ಫೆ.7ರಿಂದ ಕೋಲಾರದಲ್ಲಿ ಪುರಂದರದಾಸರ ಆರಾಧನೆ
ಕೋಲಾರ,ಫೆಬ್ರವರಿ,06: ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರ ಆರಾಧನೆಯನ್ನು ಫೆಬ್ರವರಿ 7ರಿಂದ 9ರವರೆಗೆ ಮೂರು ದಿನಗಳ ಕಾಲ ಕೋಲಾರದ ಮುಳುಬಾಗಿಲಿನ ವೀರಭದ್ರ ನಗರದಲ್ಲಿರುವ ಶ್ರೀ ಪಾಂಡುರಂಗ ವಿಠಲನ ಸನ್ನಿಧಿಯಲ್ಲಿ ನಡೆಯಲಿದೆ.
ಪುರಂದರ ದಾಸರ ಆರಾಧನೆಯು ಶ್ರೀ ಪುರಂದರ ಆರಾಧನಾ ಸಮಿತಿ ಟ್ರಸ್ಟ್ ರವರ ಸಹಯೋಗದಲ್ಲಿ ನಡೆಯುತ್ತಿದ್ದು, ಫೆಬ್ರವರಿ 7ರಿಂದ ಆರಂಭವಾಗುವ ಈ ಆರಾಧನೆ 43ನೇ ಆರಾಧನೆಯಾಗಿದೆ. ಫೆಬ್ರವರಿ 8 ಪುಷ್ಯ ಬಹುಳ ಅಮಾವಾಸ್ಯೆಯಿದ್ದು ಆರಾಧನೆಯು ದೇಶ ವಿದೇಶಗಳಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಕಾರ್ಯಕರ್ತರು ತಿಳಿಸಿದರು.[ದಾಸಸಾಹಿತ್ಯ ಮಾಹಿತಿ ಬೆರಳ ತುದಿಯಲ್ಲೇ ಲಭ್ಯ]

ಪುರಂದರದಾಸರ ಆರಾಧನೆಯ ಕಾರ್ಯಕ್ರಮಗಳು:
* ಮೂರು ದಿನ ಬೆಳಗ್ಗೆ 9 ರಿಂದ ರಾತ್ರಿ 10ರ ವರೆಗೂ ನಾಡಿನ ಹಿರಿಯ ಕಿರಿಯ ಕಲಾವಿದರಿಂದ ದಾಸರ ಗಾಯನ ಕಾರ್ಯಕ್ರಮ
* ಮುಖ್ಯ ಆರಾಧನೆ ಪ್ರತಿದಿನ ಬೆಳಿಗ್ಗೆ ಮಂಗಳವಾದ್ಯದಿಂದ ಪ್ರಾರಂಭವಾಗಿ ಸರ್ವೋತ್ತಮ ದಾಸರ ನೇತೃತ್ವದಲ್ಲಿ ಊಂಛವೃತ್ತಿ ,ದೇವಸ್ಥಾನದ ಸುತ್ತಲೂ ಭಜನೆಯೊಂದಿಗೆ ತಾಳ ತಂಬೂರಿ ಜೊತೆಯಲ್ಲಿ ಪ್ರದಕ್ಷಿಣೆ
* ಗಾನಕಲಾಭೂಷಣ ವಿ. ಆರ್ ಕೆ ಪದ್ಮನಾಭರವರ ನೇತೃತ್ವದಲ್ಲಿ ಶ್ರೀ ಪುರಂದರದಾಸರ ನವರತ್ನಮಾಲಿಕೆ - ಗೋಷ್ಠಿಗಾಯನ
* ಬಂದ ಅತಿಥಿಗಳಿಗೆ ಅಚ್ಚುಕಟ್ಟಾದ ಊಟದ ವ್ಯವಸ್ಥೆ. [Exclusive : ಮೊಬೈಲಿನಲ್ಲೇ ಓದಿ ದಾಸ ವರೇಣ್ಯರ ಸಾಹಿತ್ಯ]
ಪುರಂದರದಾಸರ ಬಗ್ಗೆ ಕೆಲವು ಮಾಹಿತಿ
ಪುರಂದರದಾಸರು ದಾಸ ಸಾಹಿತ್ಯದ ದಿಗ್ಗಜರು. ಇವರನ್ನು ಕರ್ನಾಟಕ ಸಂಗೀತ ಪಿತಾಮಹ ಎಂದು ಕರೆಯುತ್ತಾರೆ. ಇವರು 1484ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕ್ಷೇಮಪುರದಲ್ಲಿ ಜನಿಸಿದರು. ಕೆಲವು ವಿದ್ವಾಂಸರ ಪ್ರಕಾರ ಕರ್ನಾಟಕದ ಪುರಂದರಘಟ್ಟದಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಇವರ ಮೊದಲ ಹೆಸರು ಶ್ರೀನಿವಾಸ ನಾಯಕ. ಪುರಂದರದಾಸರು ಮರಣವನ್ನಪ್ಪಿದ್ದು 1564, ಹಂಪಿಯಲ್ಲಿ. ಕನ್ನಡ ಹಾಗೂ ಸಂಸ್ಕೃತದಲ್ಲಿ ದಾಸ ಸಾಹಿತ್ಯ ರಚನೆ ಮಾಡಿದ ಇವರು ದಾಸಸಾಹಿತ್ಯದ ಪ್ರಸಿದ್ದಿಗೆ ಕಾರಣಕರ್ತರು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications