ಕಾಗಿನೆಲೆ ಮಠಕ್ಕೆ ರಾಹುಲ್, ಅಮಿತ್ ಶಾ ಭೇಟಿ
ಹಾವೇರಿ, ಏಪ್ರಿಲ್ 03 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಕಾಗಿನೆಲೆ ಮಠಕ್ಕೆ ಭೇಟಿ ನೀಡಿದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸಹ ಮಠಕ್ಕೆ ಭೇಟಿ ನೀಡಿದ್ದರು.
ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅವರು ಕಾಗಿನೆಲೆ ಮೂಲ ಪೀಠದಿಂದ ಬೆಳ್ಳೂಡಿ ಶಾಖಾ ಮಠಕ್ಕೆ ಆಗಮಿಸಿದ್ದರು. ಆದ್ದರಿಂದ, ರಾಹುಲ್ ಗಾಂಧಿ ಅವರು ಸ್ವಾಮೀಜಿಗಳ ದರ್ಶನ ಪಡೆದರು.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕಾಗಿನೆಲೆ ಮೂಲ ಪೀಠಕ್ಕೆ ಭೇಟಿ ನೀಡಿದರು. ಆದರೆ, ಸ್ವಾಮೀಜಿ ಬೆಳ್ಳೂಡಿ ಪೀಠದಲ್ಲಿದ್ದ ಕಾರಣ ಅಮಿತ್ ಶಾ ಅವರಿಗೆ ಸ್ವಾಮೀಜಿಗಳ ದರ್ಶನ ಸಿಗಲಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿದಂತೆ ವಿವಿಧ ನಾಯಕರು ಬೆಳ್ಳೂಡಿ ಶಾಖಾ ಮಠದಲ್ಲಿ ನಿರಂಜನಾನಂದಪುರಿ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ಕಾಗಿನೆಲೆ ಮೂಲ ಪೀಠದಲ್ಲಿ ತಿಂಥಣಿ ಮಠದ ಸಿದ್ದರಾಮ ಸ್ವಾಮೀಜಿ, ಹೊಸದುರ್ಗದ ಈಶ್ವರಾನಂದಪುರಿ ಸ್ವಾಮೀಜಿ, ಕಾಗಿನೆಲೆ ಕಿರಿಯ ಸ್ವಾಮೀಜಿ ಮುಂತಾದವರು ಉಪಸ್ಥಿತರಿದ್ದರು.











Click it and Unblock the Notifications