Rain Alert: ಮಳೆ ಅಬ್ಬರ ಮತ್ತೆ ಶುರುವಾಯ್ತು, ಇನ್ನೂ ಎಷ್ಟು ದಿನ ವರುಣನ ಆರ್ಭಟ?

ಮಳೆ.. ಮಳೆ.. ಬಹುಶಃ ಈ ವರ್ಷ ಮಳೆಯಿಂದ ಮುಕ್ತಿ ಸಿಗೋದೆ ಡೌಟ್ ಅನಿಸುತ್ತಿದ್ದು, ಜನರು ಕೂಡ ಮಳೆಯಿಂದ ಮುಕ್ತಿ ಸಿಗಲಿ ದೇವರೆ ಅಂತಾ ಪ್ರಾರ್ಥನೆ ಮಾಡುತ್ತಿದ್ದಾರೆ. ಈ ಮಾತು ಕೆಲವೇ ದಿನಗಳ ಹಿಂದೆ ಬೇರೆ ರೀತಿಯಾಗೇ ಇತ್ತು. ಆದರೆ ಇದೀಗ ಪರಿಸ್ಥಿತಿ ಕೂಡ ವ್ಯತಿರಿಕ್ತ ಆಗಿ ಹೋಗಿದ್ದು, ಸತತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಜನರು ಕೂಡ ನಲುಗಿ ಹೋಗಿದ್ದಾರೆ. ಹಾಗಾದ್ರೆ ಇನ್ನೂ ಎಷ್ಟು ದಿನ ಮಳೆ ಸುರಿಯುವ ಬಗ್ಗೆ ಈಗ ಮುನ್ನೆಚ್ಚರಿಕೆ ನೀಡಲಾಗಿದೆ?

ಮುಂಗಾರು ಮಳೆ ಮಾರುತಗಳು ಮತ್ತಷ್ಟು ಉಗ್ರರೂಪ ತಾಳಿದ್ದು, ಮುಂಗಾರು ಮಳೆ ಈಗ ಮತ್ತೆ ಚುರುಕಾಗಿದೆ. ಕರ್ನಾಟಕದ ಒಳನಾಡಿನಲ್ಲಿ ಮುಂದಿನ 24 ಗಂಟೆ ಭಾರಿ ಭರ್ಜರಿ ಮಳೆ ಬೀಳಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಗುಡುಗು & ಸಿಡಿಲು ಸಹಿತ ಮಳೆಯಿಂದ ರಕ್ಷಿಸಿಕೊಳ್ಳಲು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಕರ್ನಾಟಕದ ಒಳನಾಡು ಮಾತ್ರವಲ್ಲದೆ ಕರಾವಳಿ & ಮಲೆನಾಡು ಜಿಲ್ಲೆಗಳಿಗೂ ಭರ್ಜರಿ ಮಳೆಯ ಸಿಂಚನ ಆಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ ಹವಾಮಾನ ಇಲಾಖೆ ಅಧಿಕಾರಿಗಳು. ಅದರಲ್ಲೂ ಉತ್ತರ ಕರ್ನಾಟಕದ ಪರಿಸ್ಥಿತಿ ಹೇಗೆ ಆಗಿದೆ ಗೊತ್ತಾ? ಬನ್ನಿ ತಿಳಿಯೋಣ.

Rain Alert Given To Karnataka And Bengaluru From 05 September Of 2024

ಉತ್ತರ ಕರ್ನಾಟಕ & ಬೆಂಗಳೂರಿನಲ್ಲಿ...

ಕರ್ನಾಟಕದಲ್ಲಿ ಹವಾಮಾನ ತೀವ್ರವಾಗಿ ಬದಲಾಗಿ ಹೋಗಿದ್ದು, ಮಳೆ ಅಬ್ಬರ ಜೋರಾಗಿದೆ. ಈಗಿನ ಮಾಹಿತಿ ಪ್ರಕಾರ ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಬೀದರ್, ಬಳ್ಳಾರಿ, ವಿಜಯನಗರ, ಕಲಬುರಗಿ, ಯಾದಗಿರಿ, ರಾಯಚೂರು, ಧಾರವಾಡ ಸೇರಿ ಗದಗ, ಹಾವೇರಿ & ಕೊಪ್ಪಳ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುವ ಎಚ್ಚರಿಕೆ ನೀಡಲಾಗಿದೆ.

ಹೀಗೆ ಹವಾಮಾನ ಬದಲಾವಣೆ ಒತ್ತಡಕ್ಕೆ ಸಿಲುಕಿ ಉತ್ತರ ಕರ್ನಾಟಕ ಭಾಗದಲ್ಲಿ ಕನ್ನಡಿಗರು ನಲುಗಿದ್ದಾರೆ. ಹಾಗೇ ಕರ್ನಾಟಕದ ಅಕ್ಕಪಕ್ಕದ ರಾಜ್ಯಗಳಾದ ಆಂಧ್ರ ಮತ್ತು ತೆಲಂಗಾಣದಲ್ಲೂ ಮುಂಗಾರು ಮಳೆ ಮೋಡಗಳು ತಮ್ಮ ಅಸಲಿ ರೂಪ ತೋರಿಸಿ ಬೆಚ್ಚಿ ಬೀಳಿಸಿವೆ. ಹಾಗಾದರೆ ಈಗಿನ ಪರಿಸ್ಥಿತಿ ನೋಡಿದರೆ ಬೆಂಗಳೂರಿನಲ್ಲಿ ಕೂಡ ಭರ್ಜರಿ ಮಳೆ ಆಗುತ್ತಾ? ಮುಂದೆ ಓದಿ.

ಸಂಜೆ ನಂತರ ಬೆಂಗಳೂರಿನಲ್ಲಿ ಮಳೆ!

ಕನ್ನಡಿಗರ ರಾಜಧಾನಿ ಬೆಂಗಳೂರಿನ ಪರಿಸ್ಥಿತಿ ಹೇಗೆ ಆಗಿದೆ ಅಂದ್ರೆ, ಸರಿಯಾಗಿ ಸೂರ್ಯನ ನೋಡಲು ಆಗದೆ ಬೆಂಗಳೂರು ನಿವಾಸಿಗಳು ಪರದಾಡುತ್ತಿದ್ದಾರೆ. ಯಾಕಂದ್ರೆ, ಸತತ ಮಳೆಯ ಪರಿಣಾಮ ಬೆಂಗಳೂರಿನ ಜನರು ನಲುಗಿ ಹೋಗಿದ್ದು, ಏನು ಮಾಡಬೇಕು? ಅಂತಾ ನರಳುವ ಪರಿಸ್ಥಿತಿ ಬಂದಿದೆ. ಇಂತಹ ಸಮಯದಲ್ಲೇ ಮುಂದಿನ ಒಂದು ವಾರ ಮತ್ತೆ ಬೆಂಗಳೂರಿನಲ್ಲಿ ಮಳೆ ಅಬ್ಬರಿಸುವ ಎಚ್ಚರಿಕೆ ನೀಡಲಾಗಿದ್ದು, ಇಂದು ಸಂಜೆಯ ನಂತರ ಮಳೆರಾಯ ಭರ್ಜರಿ ಎಂಟ್ರಿ ಕೊಡಲಿದ್ದಾನೆ ನಮ್ಮ ಬೆಂಗಳೂರು ನಗರಕ್ಕೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+