ರಾಘವೇಶ್ವರ ಶ್ರೀ ಸಮರ್ಥ ಪುರುಷರು, ಪರೀಕ್ಷೆ ಏಕೆ?

ಬೆಂಗಳೂರು, ನ.22 : ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳು ಸಮರ್ಥ ಪುರುಷ, ಆ ಬಗ್ಗೆ ಯಾವುದೇ ವಿವಾದ ಇಲ್ಲ. ಅಗತ್ಯಬಿದ್ದರೆ ಆ ಕುರಿತು ಪ್ರಮಾಣಪತ್ರ ಸಲ್ಲಿಸಲು ಸಿದ್ಧ ಎಂದು ಸ್ವಾಮೀಜಿ ಪರ ವಕೀಲ ಕೆ.ಜಿ.ರಾಘವನ್ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಶೀಗಳ ವೈದ್ಯಕೀಯ ಪರೀಕ್ಷೆಗೆ ಇದ್ದ ತಡೆಯನ್ನು ನ.24ವರೆಗೆ ಮುಂದೂಡಲಾಗಿದೆ.

ರಾಘವೇಶ್ವರ ಶ್ರೀಗಳ ವೈದ್ಯಕೀಯ ಪರೀಕ್ಷೆಗೆ ತಡೆ ನೀಡಿರುವ ಕುರಿತು ಶುಕ್ರವಾರ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲ ಗೌಡ ಅವರಿದ್ದ ನ್ಯಾಯಪೀಠದ ಮುಂದೆ ಸ್ವಾಮೀಜಿ ಪರ ವಕೀಲ ಕೆ.ಜಿ.ರಾಘವನ್ ಅವರು ವಾದ ಮಂಡಿಸಿ, ಸ್ವಾಮೀಜಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸುವ ಅಗತ್ಯವಿಲ್ಲ ಎಂದು ಹೇಳಿದರು. [ಶ್ರೀಗಳ ವೈದ್ಯಕೀಯ ಪರೀಕ್ಷೆಗೆ ಕೋರ್ಟ್ ತಡೆ]

Ramachandrapura Math

ಸುಮಾರು ಎರಡು ಗಂಟೆ ವಾದ ಮಂಡಿಸಿದ ರಾಘವನ್ ಅವರು, ನಿತ್ಯಾನಂದ ಅವರು ಹೇಳಿಕೊಂಡಂತೆ ಸ್ವಾಮೀಜಿ ತಾವು ಪುರುಷರಲ್ಲ ಎಂದು ಎಲ್ಲೂ ಹೇಳಿಲ್ಲ. ಇದನ್ನು ನಾವು ಅರ್ಜಿಯಲ್ಲೂ ಹೇಳಿದ್ದೇವೆ. ಸಂಪೂರ್ಣ ಪುರುಷರಾದರೆ ಮಾತ್ರ ಮಠದ ಪೀಠ ಏರಲು ಸಾಧ್ಯ. ಸ್ವಾಮೀಜಿ ಸಂಪೂರ್ಣ ಪುರುಷರಾಗಿದ್ದಾರೆ ಅವರು ದೈಹಿಕವಾಗಿ ಆರೋಗ್ಯವಂತರಾಗಿದ್ದಾರೆ ಎಂದರು. [ಶ್ರೀಗಳ ಪ್ರಕರಣ, ಗಾಯಕಿ ಬಟ್ಟೆಯಲ್ಲಿ ವೀರ್ಯಾಣು ಪತ್ತೆ]

ಸಹಕಾರ ನೀಡುತ್ತಿದ್ದಾರೆ : ರಾಘವೇಶ್ವರ ಶ್ರೀಗಳು ಸಿಐಡಿ ತನಿಖೆಗೆ ಸಂಪೂರ್ಣವಾಗಿ ಸಹಕಾರ ನೀಡುತ್ತಿದ್ದಾರೆ. ವೈದ್ಯ ಪರೀಕ್ಷೆಯಿಂದ ಶ್ರೀಗಳ ಖಾಸಗಿತನಕ್ಕೆ ಧಕ್ಕೆ ಆಗುತ್ತದೆ. ಅವರ ವೈಯಕ್ತಿಕ ಹಕ್ಕು ಉಲ್ಲಂಘನೆಯಾಗುತ್ತದೆ. ಸಿಐಡಿ ನೋಟಿಸ್‌ನಲ್ಲಿ ಪರೀಕ್ಷೆಗೆ ಸ್ಪಷ್ಟವಾದ ಕಾರಣ ನೀಡಿಲ್ಲ. ಪರೀಕ್ಷೆಯ ಸ್ವರೂಪವನ್ನು ತಿಳಿಸಿಲ್ಲ ಎಂದು ವಾದ ಮಂಡಿಸಿದರು. [ಪುರುಷತ್ವ ಪರೀಕ್ಷೆ ಎಂದರೇನು? ಏಕೆ ಮಾಡ್ಬೇಕು?]

ಅರ್ಜಿಯ ವಿಚಾರಣೆ ವೇಳೆ ನ್ಯಾ. ಎ.ಎನ್.ವೇಣುಗೋಪಾಲ ಗೌಡ ಅವರು ಸಮಾಜದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಪ್ರಸ್ತಾಪಿಸಿ ನಮ್ಮಲ್ಲಿ ಎಷ್ಟು ಕಾನೂನುಗಳಿದ್ದರೂ ಸಾಕಾಗುತ್ತಿಲ್ಲ. ಮಹಿಳೆಯರನ್ನು ರಕ್ಷಿಸಲು ಇನ್ನು ಎಷ್ಟು ಕಾನೂನುಗಳನ್ನು ಜಾರಿಗೊಳಿಸಬೇಕೋ ಎಂದು ಹೇಳಿದರು. [ಉಸ್ಸಪ್ಪ, ಅಂತೂ ಆಯ್ತು ನಿತ್ಯಾ ಪುರುಷತ್ವ ಪರೀಕ್ಷೆ!]

ಪ್ರಕರಣದ ವಿಚಾರಣೆಯನ್ನು ನ.24ಕ್ಕೆ ಮುಂದೂಡಿದ ಕೋರ್ಟ್‌, ಅಲ್ಲಿಯ ತನಕ ಸ್ವಾಮೀಜಿಗಳ ವೈದ್ಯಕೀಯ ಪರೀಕ್ಷೆ ಇದ್ದ ತಡೆಯನ್ನು ಮುಂದುವರೆಸುವಂತೆ ಸೂಚನೆ ನೀಡಿತು. ಶ್ರೀಗಳ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಪ್ರೇಮಲತಾ ದಿವಾಕರ್ ಶಾಸ್ತ್ರೀ ಅವರ ಬಟ್ಟೆಯಲ್ಲಿ ವೀರ್ಯ ಪತ್ತೆಯಾಗಿದ್ದು, ಅದು ಯಾರದ್ದು? ಎಂದು ತಿಳಿಯಲು ಸಿಐಡಿ ಶ್ರೀಗಳ ವೈದ್ಯಕೀಯ ಪರೀಕ್ಷೆ ನಡೆಸಲು ನೋಟಿಸ್‌ ನೀಡಿದ್ದು, ಇದಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+