ಮುಳವಾಡದಲ್ಲಿ ರಾಹುಲ್ ರಿಂದ ಮೋದಿ ಮೌನದ 'ಗುಣಗಾನ'!

ವಿಜಯಪುರ, ಫೆಬ್ರವರಿ 25 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ವಿಜಯಪುರದಲ್ಲಿ ಕಾರ್ಯಕರ್ತರ ಜೊತೆ ಸಂವಾದ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ಮೂರು ದಿನಗಳ ಕರ್ನಾಟಕ ಪ್ರವಾಸದಲ್ಲಿದ್ದಾರೆ.

ಚಿತ್ರಗಳು : ವಿಜಯಪುರದಲ್ಲಿ ರಾಹುಲ್ ಪ್ರವಾಸ

ಮುಳವಾಡದ ಮಲ್ಲಿಕಾರ್ಜುನ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯುತ್ತಿದೆ. ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮುಂತಾದವರು ಉಪಸ್ಥಿತರಿದ್ದಾರೆ.

Rahul Gandhi address rally in Muluvada, Vijayapura

Feb 25, 2018, 1:17 pm IST

ದೇಶದಲ್ಲಿ ರೈತರ, ಬಡವರ ಹಣ ಉದ್ಯಮಿಗಳ ಹಣ ಶ್ರೀಮಂತರ ಪಾಲಾಗುತ್ತಿದೆ. ಆದರೂ ನರೇಂದ್ರ ಮೋದಿ ಅವರು ಮೌನವಾಗಿದ್ದಾರೆ
Feb 25, 2018, 1:16 pm IST

ನುಡಿದಂತೆ ನಡೆಯಿರಿ ಎಂದು ಮೋದಿ ಅವರನ್ನು ವ್ಯಂಗ್ಯವಾಡಿದ ರಾಹುಲ್ ಗಾಂಧಿ, ಉದ್ಯೋಗ ಸೃಷ್ಟಿ ಮಾಡಿ ಎಂದು ಆಗ್ರಹಿಸಿದರು.
Feb 25, 2018, 1:13 pm IST

ನಾನು ನಿಮ್ಮ ಸೇವಕ ಎಂದು ಹೇಳುವ ಮೋದಿ. ನೀರವ್ ಮೋದಿ ದೇಶದ ಹಣವನ್ನು ತೆಗೆದುಕೊಂಡು ಹೋದಾಗ ಏನು ಮಾಡುತ್ತಿದ್ದರು.
Feb 25, 2018, 1:13 pm IST

ನರೇಂದ್ರ ಮೋದಿ ಅವರ ಕೃಪೆಯಿಂದ ಹಲವು ಜನರು ಕಪ್ಪು ಹಣವನ್ನು ಬಿಳಿ ಮಾಡಿಕೊಂಡರು. ನೋಟು ನಿಷೇಧದಿಂದ ಅವರಿಗೆ ಸಹಾಯಕವಾಯಿತು.
Feb 25, 2018, 1:11 pm IST

ನೀರಾವರಿಗೆ ಬಿಜೆಪಿ ಸರ್ಕಾರಕ್ಕಿಂತ ಹೆಚ್ಚಿನ ಅನುದಾನವನ್ನು ನಾವು ನೀಡಿದ್ದೇವೆ. ಕೇಂದ್ರ ಸರ್ಕಾರಕ್ಕಿಂತ ಶೇ 3ರಷ್ಟು ಹೆಚ್ಚಿನ ಅನುದಾನ ನೀಡಿದ್ದೇವೆ.
Feb 25, 2018, 1:05 pm IST

ಆದಿವಾಸಿಗಳ, ದಲಿತರ ಪರವಾಗಿ ಕರ್ನಾಟಕ ಸರ್ಕಾರವಿದೆ. ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ನೀಡಿದ್ದಕ್ಕಿಂತ ಹೆಚ್ಚಿನ ಹಣವನ್ನು ಕರ್ನಾಟಕ ಸರ್ಕಾರ ನೀಡಿ, ಅವರ ಅಭಿವೃದ್ಧಿಗೆ ನೆರವಾಗಿದೆ.
Feb 25, 2018, 1:02 pm IST

ನರೇಂದ್ರ ಮೋದಿ ಅವರೇ ಸ್ಪಷ್ಟವಾಗಿ ಹೇಳಿ, ದೇಶದಲ್ಲಿ ಕಷ್ಟ ಪಟ್ಟು ಕೆಲಸ ಮಾಡುವ ರೈತರ ಸಾಲವನ್ನು ನೀವು ಮನ್ನಾ ಮಾಡುವಿರಾ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
Feb 25, 2018, 1:00 pm IST

ಬಸವಣ್ಣ ಅವರು ಕಾಯಕವೇ ಕೈಲಾಸ ಎಂದು ಹೇಳಿದ್ದರು. ಇಲ್ಲಿನ ರೈತರು ಈ ವಚನದ ಅನುಸಾರವೇ ಕಷ್ಟಪಟ್ಟು ಬೆಳೆ ಬೆಳೆಯುತ್ತಿದ್ದಾರೆ.
Feb 25, 2018, 12:57 pm IST

ಕರ್ನಾಟಕ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುತ್ತಿದೆ. ಎಲ್ಲರಿಗೂ ಅವಕಾಶಗಳು ಸಿಗುವಂತೆ ಮಾಡಲಾಗಿದೆ ಎಂದರು.
Feb 25, 2018, 12:57 pm IST

ಮುಳವಾಡದಲ್ಲಿ ಬೃಹತ್ ಸಮಾವೇಶ
Feb 25, 2018, 12:56 pm IST

ಬಸವಣ್ಣ ಅವರ ತತ್ವ ಮತ್ತು ಕಾಂಗ್ರೆಸ್ ಪಕ್ಷದ ತತ್ವ ಒಂದೇ ಆಗಿದೆ. ಎಲ್ಲಿರಿಗೂ ಸಮಪಾಲು, ಸಮಬಾಳು ಎಂಬ ತತ್ವದಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ ಎಂದು ಹೇಳಿದರು.
Feb 25, 2018, 12:56 pm IST

ಎಲ್ಲರಿಗೂ ಶರಣು ಶರಣಾರ್ಥಿ ಎಂದು ಭಾಷಣ ಆರಂಭಿಸಿದ ರಾಹುಲ್ ಗಾಂಧಿ ಬಸವಣ್ಣ ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+