ನನ್ನ ಪ್ರಾಣ ಮಾತ್ರ ಉಳಿಸಿದ್ದಾರೆ: ರಾಘವೇಶ್ವರ ಶ್ರೀ

ಹೊನ್ನಾವರ, ಆ.28: ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳು ಮೌನ ಮುರಿದಿದ್ದಾರೆ. ಖಾಸಗಿ ಸುದ್ದಿ ವಾಹಿನಿ ಜೊತೆ ಮಾತನಾಡಿದ ಸ್ವಾಮೀಜಿಗಳು, 'ನನ್ನ ಪ್ರಾಣ ಮಾತ್ರ ಉಳಿದುಕೊಂಡಿದೆ' ಎಂದು ನೊಂದುಕೊಂಡರು.

ಗೋವುಗಳ ಸಂರಕ್ಷಣೆ, ರಾಮಕಥಾ ಧ್ಯಾನದ ಮೂಲಕ ವಿಶ್ವದ ಗಮನ ಸೆಳೆದು ಅಪಾರ ಪ್ರಮಾಣದ ಭಕ್ತಾದಿಗಳನ್ನು ಹೊಂದಿರುವ ರಾಘವೇಶ್ವರ ಸ್ವಾಮೀಜಿಗಳ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ಹಾಕಿರುವ ಸುದ್ದಿ ಭಕ್ತರನ್ನು ಬೆಚ್ಚಿಬೀಳಿಸಿದೆ.

ರಾಮಕಥಾ ಧ್ಯಾನಕ್ಕೆ ತೆರಳಬೇಕಿದ್ದ ಗಾಯಕಿ ಪ್ರೇಮಲತಾ ದಿವಾಕರ್ ದಂಪತಿ ಬೇರೆಯದ್ದೇ ಕಥೆ ಹೇಳಿದ್ದಾರೆ. ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರೇಮಲತಾ ದಿವಾಕರ್ ಪರವಾಗಿ ಅವರ ಪುತ್ರಿ ಅಂಶುಮತಿ ಶಾಸ್ತ್ರಿ ಲೈಂಗಿಕ ಕಿರುಕುಳ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಠಾಣಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ.

ಹೊನ್ನಾವರದಲ್ಲಿ ರಾಮಕಥಾ ಧ್ಯಾನದಲ್ಲಿ ತೊಡಗಿದ್ದ ಸ್ವಾಮೀಜಿಗಳು ಪ್ರಕರಣ ಈ ಮಟ್ಟಕ್ಕೆ ಬೆಳೆಯುತ್ತಿದ್ದಂತೆ ಮೊದಲ ಬಾರಿಗೆ ತಮ್ಮ ಪ್ರತಿಕ್ತಿಯೆ ನೀಡಿದ್ದಾರೆ.

Raghaveshwara Bharathi Swamiji denies allegation by singer Premalatha Divakar

ನಮ್ಮ ಮಠದ ಮೇಲೆ ಸಾಕಷ್ಟು ಆರೋಪಗಳು ಈ ಹಿಂದೆ ಕೂಡಾ ಕೇಳಿಬಂದಿವೆ. ಬೇರೆ ಬೇರ್ ವಿಷಯಕ್ಕೆ ಆರೋಪ ಮಾಡಲಾಗಿತ್ತು. ಇದು ಮೊದಲನೆಯ ಆರೋಪವೇನಲ್ಲ. ಈಗ ಮಾನ ಹೋಗುವಂಥ ಆರೋಪ ಮಾಡಲಾಗಿದೆ. ಇನ್ನು ಪ್ರಾಣ ಮಾತ್ರ ಉಳಿದು ಕೊಂಡಿದೆ. ಪ್ರಾಣ ಇರುವವರೆಗೂ ಭಕ್ತರಿಗಾಗಿ ಹೋರಾಡುತ್ತೇನೆ. ನಾನು ಬದುಕಿನಲ್ಲಿ ಯಾರಿಗೂ ಕೆಡುಕನ್ನು ಬಯಸಿಲ್ಲ ಎಂದಿದ್ದಾರೆ.[ಸ್ವಾಮೀಜಿಗಳ ವಿರುದ್ಧದ ದೂರಿನಲ್ಲೇನಿದೆ?]

ಈಗ ಒಂದು ಆರೋಪ ಮಾಡಿದ್ದಾರೆ. ಅದಕ್ಕೆ ಉತ್ತರ ನೀಡಿದರೆ , ಮತ್ತೊಂದು ಆರೋಪ ಮಾಡುತ್ತಾರೆ, ಆರೋಪಕ್ಕೆ ಪ್ರತ್ಯಾರೋಪವೇ ಮದ್ದಲ್ಲ. ಪ್ರಾಣ ಇರುವ ತನಕ ದುಷ್ಟಶಕ್ತಿಗಳ ವಿರುದ್ಧ ಹೋರಾಟ ನಡೆಸುತ್ತೇನೆ ಹರೇ ರಾಮ್ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+