚ್ & ಏಪ್ರಿಲ್ ತಿಂಗಳಲ್ಲಿ ಇಂತಹ ಪರಿಸ್ಥಿತಿಯನ್ನ ಕನ್ನಡಿಗರು ಎದುರಿಸಿದ್ದರು. ಆದ್ರೆ ಇದೀಗ ಮಳೆ ಆರ್ಭಟಿಸುತ್ತಿರುವ ರೀತಿಗೆ ಕರ್ನಾಟಕ ರಾಜ್ಯದಲ್ಲಿ ಪ್ರವಾಹ ಸೃಷ್ಟಿಯಾಗುತ್ತಿದೆ.

Rain Alert Given To Karnataka And Bengaluru From 06 September Of 2024

ಎಷ್ಟೋ ಊರುಗಳು ಮುಳುಗಿ ಹೋಗಿವೆ. ಹೀಗಿದ್ದಾಗಲೇ ಮತ್ತೆ ಮುಂದಿನ 24 ಗಂಟೆ ಅವಧಿಯಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಿಗೆ ರಣ ಭೀಕರವಾದ ಮಳೆ ಬೀಳುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ? ನಮ್ಮ ಕನ್ನಡ ನಾಡಿನಲ್ಲಿ ಮಳೆ ಸೈಲೆಂಟ್ ಆಗುವುದು ಯಾವಾಗ? ಮುಂದೆ ಓದಿ.

ಯಾವ ಯಾವ ಜಿಲ್ಲೆಗಳಲ್ಲಿ ಮಳೆ?

ಈಗಿನ ಮಾಹಿತಿ ಪ್ರಕಾರ ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಭಾಗದಲ್ಲಿ ಹಾಗೇ ಉತ್ತರ ಕನ್ನಡ & ಹಾಸನದ ಮಲೆನಾಡು ಭಾಗದಲ್ಲಿ ಮಳೆರಾಯ ಅಬ್ಬರ ತೋರುವುದು ಪಕ್ಕಾ. ಇದರ ಜೊತೆ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ಭರ್ಜರಿ ಮಳೆ ಬೀಳಲಿದೆ ಎಂದು ಎಚ್ಚರಿಸಲಾಗಿದೆ. ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ನಿಂತೇ ಇಲ್ಲ. ಈ ನಡುವೆ ಉತ್ತರ ಕರ್ನಾಟಕ ಭಾಗದಲ್ಲೂ ಮಳೆಯ ಕಾಟ ಹೆಚ್ಚಾಗಿದೆ. ಹಾಗಾದರೆ ಬೆಂಗಳೂರು ವಾತಾವರಣ ಇಂದು ಹೇಗೆ ಇರಲಿದೆ? ಬನ್ನಿ ತಿಳಿಯೋಣ.

ಬೆಂಗಳೂರಲ್ಲಿ ಮಳೆಯ ಮುನ್ಸೂಚನೆ?

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಿರಂತರ ಮಳೆ ಕಾರಣಕ್ಕೆ ಜನರು ಕಂಗಾಲಾಗಿದ್ದು, ಆದಷ್ಟು ಬೇಗ ಮಳೆ ನಿಲ್ಲಲಿ ಅಂತಾ ಕಾಯುತ್ತಿದ್ದಾರೆ. ಹೀಗಿದ್ದಾಗ ದಿಢೀರ್ ಮತ್ತೆ ಭರ್ಜರಿ ಮಳೆ ಆರಂಭ ಆಗಿತ್ತು. ಆದರೆ ಇದೀಗ ಮಳೆ ನಿಲ್ಲುವ ಮುನ್ಸೂಚನೆ ಸಿಗುತ್ತಿದೆ. ಹೀಗಿದ್ದರು ಇಂದು ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಹೀಗಾಗಿ ತಾಪಮಾನದಲ್ಲಿ ಕೂಡ ಇಳಿಕೆ ಕಂಡುಬರುವ ನಿರೀಕ್ಷೆ ಇದೆ. ಹಾಗೇ ಮತ್ತೊಂದು ಕಡೆಯಲ್ಲಿ ಇನ್ನಷ್ಟು ದಿನಗಳ ಕಾಲ ಬೆಂಗಳೂರು ನಗರದಲ್ಲಿ ಇದೇ ರೀತಿ ಮೋಡ ಕವಿದ ವಾತಾವರಣ ಇರುವ ಸಾಧ್ಯತೆ ಇದೆ ಎಂಬ ಮುನ್ಸೂಚನೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+