ಮಗಳದ್ದು ಆತ್ಮಹತ್ಯೆಯಲ್ಲ, ಕೊಲೆ: ರಚನಾ ಪೋಷಕರ ಆರೋಪ
ಮೂಡಬಿದಿರೆ, ಜನವರಿ 26: ಆಳ್ವಾಸ್ ಕಾಲೇಜಿನಲ್ಲಿ ನಿನ್ನೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಬಾಲಕಿ ರಚನಾಳ ಪೋಷಕರು ತಮ್ಮ ಮಗಳದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪ ಮಾಡಿದ್ದಾರೆ.
ತನಗೆ ಖಾಯಿಲೆ ಇದ್ದು, ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್‌ನೋಟ್ ಬರೆದಿಟ್ಟು ರಚನಾ ಆತ್ಮಹತ್ಯೆ ಮಾಡಿಕೊಂಡಿದ್ದಳು, ಆದರೆ ಆಕೆಯ ಪೋಷಕರು ಇದನ್ನು ಕೊಲೆ ಎನ್ನುತ್ತಿದ್ದಾರೆ.
ರಚನಾಳ ತಂದೆ ಮಂಜುನಾಥ್ ಮತ್ತು ಆನುಸೂಯ ಅವರು ಕೊಲೆ ಆರೋಪ ಮಾಡಿದ್ದು, ಡೆತ್‌ನೋಟ್‌ನಲ್ಲಿರುವ ಅಕ್ಷರ ಮತ್ತು ಸಹಿ ರಚನಾದಲ್ಲ, ಅವಳ ಆರೋಗ್ಯದಲ್ಲಿಯೂ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಕೊಲೆಯನ್ನು ಮುಚ್ಚಿ ಹಾಕಲು ಆಕೆಗೆ ಕ್ಯಾನ್ಸರ್ ಇದೆ, ಕಿಡ್ನಿ ಸಮಸ್ಯೆ ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ, ನಮ್ಮ ಮಗಳನ್ನು ಕೊಂದು ಈಗ ಸತ್ಯ ಮುಚ್ಚಿ ಹಾಕಲು ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.












Click it and Unblock the Notifications