'ದೇಗುಲಗಳ ಸರ್ಕಾರದ ಸುಪರ್ದಿಗೆ ತರುವವರಿಗೆ ಈಗ ದೇವರೇ ಗತಿಯಾಯ್ತಾ?!'

Posted By:
Subscribe to Oneindia Kannada

"ದೇಗುಲಗಳನ್ನು ಸರ್ಕಾರದ ಸುಪರ್ದಿಗೆ ತರುವವರಿಗೆ ಈಗ ದೇವರೇ ಗತಿಯಾಯ್ತಾ?!" ಹಾಗಂತ ಟ್ವಿಟ್ಟರ್ ನಲ್ಲೊಬ್ಬರು ಕರ್ನಾಟಕ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಕರ್ನಾಟಕಕ್ಕೆ ನಾಲ್ಕು ದಿನಗಳ ಪ್ರಚಾರ ಕಾರ್ಯಕ್ಕಾಗಿ ಆಗಮಿಸಿರುವ ರಾಹುಲ್ ಗಾಂಧಿಯವರನ್ನು "Election Hindu" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಜರೆದಿರುವುದನ್ನು ಹಲವರು ಬೆಂಬಲಿಸಿದ್ದಾರೆ.

Election Hindu ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಹಲವರು ರಾಹುಲ್ ಗಾಂಧಿಯವರ ದೇಗುಲ ಭೇಟಿಯನ್ನು ಆಡಿಕೊಂಡಿದ್ದಾರೆ. ಅಲ್ಲದೆ ಇತ್ತೀಚೆಗಷ್ಟೇ, ಮಠ ಮಾನ್ಯಗಳನ್ನು ಸರ್ಕಾರದ ಸುಪರ್ದಿಗೆ ತರುವುದಾಗಿ ಹೇಳುತ್ತಿದ್ದ ಸಿದ್ದು ಸರ್ಕಾರ ಈಗೇಕೆ ದೇವರೇ ಗತಿ ಎನ್ನುತ್ತಿದೆ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಕರ್ನಾಟಕಕ್ಕೆ ರಾಹುಲ್ ಗಾಂಧಿ: ಸ್ವಾಗತವೂ... ಕಾಲೆಳೆತವೂ..!

ಹಲವು ವಿರೋಧಗಳಿಂದಾಗಿ ಮಠಗಳನ್ನು ಸರ್ಕಾರದ ಅಡಿಗೆ ತರುವ ಯೋಜನೆಯನ್ನು ಕರ್ನಾಟಕ ಸರ್ಕಾರ ಇದೀಗ ಕೈಬಿಟ್ಟಿದೆ. ಆದರೆ ಜನರು ಮಾತ್ರ ಇನ್ನೂ ಸುಮ್ಮನಾಗಿಲ್ಲ. ರಾಹುಲ್ ಭೇಟಿಗೂ ಅದಕ್ಕೂ ಸುಖಾಸುಮ್ಮನೆ ಸಂಬಂಧ ಕಲ್ಪಿಸಿ ಕಾಲೆಳೆಯುವ ಕೆಲಸ ಮುಂದುವರಿಸಿದ್ದಾರೆ.

ಎಲ್ಲಿತ್ತು ನಿಮ್ಮ ಬುದ್ಧಿ?

ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನಿಮಗೆ ಹಿಂದುಗಳು ನೆನಪಾಗುತ್ತಾರೆ. ಈಗ ಜಾತಿ ಓಲೈಕೆ ಮಾಡುವುದಿಲ್ಲ ಎಂದು ವಿಶ್ವಾಸ ಗಳಿಸಲು ನೋಡುವ ನಿಮಗೆ, ಮಠ ಮಾನ್ಯಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಯೋಚನೆ ಮಾಡುವಾಗ ಬುದ್ಧಿ ಎಲ್ಲಿತ್ತು? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ ವಿಠ್ಠಲ್ ರಾಜ್.

ಭಾರತೀಯರನ್ನು ಮೂರ್ಖರನ್ನಾಗಿಸುತ್ತಿದ್ದಾರೆ!

ಕಾಂಗ್ರೆಸ್ಸಿನ ಕುಟುಂಬ ರಾಜಕಾರಣಕ್ಕೆ ಇಲೆಕ್ಷನ್ ಹಿಂದು ಎಂಬ ಪದ ಚೆನ್ನಾಗಿ ಒಪ್ಪುತ್ತದೆ. ಎಷ್ಟು ರಾಜಾರೋಷವಾಗಿ ಅವರು ಮತ್ತು ಅವರ ಅನುಯಾಯಿಗಳು ಭಾರತೀಯರನ್ನು ಮೋಸ ಮಾಡುತ್ತಿದ್ದಾರೆ ಎಂದು ಐ ಓಪನರ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ರಾಹುಲ್ ಗಾಂಧಿಯವರಿಗೆ ಸ್ವಾಗತ

Elction Hindu ರಾಹುಲ್ ಗಾಂಧಿಯವರಿಗೆ ಸ್ವಾಗತ! ಅವರು ಕರ್ನಾಟಕದಲ್ಲಿ ಪ್ರಚಾರ ಮಾಡಿದರೆ ಬಿಜೆಪಿ ಗೆಲ್ಲುತ್ತದೆಂದು ನನಗೆ ವಿಶ್ವಾಸವಿದೆ ಎಂದು ಕಾಲೆಳೆದಿದ್ದಾರೆ ಸತೀಶ್ ಉತ್ನಾಳ್.

ಇದು ಹೊಸ ರೀತಿಯ ಹಿಂದು!

ಹಿಂದುಗಳಲ್ಲಿ ಹಲವು ರೀತಿಯಿದೆ. ಕಟ್ಟರ್ ಹಿಂದು, ಉದಾರ ಹಿಂದು ಇತ್ಯಾದಿ, ಇತ್ಯಾದಿ. ಆದರೆ ಗುಜರಾತ್ ಚುನಾವಣೆಯ ಸಮಯದಲ್ಲಿ ಇದರಲ್ಲೇಹೊಸ ವಿಧವನ್ನು ಹುಡುಕಲಾಗಿದೆ. ಅದೇ 'ಚುನಾವಣೆ ಹಿಂದು(Election Hindu)'. ಈಗ ಪ್ರಶ್ನೆಗೆ ಉತ್ತರಿಸಿ, 'ಗುಜರಾತ್ ಚುನಾವಣೆಯ ನಂತರ ರಾಹುಲಾ ಗಾಂಧಿಯವರು ಗುಜರಾತಿನ ಎಷ್ಟು ದೇವಾಲಯಗಳಿಗೆ ಭೇಟಿ ನೀಡಿದ್ದರು?' ಎಂದು ಪ್ರಶ್ನಿಸಿದ್ದಾರೆ ಮಂಗೋ ಆದ್ಮಿ ಎನ್ನುವವರು.

ದೇವಾಲಯದೆಡೆಗೆ ಓಟ!

ಇಲೆಕ್ಷನ್ ಹಿಂದು ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ತಮ್ಮ ದೇವಾಲಯದ ಕಡೆಗಿನ ಓಟ ಆರಂಭಿಸಿದ್ದಾರೆ ಎಂದು ಕುಟುಕಿದ್ದಾರೆ ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
AICC President Rahul Gandhi has started his 4 days Karnataka tour from today(Feb 10th). Specially Rahul Gandhi will visit North Karnataka districts. BJP leaders in Karnataka calling Rahul Gandhi a election Hindu. A twitter tag created as 'Election Hindu' now!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ