ರೈಲ್ವೆ ಯೋಜನೆಗಳಿಂದ ರಾಜ್ಯಕ್ಕೆ ಹೊರೆ : ಸಿದ್ದರಾಮಯ್ಯ
ಬೆಂಗಳೂರು, ಫೆ.9 : ರಾಜ್ಯದಲ್ಲಿ ಇನ್ನು ಮುಂದೆ ಜಾರಿಯಾಗುವ ಹೊಸ ರೈಲ್ವೆ ಯೋಜನೆಗಳ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಬೇಕು. ರಾಜ್ಯ ಸರ್ಕಾರ ವೆಚ್ಚ ಭರಿಸಿದರೆ ಹೊರೆಯಾಗಲಿದೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ.
ಭಾನುವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಮೊದಲ ಸಭೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳ ವೆಚ್ಚದ ಪೈಕಿ ಮೂರನೇ ಎರಡರಷ್ಟನ್ನು ಕೇಂದ್ರವೇ ಭರಿಸಲಿ. ಮೂರನೇ ಒಂದು ಭಾಗದಷ್ಟು ವೆಚ್ಚವನ್ನು ಮಾತ್ರ ರಾಜ್ಯ ಸರ್ಕಾರ ಭರಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. [ಪಿಟಿಐ ಚಿತ್ರ]

ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಪ್ರಸ್ತುತ ರಾಜ್ಯ ಸರ್ಕಾರ ರೈಲ್ವೆ ಯೋಜನೆಗೆಂದು ಸುಮಾರು 10,000 ಕೋಟಿ ವೆಚ್ಚ ಮಾಡುತ್ತಿದೆ. ಯೋಜನೆಗಳಲ್ಲಿ ಶೇ.50ರಷ್ಟು ವೆಚ್ಚವನ್ನು ರಾಜ್ಯ ಭರಿಸುತ್ತಿದ್ದು, ಉಚಿತವಾಗಿ ಭೂಮಿಯನ್ನು ನೀಡುತ್ತಿದೆ. [ಬೆಂಗಳೂರು : 4 ನೂತನ ರೈಲುಗಳ ವೇಳಾಪಟ್ಟಿ]
ಆದ್ದರಿಂದ, ರಾಜ್ಯ ಸರ್ಕಾರದ ಪಾಲಿಗೆ ಹೊರೆಯಾಗುತ್ತಿದೆ ಎಂದು ಸಭೆಯಲ್ಲಿ ತಿಳಿಸಲಾಗಿದೆ. ಇನ್ನು ಮುಂದೆ ರಾಜ್ಯದ ರೈಲ್ವೆಯೋಜನೆಗಳ ವೆಚ್ಚ ಭರಿಸಲು ಸಾಧ್ಯವಿಲ್ಲ. ಅದನ್ನು ಕೇಂದ್ರವೇ ಭರಿಸಲಿ. ಜತೆಗೆ, ಸದ್ಯ ಪ್ರಗತಿಯಲ್ಲಿರುವ ಕಾಮಗಾರಿಗಳ ವೆಚ್ಚದ ಪೈಕಿ ಮೂರನೇ ಎರಡರಷ್ಟನ್ನು ಕೇಂದ್ರ ಭರಿಸಲಿ ಎಂದು ಸಭೆಯಲ್ಲಿ ತಿಳಿಸಲಾಗಿದೆ ಎಂದರು. [ಮನೆ ಬಾಗಿಲಿಗೆ ಬರುತ್ತೆ ರೈಲ್ವೆ ಟಿಕೆಟ್ ]

ಮೊಬೈಲ್ ಒನ್ ಸೇವೆ ಬಗ್ಗೆ ಮಾಹಿತಿ : ಸಭೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಾದ 'ಮೇಕ್ ಇನ್ ಇಂಡಿಯಾ, 'ಸ್ವತ್ಛ ಭಾರತ' ಮುಂತಾದವುಗಳ ಬಗ್ಗೆ ಚರ್ಚೆ ನಡೆಯಿತು. ಕರ್ನಾಟಕದ 'ಮೊಬೈಲ್ ಒನ್ ಯೋಜನೆ ಬಗ್ಗೆ ಸಭೆಯಲ್ಲಿ ಪ್ರಧಾನಿಗಳಿಗೆ ಮಾಹಿತಿ ನೀಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು. [ನೆಹರೂ ಕಾಲದ 'ಆಯೋಗ' ಕ್ಕೆ ಹೊಸ ಹೆಸರಿಟ್ಟ ಮೋದಿ]
14ನೇ ಹಣಕಾಸು ಆಯೋಗದ ವರದಿಯನ್ನು ಕೇಂದ್ರ ಸರ್ಕಾರ ಇನ್ನೂ ಸ್ವೀಕರಿಸಿಲ್ಲ. ಆದ್ದರಿಂದ ತಕ್ಷಣವೇ ಈ ವರದಿಯನ್ನು ಸ್ವೀಕರಿಸುವಂತೆ ಒತ್ತಾಯಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.












Click it and Unblock the Notifications