Rameswaram Rail: ಕರ್ನಾಟಕದ 3 ಕಡೆಯಿಂದ ರಾಮೇಶ್ವರಗೆ ರೈಲು ಅನುಮೋದನೆ, ಶುರುವಾಗದ ಸೇವೆ
South Western Railway: ತಮಿಳುನಾಡಿನಲ್ಲಿ ಪ್ರಧಾನಿ ಮೋದಿಯವರಿಂದ ಉದ್ಘಾಟನೆಗೊಂಡ ಪಂಬನ್ ರೈಲ್ವೆ ಬ್ರಿಡ್ಜ್ ಮೇಲೆ ಸಾಕಷ್ಟು ರೈಲುಗಳು ಸಂಚರಿಸಲು ಅನುಕೂಲವಾಗಿದೆ. ಸಮುದ್ರ ಮೇಲ್ಮೈ ಬ್ರಿಡ್ಜ್ ಮೇಲೆ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೆ, ಕರ್ನಾಟಕದ ವಿವಿಧ ಭಾಗಗಳಿಂದ ರಾಮೇಶ್ವರಂಗೆ ರೈಲು ಸಂಚಾರಕ್ಕೆ ಅನುಮೋದನೆ ದೊರೆಯಿತು. ಹೀಗಿದ್ದರೂ ಸಹಿತ ಈ ವರೆಗೆ ಸೇವೆ ಆರಂಭವಾಗಿಲ್ಲ. ಈ ಸಂಬಂಧ ರಾಜ್ಯ ರೈಲ್ವೆ ಬಳಕೆದಾರರು ರೈಲು ಸೇವೆ ಆರಂಭಕ್ಕೆ ಒತ್ತಾಯಿಸುತ್ತಿದ್ದಾರೆ.
ತಮಿಳುನಾಡಿನ ರಾಮೇಶ್ವರಂನಲ್ಲಿ ಪಂಬನ್ ರೈಲ್ವೆ ಬ್ರೀಡ್ಜ್ ನಿರ್ಮಾಣದಿಂದಾಗಿ ರೈಲ್ವೆ ಸಾರಿಗೆ ಸಾಕಷ್ಟು ಅನುಕೂಲವಾಗಿದೆ. ಇದನ್ನು ಗಮನಿಸಿಯೇ ಹುಬ್ಬಳ್ಳಿ-ರಾಮೇಶ್ವರಂ ವೀಕ್ಲಿ ಎಕ್ಸ್‌ಪ್ರೆಸ್ ರೈಲು ವಿಸ್ತರಿಸಬೇಕಿದೆ. ಮೈಸೂರು-ರಾಮೇಶ್ವರಂ ಎಕ್ಸ್‌ಪ್ರೆಸ್ ರೈಲು ಹಾಗೂ ಮಂಗಳೂರು-ರಾಮೇಶ್ವರಂ ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ಅನುಮೋದನೆ ನೀಡಿ, ಅವಧಿ ವಿಸ್ತರಣೆ ಮಾಡಲಾಗಿದೆ. ಹೀಗಿದ್ದರೂ ಸಹ ಸೇವೆ ಆರಂಭವಾಗದ್ದಕ್ಕೆ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ 'ಕರ್ನಾಟಕ ರೈಲ್ ಯೂಸರ್ಸ್' ಸಾಮಾಜಿಕ ಜಾಲತಾಣ ಮೂಲಕ ಆಗ್ರಹಿಸಿದೆ.

ಹಳಿ ಹತ್ತದ ರಾಮೇಶ್ವರಂ ರೈಲುಗಳು
ಸದ್ಯ ಹುಬ್ಬಳ್ಳಿ - ರಾಮನಾಥಪುರಂ ಎಕ್ಸ್‌ಪ್ರೆಸ್ ರೈಲನ್ನು ರಾಮೇಶ್ವರಂವರೆಗೆ ವಿಸ್ತರಿಸುವಂತೆ ಬೇಡಿಕೆ ಇಡಲಾಗಿದೆ. ಜನರ ಬೇಡಿಕೆಯ ಮೇರೆಗೆ ವಿಶೇಷ ರೈಲು ಹುಬ್ಬಳ್ಳಿ ರೈಲು (07355 /07356) ರಾಮನಾಥಪುರಂ ವರೆಗೆ ಕಾರ್ಯನಿರ್ವಹಿಸುತ್ತಿದೆ.
ಇದೇ ವಿಶೇಷ ರೈಲು ರಾಮೇಶ್ವರಂ ವರೆಗೆ ವಿಸ್ತರಿಸುವ ಬಗ್ಗೆ ಕಾರ್ಯಾಚರಣೆ ಮಾಡುವ ಕಾರ್ಯಸಾಧ್ಯತೆ ಕುರಿತು ಶೀಗ್ರವೇ ತೀರ್ಮಾನಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ. ಆದರೆ ಈವರೆಗೂ ಆ ಬಗ್ಗೆ ತಿರ್ಮಾನ ಕೈಗೊಂಡಿಲ್ಲ ಎನ್ನಲಾಗಿದೆ.
ಇನ್ನು ಕರಾವಳಿ ಭಾಗದ ಮಂಗಳೂರು-ರಾಮೇಶ್ವರಂ ಎಕ್ಸ್‌ಪ್ರೆಸ್ ರೈಲು ಒಂದು ವರ್ಷದ ಹಿಂದೆ ಅನುಮೋದನೆಗೊಂಡಿದೆ. ಆದರೆ ಈವರೆಗೆ ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಆದರೆ ಈವರೆಗೆ ರೈಲು ಕಾರ್ಯಾಚರಣೆ ನಡೆಸಿಲ್ಲ. ಯಾವಾಗಿನಿಂದ ಈ ಮಾರ್ಗದಲ್ಲಿ ರೈಲು ಸೇವೆ ಶುರುವಾಗುತ್ತದೆ ಅಂತಲೂ ಮಾಹಿತಿ ನೀಡಲಾಗಿಲ್ಲ.
ಕರ್ನಾಟಕ ಉದ್ಯಾನ ನಗರಿ ಮೈಸೂರು- ರಾಮೇಶ್ವರಂ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಅವಕಾಶ ನೀಡುವಂತೆ ವರ್ಷಗಳಿಂದಲೂ ಪ್ರಸ್ತಾಪಿಸಲಾಗಿದೆ. ರೈಲ್ವೆ ಮಂಡಳಿ ಮುಂದೆ ಅನುಮೋದನೆ ಕೇಳಲಾಗಿದೆ. ಆದರೆ ಮೈಸೂರು-ರಾಮೇಶ್ವರ ರೈಲು ಸೇವೆ ಅನುಮೋದನೆ ನೀಡಿಲ್ಲ. ಈ ಸಂಬಂಧ ಈ ಮೂರು ಮಾರ್ಗ ರೈಲು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತೀಯ ರೈಲ್ವೆ ಇಲಾಖೆ ಈ ಮೂರು ಮಾರ್ಗಗಳ ಜನರ ಬೇಡಿಕೆ ಕೂಡಲೇ ಈಡೇರಿಸುವಂತೆ ಆಗ್ರಹಿಸಿದ್ದಾರೆ.
ಏಪ್ರಿಲ್ ಮೊದಲವಾರ ಪ್ರಧಾನ ಮಂತ್ರಿಯವರು ಐತಿಹಾಸಿಕ ರಾಮೇಶ್ವರಂ ರೈಲು ನಿಲ್ದಾಣವನ್ನು ಸಂಪರ್ಕಿಸುವ ನೂತನ ರೈಲು ಸೇತುವೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದರು. ಹುಬ್ಬಳ್ಳಿ, ಮೈಸೂರು ಮತ್ತು ಮಂಗಳೂರು ನಗರಗಳಿಂದ ರಾಮೇಶ್ವರಂಗೆ ಸಂಪರ್ಕಿಸಲು ರೈಲು ಸೇವೆ ಆರಂಭಿಸಲು ನಿರ್ಧಾರವಾಗಿದ್ದರೂ, ಇಂದಿಗೂ ವಿಸ್ತರಣೆ ಅಥವಾ ಹೊಸ ರೈಲು ಸೇವೆಗಳು ಪ್ರಾರಂಭವಾಗಿದಿರುವುದು ದುರ್ದೈವದ ಸಂಗತಿ.
ಹುಬ್ಬಳ್ಳಿ-ರಾಮನಾಥಪುರಂ ರೈಲು ರಾಮೇಶ್ವರಂವರೆಗೆ ಕಾರ್ಯಾಚರಣೆ ಮಾಡುತ್ತಿಲ್ಲ. ಮೈಸೂರು ಮತ್ತು ಮಂಗಳೂರು ರೈಲುಗಳು ಶೀಘ್ರವೇ ಆರಂಭವಾಗಲಿದೆ ಎಂಬ ನಿರೀಕ್ಷೆಯಲ್ಲಿ ಜನರು ಕಾಯುತ್ತಿದ್ದಾರೆ.












Click it and Unblock the Notifications