Yuva Nidhi: ಭರವಸೆ ನೀಡಿದ ಸರ್ಕಾರ ಜಾರಿ ವೇಳೆ ವರಸೆ ಬದಲಿಸಿತು: ಆರ್.ಅಶೋಕ್
ಬೆಂಗಳೂರು, ಡಿಸೆಂಬರ್ 27: ಕರ್ನಾಟಕ ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ತನ್ನ ಐದನೇ ಗ್ಯಾರಂಟಿ ಯೋಜನೆಯಾದ 'ಯುವನಿಧಿ' (Yuvanidhi) ಭರವಸೆಯನ್ನು ಹೇಳಿದಂತೆ ಜಾರಿ ತರಲಾಗಿದೆ ಎಂದು ಸರ್ಕಾರ ತಿಳಿಸಿದೆ. ಆದರೆ ಕಾಂಗ್ರೆಸ್ ಸರ್ಕಾರ ಮೊದಲು ಹೇಳಿದ್ದೆ ಬೇರೆ ಈಗ ಹೇಳಿದ ಭರವಸೆ ಈಡೇರಿಸಿಲ್ಲ ಎಂದು ಬಿಜೆಪಿ ದೂರಿದೆ.
ಹೌದು, ಯುವನಿಧಿ ಯೋಜನೆ ಕುರಿತು ಬುಧವಾರ ವಿಪಕ್ಷ ನಾಯಕರ ಆರ್. ಅಶೋಕ್ ಅವರು ಟ್ವೀಟ್ ಮಾಡಿ ಸರ್ಕಾರ ಈ ಹಿಂದೆ ಏನು ಹೇಳಿತ್ತು? ಮತ್ತು ಈಗ ಏನು ಷರತ್ತು ವಿಧಿಸಿ ಯೋಜನೆ ಜಾರಿಗೆ ತಂದಿದೆ ಎಂಬುದರ ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೊದಲು 18-25ನೇ ವಯಸ್ಸಿನ ಎಲ್ಲ ನಿರುದ್ಯೋಗಿ ಡಿಪ್ಲೋಮಾ ಪದವೀಧರಿಗೆ ಮಾಸಿಕ ₹1,500 ಹಾಗೂ ಎಲ್ಲಾ ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ ₹3,000 ನೀಡುವುದಾಗಿ ಗ್ಯಾರೆಂಟಿ ನೀಡಿತ್ತು. ಆದರೆ ಅದೇ ಕಾಂಗ್ರೆಸ್ ಇದೀಗ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಪಾಸಾದ ಯುವಕರು ಮಾತ್ರ ಅರ್ಜಿ ಕಲ್ಪಿಸಲು ಅರ್ಹರು ಎಂದು ವರಸೆ ಬದಲಿಸಿದೆ ಎಂದು ಅವರು ದೂರಿದರು.
ಚುನಾವಣೆಗೆ ಮುನ್ನ 18-25ನೇ ವಯಸ್ಸಿನ ಎಲ್ಲ ನಿರುದ್ಯೋಗಿ ಡಿಪ್ಲೋಮಾ ಪದವೀಧರಿಗೆ ₹1,500 ಹಾಗೂ ಎಲ್ಲಾ ನಿರುದ್ಯೋಗಿ ಪದವೀಧರರಿಗೆ ₹3,000 ನೀಡುವುದಾಗಿ ಗ್ಯಾರೆಂಟಿ ನೀಡಿದ್ದ ಕಾಂಗ್ರೆಸ್ ಪಕ್ಷ ಈಗ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಪಾಸಾದ ಯುವಕರು ಮಾತ್ರ ಅರ್ಜಿ ಕಲ್ಪಿಸಲು ಅರ್ಹರು ಎಂದು ವರಸೆ ಬದಲಿಸಿದೆ.
— R. Ashoka (ಆರ್. ಅಶೋಕ) (@RAshokaBJP) December 27, 2023
ನುಡಿದಂತೆ ನಡೆದ ಸರ್ಕಾರ ಎಂದು… pic.twitter.com/WgcbHSmJlA
ನುಡಿದಂತೆ ನಡೆದ ಸರ್ಕಾರ ಎಂದು ಹಸಿ ಸುಳ್ಳು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ಯುವ ಸಮುದಾಯಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು. ಇದರೊಂದಿಗೆ ಕಾಂಗ್ರೆಸ್ ಚುನಾವಣೆಗೂ ಮೊದಲು ನೀಡಿದ್ದ ಯುವನಿಧಿ ಭರವಸೆಯ ಕಾಂಗ್ರೆಸ್ ಟ್ವೀಟ್ ಹಂಚಿಕೊಂಡಿದೆ.

ವಿಧಾನಸಭಾ ಚುನಾವಣೆಗೂ ಮೊದಲು ಅಂದರೆ 2023ರ ಮಾರ್ಚ್ 20 ರಂದು ಕಾಂಗ್ರೆಸ್ ಯುವನಿಧಿ ಭರವಸೆ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿತ್ತು. ಅದರಲ್ಲಿ ''18-25ನೇ ವಯಸ್ಸಿನ ಪದವೀಧರರಿಗೆ ಎರಡು ವರ್ಷಗಳ ವರೆಗೆ ಪ್ರತಿ ತಿಂಗಳು ₹3000 ರೂಪಾಯಿ, 18-25ನೇ ವಯಸ್ಸಿನ ಡಿಪ್ಲೋಮಾ ಹೊಂದಿರುವವರಿಗೆ ಎರಡು ವರ್ಷಗಳ ಕಾಲ ಮಾಸಿಕವಾಗಿ ₹1,500 ರೂಪಾಯಿ ನೀಡಲಾಗಿದೆ.
ಇದರೊಂದಿಗೆ 2.5 ಲಕ್ಷ ಸರ್ಕಾರಿ ಹುದ್ದೆಗಳು ಮತ್ತು ಎಲ್ಲ ಬ್ಯಾಕ್‌ಲಾಗ್ ಹುದ್ದೆ ಭರ್ತಿ ಮಾಡಲಾಗುವುದು. ಐದು ವರ್ಷದಲ್ಲಿ ಖಾಸಗಿ ವಲಯದಲ್ಲಿ ಹತ್ತು ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು ಎಂದು ತಿಳಿಸಿದರು.
ಹೀಗೆ ಯುವನಿಧಿ ಯೋಜನೆಗೆ ಜಾರಿಗೂ ಮೊದಲು ಸರ್ಕಾರ ಏನು ಹೇಳಿತ್ತು, ಇದೀಗ ಜಾರಿ ವೇಳೆ ವರಸೆ ಬದಲಿಸಿ ಜಾರಿ ಮಾಡಿದೆ. ಕೊಟ್ಟ ಮಾತಿಗೆ ಸರ್ಕಾರ ತಪ್ಪಿದೆ, ಕಾಂಗ್ರೆಸ್ ಮೋಸಾ #congress mosa ಎಂಬ ಹ್ಯಾಷ್ ಟ್ಯಾಗ್ ಹಾಕಿ ಆರ್ ಅಶೋಕ್ ಅವರು ಕಿಡಿ ಕಾರಿದ್ದಾರೆ.












Click it and Unblock the Notifications