14 ಜಿಲ್ಲೆಗಳ ರೈತರ ರಾಗಿ ಖರೀದಿಸಿ ನಿರ್ಲಕ್ಷಿಸಿದ ರಾಜ್ಯ ಸರ್ಕಾರ! ₹265 ಕೋಟಿ ಬಿಡುಗಡೆಗೆ ಬಿಜೆಪಿ ಆಗ್ರಹ

ಬೆಂಗಳೂರು: ಬರಗಾಲ ಘೋಷಣೆಗೂ ಹಿಂದೆ ಮುಂದೆ ನೋಡಿದ್ದ ರಾಜ್ಯ ಸರ್ಕಾರ ಇದೀಗ ರಾಜ್ಯದ 14 ಜಿಲ್ಲೆಗಳ 25,000ಕ್ಕೂ ಅಧಿಕ ರಾಗಿ ಬೆಳೆಗಾರರಿಗೆ ನೀಡಬೇಕಾದ ಬರೋಬ್ಬರಿ 265 ಕೋಟಿ ರೂ. ಹಣವನ್ನು ಬಾಕಿ ಉಳಿಸಿಕೊಂಡಿದೆ. ಈ ಮೂಲಕ ಬೆವರು ಸುರಿಸಿದ ದುಡಿದ ರೈತರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ವಸತಿ ವಿದ್ಯಾರ್ಥಿನಿಯರಿಗೂ ಸುರಕ್ಷತೆ ಇಲ್ಲದ ವಾತಾವರಣ ನಿರ್ಮಾಣವಾಗಿದೆ ಎಂದು ರಾಜ್ಯ ಬಿಜೆಪಿ ದೂರಿದೆ.

ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಿಜೆಪಿಯು, ರೈತರ ಬೆವರಿನ ರಾಗಿ ಕಸಿದು, ಅವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಸಿಎಂ ಡಿ.ಕೆ. ಶಿವಕುಮಾರ್ ಅವರ ಭ್ರಷ್ಟ ಸರ್ಕಾರಕ್ಕೆ ಅನ್ನದಾತರ ಕಣ್ಣೀರಿನ ಶಾಪ ತಟ್ಟದಿರದು ಎಂದು ದೂರಿದೆ.

Ragi Farmers

️ ಕನಿಷ್ಠ ಬೆಂಬಲ ಬೆಲೆಯಡಿ ರೈತರಿಂದ ರಾಗಿ ಖರೀದಿಸಿದ ಸರ್ಕಾರ, ಹಣ ನೀಡದೆ ವಂಚಿಸುತ್ತಿದೆ. ರಾಗಿ ಬೆಳೆಗಾರರ ಬರೋಬ್ಬರಿ 265 ಕೋಟಿ ರೂ. ಹಣ ನೀಡುತ್ತಿಲ್ಲ. ರಾಜ್ಯದಲ್ಲಿ ಒಂದೆಡೆ ಮಳೆಯಿಲ್ಲದೆ ಭೀಕರ ಬರಗಾಲದಿಂದ ರೈತ ಕಂಗೆಟ್ಟಿದ್ದಾರೆ. ಇತ್ತ ಸರ್ಕಾರ ಮಾತ್ರ ತುಮಕೂರು, ಹಾಸನ, ಮೈಸೂರು, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳ ರೈತರ ಹಣವನ್ನು ನೀಡದೆ ಸತಾಯಿಸುತ್ತಿದೆ ಎಂದು ಬಿಜೆಪಿ ವಿವರಿಸಿದೆ.

ಕಾಂಗ್ರೆಸ್ ಆಡಳಿತ ಕುರಿತು ಬಿಜೆಪಿ ಟೀಕೆ

ಕಾಂಗ್ರೆಸ್ ಎಟಿಎಂ ಸರ್ಕಾರಕ್ಕೆ ಕಲೆಕ್ಷನ್ ಮಾಡಲು ಮಾತ್ರ ಆಸಕ್ತಿಯಿದೆ. ಆದರೆ ರಕ್ತ-ಬೆವರು ಸುರಿಸಿ ಅನ್ನ ನೀಡುವ ರೈತನಿಗೆ ಹಣ ನೀಡಲು ಮಾತ್ರ ಬೊಕ್ಕಸ ಖಾಲಿ ಎನ್ನುತ್ತಿದೆ. ಮಿಸ್ಟರ್ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಅನ್ನದಾತನಿಗೆ ದ್ರೋಹ ಬಗೆದು ಆ ಹಣವನ್ನು ತಡೆಹಿಡಿದಿರುವುದು ನಿಮ್ಮ ಯಾವ ಪುರುಷಾರ್ಥಕ್ಕೆ? ರೈತರ ತಾಳ್ಮೆ ಪರೀಕ್ಷಿಸದೆ 265 ಕೋಟಿ ರೂ. ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದೆ.

ಮುಂದುವರಿದು ಬಿಜೆಪಿ ಸರಣಿ ಪೋಸ್ಟ್‌ಗಳ ಮೂಲಕ ಸಿಎಂ ಡಿ.ಕೆ. ಶಿವಕುಮಾರ್ ಸರ್ಕಾರದ ಆಡಳಿತವನ್ನು ಟೀಕಿಸಿದೆ. ರಾಜ್ಯದ ಆಡಳಿತ ಸಂಪೂರ್ಣ ಹಳ್ಳ ಹಿಡಿದಿದೆ. ಕನ್ನಡಿಗರ ಗೋಳು ಕೇಳುವವರೇ ಇಲ್ಲದಂತಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ನಿಂತಿಲ್ಲ, ಬೆಲೆ ಏರಿಕೆ ನಿಲ್ಲದೇ ಮುಂದುವರಿದಿದೆ. ಕಾನೂನು ಸುವ್ಯವಸ್ಥೆ ಸುಧಾರಿಸುತ್ತಿಲ್ಲ, ರೈತರಿಗೆ ಬರ ಪರಿಹಾರ ಸಿಗುತ್ತಿಲ್ಲ, 'ಬ್ರ್ಯಾಂಡ್ ಬೆಂಗಳೂರು' ಸರಿ ಹೋಗುತ್ತಿಲ್ಲ ಮತ್ತು ಸರ್ಕಾರದ ಖಜಾನೆ ತುಂಬುತ್ತಿಲ್ಲ.

ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಸುರಕ್ಷತೆ ಕೊರೆತೆ

ಬರೀ ಪೊಳ್ಳು ಭರವಸೆಗಳು ಹಾಗೂ ಒಣ ಪ್ರಚಾರದಲ್ಲೇ ಕಾಲಹರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದಿಂದ ಜನತೆಗೆ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ?. ರಾಯಚೂರು ಜಿಲ್ಲೆಯ ಪ್ರಮುಖ ನಗರವಾದ ಸಿಂಧನೂರಿನಲ್ಲಿ 'ಅಂಬೇಡ್ಕರ್ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಸುರಕ್ಷತೆ ಕೊರೆತೆ ನಡುವೆ ಬದುಕುವಂತಾಗಿದೆ. ಇಲ್ಲಿ ವಾರ್ಡ‌‌ನ್ ಇಲ್ಲ, ಸಿಸಿಟಿವಿ ಇಲ್ಲ, ಸರಿಯಾದ ಕಿಟಕಿ - ಬಾಗಿಲುಗಳಿಲ್ಲ, ವಸತಿ ನಿಲಯದಲ್ಲಿ ಸ್ವಚ್ಛತೆ ಅಂತು ಇಲ್ಲವೇ ಇಲ್ಲ ಎಂದು ಬಿಜೆಪಿ ಆಕ್ರೋಶ ಹೊರ ಹಾಕಿದೆ.

ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಬೇಕೆಂದು ವಿದ್ಯಾರ್ಥಿಗಳೇ ಕಾಲೇಜು ಕ್ಲಾಸ್ ಬಿಟ್ಟು, ತಮ್ಮ ಹಕ್ಕಿಗಾಗಿ ತಹಶಿಲ್ದಾರ ಕಚೇರಿ ಮುಂದೆ ಪ್ರತಿಭಟಿಸುವ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ತಂದೊಡ್ಡಿದೆ‌.

ವಿದ್ಯಾರ್ಥಿಗಳು ತಮ್ಮ ಹಕ್ಕಿಗಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಿಂತಿದ್ದರೂ ಈ ಅಂಧ ರಾಜ್ಯ ಸರ್ಕಾರಕ್ಕೆ ಕಣ್ಣು ಕಾಣಿಸುತ್ತಿಲ್ಲವೇ? ದಲಿತ ಮತ್ತು ಬಡ ವಿದ್ಯಾರ್ಥಿನಿಯರ ಭವಿಷ್ಯದ ಜೊತೆ ಚೆಲ್ಲಾಟವಾಡುವ ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.

ಬರ ಅಧ್ಯಯನ ತಂಡ ಸಹಕರಿಸಿ: ಬಿವೈವಿ

ಕೇಂದ್ರದಿಂದ ಬರ ಅಧ್ಯಯನ ತಂಡ ರಾಜ್ಯಕ್ಕೆ ಬಂದಿದೆ. ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡುವುದರೊಂದಿಗೆ ನಿಯಮಾನುಸಾರಗಳ ಮಾನದಂಡದಡಿಯಲ್ಲಿ ಅಗತ್ಯ ಪರಿಹಾರ ನೀಡಬೇಕು, ಕೇವಲ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬರಗಾಲದ ಸಮಯದಲ್ಲಿ ರೈತರಿಗೆ ನೆರವು ನೀಡಲಾಗಿತ್ತು. ಅದೇ ರೀತಿ ಕಾಂಗ್ರೆಸ್ ಸರ್ಕಾರ ಕೂಡ 5 ಲಕ್ಷ ರೂಪಾಯಿವರೆಗೆ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+