Paris Olympics: ಒಲಿಂಪಿಕ್ಸ್‌ನಲ್ಲಿ ಮೊಳಗಲಿದೆ ಕನ್ನಡದ ಕಂಪು: ರಘು ದಿಕ್ಷೀತ್ ತಂಡದಿಂದ ಕಾರ್ಯಕ್ರಮ
ತಮ್ಮ ವಿಶಿಷ್ಠ ಗಾಯನದಿಂದಲೇ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಕನ್ನಡಿಗ ರಘು ದಿಕ್ಷೀತ್ ಅವರ ಹಿರಿಮೆಗೆ ಈಗ ಮತ್ತೊಂದು ಗರಿ ಸಂದಿದೆ. ವಿಶ್ವದ ಕ್ರೀಡಾ ಹಬ್ಬವಾದ ಒಲಿಂಪಿಕ್ಸ್‌ನಲ್ಲಿ ರಘು ದಿಕ್ಷೀತ್ ತಮ್ಮ ಮಧುರ ಧ್ವನಿಯ ಮೂಲಕ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಲಿದ್ದಾರೆ. ತಮ್ಮ ವಿಶಿಷ್ಠ ಗಾಯನದ ಮೂಲಕವೇ ಹೆಸರುವಾಸಿ ಆಗಿರುವ ರಘು ಅವರ ಹಾಡುಗಳು ಒಲಿಂಪಿಕ್ಸ್‌ನಲ್ಲಿ ಮೊಳಗಲಿವೆ.
ರಘು ದಿಕ್ಷೀತ್ ಅವರ ಹೆಸರು ಕಿವಿಯ ಪರದೆಯ ಮೇಲೆ ಬಿದ್ದರೆ ಸಾಕು, ಕೈಯಲ್ಲಿ ಒಂದು ಗಿಟಾರ್, ಬಣ್ಣ ಬಣ್ಣದ ಲುಂಗಿ ಹಾಗೂ ಆಫ್ ಕುಡತಾ ಹಾಕಿಕೊಂಡಿರುವ ಸಂಗೀತಗಾರ ನಿಮ್ಮ ಕಣ್ಣಮುಂದೆ ಬಾರದೆ ಇರದು. ಜಾನಪದ ಗೀತೆಗಳಿಗೆ ಹೊಸ ಟಚ್ ನೀಡಿ, ಈಗಿನ ತಲೆಮಾರಿನ ಜನರಿಗೆ ತನ್ನ ವಿಶಿಷ್ಠ ಕಲೆಯ ಮೂಲಕವೇ ಸಂಗಿತದ ಸುಧೆಯನ್ನು ಉಣ ಬಡಿಸುತ್ತಿರುವ ರಘು ದಿಕ್ಷೀತ್ ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಸಂಗೀತ ಕಾರ್ಯಕ್ರಾಮ ನಡೆಸಿ ಕೊಡಲಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿಯನ್ನು ಮಾಡಿದೆ.

ಒಲಿಂಪಿಕ್ಸ್ ಹೌಸ್‌ನಲ್ಲಿ ಕನ್ನಡದ ಕಂಪು
ಈ ಮಹಾನ ವೇದಿಕೆಯಲ್ಲಿ ಕನ್ನಡದ ಕುವರನೊಬ್ಬ ಸ್ಟೇಜ್ ಶೋ ನೀಡಲು ಕಾತುರಾರಾಗಿದ್ದಾರೆ. ಈಗಾಗಲೇ ಯೂರೋಪ್‌ದಲ್ಲಿರುವ ರಘು, ಈ ಸುವರ್ಣ ಅವಕಾಶವನ್ನು ಎರಡೂ ಕೈ ಗಳಿಂದ ಬಳಸಿಕೊಳ್ಳಲು ಪ್ಲ್ಯಾನ್ ಮಾಡಿದ್ದಾರೆ. ರಘು ದಿಕ್ಷೀತ್ ಅವರ ತಂಡ ಜುಲೈ 29 ಮತ್ತು 30 ರಂದು ಪಾರ್ಕ್ ಡೆ ಲಾ ವಿಲೆಟ್‌ನಲ್ಲಿರುವ ಒಲಿಂಇಕ್ಸ್ ಹೌಸ್ ಆಫ್ ಇಂಡಿಯಾದಲ್ಲಿ ಕಾರ್ಯಕ್ರಮ ನೀಡಲಿದೆ. ಈ ವೇಳೆ ಒಂದು ಗಂಟೆ ಶೂ ನೀಡಲಿದ್ದಾರೆ.
ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿ ಕಾರ್ಯಕ್ರಮ ನೀಡಲು ಉತ್ಸುಕರಾಗಿರುವುದಾಗಿ ಸಂಗೀತಗಾರ ರಘು ದಿಕ್ಷೀತ್ ತಿಳಿಸಿದ್ದಾರೆ. ದೇಶವನ್ನು ಪ್ರತಿನಿಧಿಸುವ ಅವಕಾಶ ಒದಗಿ ಬಂದಿದೆ. ಈ ಅವಕಾಶವನ್ನು ಬಳಸಿಕೊಳ್ಳಲು ಪ್ಲ್ಯಾನ್ ನಡೆದಿದೆ ಎಂದು ಹೇಳಿದ್ದಾರೆ.
ಯಾವೆಲ್ಲಾ ಗೀತೆಗಳನ್ನು ಹಾಡಲಿದ್ದಾರೆ ರಘು?
ರಘು ದಿಕ್ಷೀತ್ ತಮ್ಮ ವಿಶಿಷ್ಠ ಗಾಯನ ಹಾಗೂ ಜಾನಪದ ಶೈಲಿಯ ಹಾಡುಗಳಿಂದಲೇ ಕರ್ನಾಟಕದಲ್ಲಿ ಹೆಸರುವಾಸಿ. ಇವರ ಹಾಡು ಕೇಳುತ್ತಿದ್ದರೆ, ಎರಡು ಸ್ಟೆಪ್ಸ್ ಹಾಕುವುದು ಫಿಕ್ಸ್. ಹಾಡಿ ಅರ್ಥವಾಗದವರೂ ಸಹ ರಘು ದಿಕ್ಷೀತ್ ಅವರ ಸ್ಟೈಲ್ ಆಫ್ ಸಿಂಗ್‌ಗೆ ಮಾರು ಹೋಗುವುದು ಗ್ಯಾರಂಟಿ.

19ನೇ ಶತಕಮಾನದ ಕರ್ನಾಟಕದ ಖ್ಯಾತ ಸಂತರಲ್ಲಿ ಒಬ್ಬರಾಗಿರುವ ಶಿಶುನಾಳ ಶರೀಫ್ ಅವರ ತತ್ವ ಪದಗಳನ್ನು ರಘು ದಿಕ್ಷೀತ್ ವೇದಿಕೆಯ ಮೇಲೆ ಹಾಡಲಿದ್ದಾರೆ. ಇನ್ನು ಒಂದು ಗಂಟೆಯ ಕಾರ್ಯಕ್ರಮದ ವೇಳೆ ರಘು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ದರಾ ಬೇಂದ್ರೆ, ಕಬೀರ್ ದಾಸ್‌ರ ಹಾಡುಗಳನ್ನು ಹಾಡಲು ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ಭಾರತದ ಸಂಸ್ಕೃತಿಯನ್ನು ವಿಶ್ವದ ಮುಂದೆ ತೆರೆದಿಡು ವಿಶಿಷ್ಠ ಪ್ರಯತ್ನವನ್ನು ರಘು ಮಾಡಲಿದ್ದಾರೆ.
ಮತ್ತೆ ಯಾರೆಲ್ಲಾ ಕಾರ್ಯಕ್ರಮ ನೀಡಲಿದ್ದಾರೆ?
ಒಲಿಂಪಿಕ್ಸ್ ಕಾರ್ಯಕ್ರಮಕ್ಕಾಗಿ ವಿಶೇಷ ರೀತಿಯ ಉಡುಪನ್ನು ಸಿದ್ಧಪಡಿಸಲು ರಘು ಬೆಂಗಳೂರಿನ ವಿನ್ಯಾಸಕರಾದ ಸಂಜಯ್ ಮತ್ತು ಸೀಮಾ ಹೊಸ ಲುಕ್ ಕೆಲಸ ನಡೆಸಿದ್ದಾಗಿ ತಿಳಿಸಿದ್ದಾರೆ.
ಇದೇ ವೇಳೆ ಭಾರತದ ಶಾನ್, ಪೆನ್ ಮಸಾಲಾ, ಮತ್ತು ಟಾಮಿ ಖೋಸ್ಲಾ ಮತ್ತು ಜವಾರಿ ಅವರು ಮೆಗಾ ಕ್ರೀಡಾಕೂಟದಲ್ಲಿ ಪ್ರದರ್ಶನ ನೀಡಲಿದ್ದಾರೆ.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications