ಡಿಕೆಶಿ ಐಟಿ ದಾಳಿ ಪ್ರಭಾವ, ರಾಹುಲ್ ಗಾಂಧಿ ರಾಜ್ಯಕ್ಕೆ ಬರ್ತಿಲ್ಲǃ

Posted By:
Subscribe to Oneindia Kannada

ರಾಯಚೂರು, ಆಗಸ್ಟ್ 03:ಆಗಸ್ಟ್ 4 ರಂದು ರಾಯಚೂರಿನಲ್ಲಿ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನ ಆಯೋಜಿಸಲಾಗಿದೆ. ಸಮಾವೇಶದಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳಬೇಕಿತ್ತು. ಆದರೆ, ಕೊನೆಕ್ಷಣದಲ್ಲಿ ರಾಹುಲ್ ಗಾಂಧಿ ಅವರ ವೇಳಾಪಟ್ಟಿ ಬದಲಾಗಿದೆ. ಇದಕ್ಕೆ ಡಿಕೆ ಶಿವಕುಮಾರ್ ಅವರ ಮನೆ ಮೇಲಿನ ಐಟಿ ದಾಳಿಯೇ ಕಾರಣ ಎನ್ನಲಾಗಿದೆ.

ಮಾಜಿ ಸಿಎಂ ಧರಮಸಿಂಗ್ ನಿಧನದಿಂದಾಗಿ ಸಮಾವೇಶವನ್ನ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಮೇಲಿನ ಐಟಿ ದಾಳಿಯಿಂದಾಗಿ ರಾಹುಲ್ ಗಾಂಧಿ ಅವರು ಕರ್ನಾಟಕಕ್ಕೆ ಬರಲು ಹಿಂದೇಟು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

Rahul Gandhi cancels his visit to Raichur on August 04

ರಾಜ್ಯಸಭೆ ಮತ್ತು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದ್ದು ಇದರ ಬಗ್ಗೆ ಕಾಂಗ್ರೆಸ್ ಯುವರಾಜ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. ಹೀಗಾಗಿ, ಯಾವುದೇ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರ ಆಪ್ತ ವಲಯ ಹೇಳಿದೆ.

ಧರಂಸಿಂಗ್ ಹೈದ್ರಾಬಾದ್ ಕರ್ನಾಟಕದ ಪ್ರಶ್ನಾತೀತ ನಾಯಕರಾಗಿದ್ದರು. ಅವರಿಗೆ ಗೌರವ ನೀಡುವ ಉದ್ದೇಶದಿಂದಾಗಿ ಸಮಾವೇಶವನ್ನ ಮುಂದೂಡಲಾಗಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಬಾದರ್ಲಿ ಹೇಳಿದ್ದಾರೆ.

Rahul Gandhi decides to protest against IT Department | Oneindia Kannada

ರಾಯಚೂರಿನಲ್ಲಿ ಯುವ ಕಾಂಗ್ರೆಸ್ ಸಮಾವೇಶ, ಸಿಂಧನೂರಿನಿಂದ ರಾಯಚೂರಿನ ತನಕ ಪಾದಯಾತ್ರೆ, ಮೆರವಣಿಗೆ ಆಯೋಜನೆ ಮಾಡಿದ್ದ ಬಸವನಗೌಡ ಅವರು ಈಗ ಅನಿವಾರ್ಯವಾಗಿ ಎಲ್ಲವನ್ನು ರದ್ದುಗೊಳಿಸಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
AICC vice president Rahul Gandhi has cancelled his visit to Raichur. Rahul Gandhi was scheduled attend the Youth congress convention on August 04 organised by Basavanagowda Badarli, State Youth Congress president.
Please Wait while comments are loading...