ರಾಯಚೂರು : ಅ.31ರಂದು ದೇವದುರ್ಗದಲ್ಲಿ ಉದ್ಯೋಗ ಮೇಳ

ರಾಯಚೂರು, ಅಕ್ಟೋಬರ್ 26 : ರೈಲ್ವೆ ಅಪಘಾತದಲ್ಲಿ ಮೃತಪಟ್ಟ ದೇವದುರ್ಗ ಕ್ಷೇತ್ರದ ಶಾಸಕ ಎ.ವೆಂಕಟೇಶ್ ನಾಯಕ್ ಅವರ ನೆನಪಿಗಾಗಿ ಕರ್ನಾಟಕ ಎನ್‌ಎಸ್‌ಯುಐ ಮತ್ತು ಎಸ್‌ಎಸ್‌ಬಿ ಸಲ್ಯೂಷನ್ ಜಂಟಿಯಾಗಿ ದೇವದುರ್ಗದಲ್ಲಿ ಅಕ್ಟೋಬರ್ 31ರಂದು ಉದ್ಯೋಗ ಮೇಳವನ್ನು ಹಮ್ಮಿಕೊಂಡಿವೆ.

ದೇವದುರ್ಗದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಅಕ್ಟೋಬರ್ 31ರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ ಈ ಉದ್ಯೋಗ ಮೇಳ ನಡೆಯಲಿದೆ. ಮೇಳಕ್ಕೆ ಪ್ರವೇಶ ಉಚಿತವಾಗಿದ್ದು, ಯಾವುದೇ ಶುಲ್ಕವನ್ನು ಪಾವತಿ ಮಾಡಬೇಕಾಗಿಲ್ಲ. [ರೈಲು ಅಪಘಾತ : ಶಾಸಕ ವೆಂಕಟೇಶ ನಾಯಕ್ ಸಾವು]

raichur

60ಕ್ಕೂ ಅಧಿಕ ಕಂಪನಿಗಳು ಉದ್ಯೋಗ ಮೇಳಕ್ಕೆ ಆಗಮಿಸಲಿದ್ದು, ಸ್ಥಳದಲ್ಲಿಯೇ ನೇಮಕಾತಿ ಮಾಡಿಕೊಳ್ಳಲಿವೆ.
ಹೆಚ್‌ಸಿಎಲ್, ವಿಪ್ರೋ, ಅಮೇಜಾಜ್, ಏರ್ ಟೆಲ್, ವೋಡಾಪೋನ್, ಟಿವಿಎಸ್, ಮುತ್ತೋಟ್ ಫೈನಾನ್ಸ್ ಮುಂತಾದ ಕಂಪನಿಗಳು ಮೇಳಕ್ಕೆ ಆಗಮಿಸಲಿವೆ. [ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ]

ಉದ್ಯೋಗ ಮೇಳಕ್ಕೆ ಆಗಮಿಸುವ ಯುವಕ-ಯುವತಿಯರು ಅಗತ್ಯದಷ್ಟು ದಾಖಲೆಗಳನ್ನು ತರುವಂತೆ ಸಂಘಟಕರು ಮನವಿ ಮಾಡಿದ್ದಾರೆ. ಹೆಚ್ಚಿನ ವಿವರಗಳಿದಾಗಿ 9964998284/9448524639/9844612861 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ. [ಆರೋಗ್ಯ ಇಲಾಖೆಯಲ್ಲಿ ಕೆಲಸ ಖಾಲಿ ಇದೆ]

2015ರ ಆಗಸ್ಟ್ 24ರಂದು ಆಂಧ್ರಪ್ರದೇಶದ ಮಡಕಶಿರ ಬಳಿ ನಡೆದ ರೈಲು ಅಪಘಾತದಲ್ಲಿ ದೇವದುರ್ಗದ ಶಾಸಕ ವೆಂಕಟೇಶ್ ನಾಯಕ್ ಮೃತಪಟ್ಟಿದ್ದರು. ಅವರ ನೆನಪಿಗಾಗಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+