Puneeth Rajkumar: ಅಪ್ಪು ಕೊನೆಯ ಕ್ಷಣಗಳು ಹೇಗಿತ್ತು; ಹೃದಯಾಘಾತಕ್ಕೆ ಕಾರಣವೇನು, ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದೇನು

Puneeth Rajkumar: ದಿವಂಗತ ನಟ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ನಿಧನ ಸುದ್ದಿಯನ್ನು ಇಂದಿಗೂ ಕನ್ನಡಿಗರು ಕನಸಾಗಿರಬಾರದೇ ಎಂದುಕೊಳ್ಳುವುದಿದೆ. ಪುನೀತ್ ರಾಜ್‌ಕುಮಾರ್ ಅವರನ್ನು ಕನ್ನಡಿಗರು, ಕನ್ನಡ ಸಿನಿಮಾ ಪ್ರಿಯರು ಇಂದಿಗೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಕುಟುಂಬವೆಲ್ಲ ಸೇರಿ ನೋಡಬಹುದಾದ ಸಿನಿಮಾಗಳನ್ನು ಕೊಡುತ್ತಿದ್ದ ಪುನೀತ್ ರಾಜ್‌ಕುಮಾರ್ ಕೊಡುತ್ತಿದ್ದರು. ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಅಗಲಿ ಐದು ವರ್ಷಗಳೇ ಆಗಿವೆ. ಇದೀಗ ಅವರ ನಿಧನದ ವಿಚಾರಕ್ಕೆ ಸಂಬಂಧಿಸಿದ ವಿಷಯವೊಂದು ಚರ್ಚೆಯ ಮುನ್ನೆಲೆಗೆ ಬಂದಿದೆ.

ಪುನೀತ್ ರಾಜ್‌ಕುಮಾರ್ ಅವರು ಕೇವಲ 46 ವರ್ಷ ವಯಸ್ಸಿನಲ್ಲಿ ಅಗಲಿದ್ದರು. ಜಿಮ್ ಸೆಷನ್ ನಂತರ ಅವರು ಕುಸಿದು ಬಿದಿದ್ದರು. ಪುನೀತ್ ರಾಜ್‌ಕುಮಾರ್ ಅವರು, ಅಕ್ಟೋಬರ್ 29, 2021 ರಂದು ಹೃದಯಾಘಾತದಿಂದ ನಿಧನರಾದರು. ಆದಾಗ್ಯೂ, ಅವರ ವೈದ್ಯರ ಪ್ರಕಾರ ಅವರ ಸಾವಿಗೆ ಮುಂಚಿನ ವ್ಯಾಯಾಮವು ಅವರ ಸಾಮಾನ್ಯ ಫಿಟ್‌ನೆಸ್ ದಿನಚರಿಗಿಂತ ಭಿನ್ನವಾಗಿತ್ತು. ಆ ದಿನ ಪುನೀತ್ ಮೊದಲ ಬಾರಿಗೆ ಕಿಕ್‌ಬಾಕ್ಸಿಂಗ್ ಪ್ರಯತ್ನಿಸಿದ್ದರು ಎಂದು ವರದಿಯಾಗಿದೆ.

Puneeth Rajkumar What Happened Appu Final Moments Doctor Reveals Details His Heart Attack Treatment

ಅನಾರೋಗ್ಯ ಸಂಭವಿಸುವ ಮೊದಲು ಸುಮಾರು 1.5 ಗಂಟೆಗಳ ಕಾಲ ವಾಯ್ಯಾಮದಲ್ಲೇ ಕಳೆದರು. ಇದಾದ ನಂತರ ವೈದ್ಯರನ್ನು ಭೇಟಿ ಮಾಡಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ, ಪುನೀತ್ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಅವರ ಕೊನೆಯ ಕ್ಷಣಗಳ ಬಗ್ಗೆ ಮಾತನಾಡಿದ್ದಾರೆ. ಅವರು ಆಸ್ಪತ್ರೆಗೆ ತಲುಪುವ ಕೇವಲ ಒಂದು ನಿಮಿಷ ಮೊದಲು ಅವರ ಹೃದಯ ಬಡಿತ ನಿಂತುಹೋಯಿತು ಎನ್ನುವ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಜಸ್ಟ್ ಕ್ಯೂರಿಯಸ್ ಕನ್ನಡದೊಂದಿಗೆ ಮಾತನಾಡಿರುವ ಡಾ. ರಮಣ ರಾವ್ ಅವರು, ಪುನೀತ್ ರಾಜ್‌ಕುಮಾರ್ ಅವರೊಂದಿಗಿನ ತಮ್ಮ ಆತ್ಮೀಯ ಸಂಬಂಧವನ್ನು ನೆನಪಿಸಿಕೊಂಡಿದ್ದಾರೆ. ನಾನು ಅವರು ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದೆ ಎಂದಿದ್ದಾರೆ. ಅಪ್ಪು ಒಬ್ಬ ಮಹಾನ್ ವ್ಯಕ್ತಿ. ಅವರು ನನಗೆ ಮಗನಂತೆ. ನನ್ನ ಎರಡನೇ ಮಗ ಅವರು ಒಳ್ಳೆಯ ಸ್ನೇಹಿತರಾಗಿದ್ದರು. ಅವರು ಆಗಾಗ್ಗೆ ಒಟ್ಟಿಗೆ ಆಟವಾಡುತ್ತಿದ್ದರು ಮತ್ತು ತಮ್ಮ ಆಟದ ವಸ್ತುಗಳನ್ನು ಹಂಚಿಕೊಳ್ಳುತ್ತಿದ್ದರು ಎಂದು ಅವರು ಹೇಳಿದ್ದಾರೆ. ಒಬ್ಬ ವೈದ್ಯನಾಗಿ, ನಾನು ನನ್ನ ಜೀವನದಲ್ಲಿ ಹಲವಾರು ದುರಂತಗಳನ್ನು ನೋಡಿದ್ದೇನೆ. ಅವು ಸಾಮಾನ್ಯವಾಗಿ ಭಯಾನಕ ಪರಿಣಾಮವನ್ನು ಬೀರುತ್ತವೆ. ನೀವು ಕೆಲವು ವಿಷಯಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಪ್ಪು ಅವರ ಸಾವಿನ ವಿಷಯವೂ ಒಂದು ಎಂದಿದ್ದಾರೆ.

ಪುನೀತ್ ರಾಜ್‌ಕುಮಾರ್ ಕೊನೆಯ ಕ್ಷಣಗಳು ಹೇಗಿದ್ದವು

ಇನ್ನು ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಕ್ಷಣಗಳ ಬಗ್ಗೆ ಡಾ. ರಮಣ ರಾವ್ ಅವರು ಮಾತನಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರು ಹೆಚ್ಚು ವ್ಯಾಯಾಮ ಮಾಡಿದ ನಂತರ ಆಸ್ಪತ್ರೆಗೆ ಬರುವಾಗ ಅವರು ತೀವ್ರವಾಗಿ ಬೆವರಿದ್ದರು. ಅಪ್ಪು ಅವರು ಬಂದಾಗ ನಾನು ಕ್ಲಿನಿಕ್‌ನಲ್ಲಿದ್ದೆ. ಅವರು ತುಂಬಾ ಬೆವರುತ್ತಿದ್ದರು. ಅವರು ಜಿಮ್‌ಗೆ ಹೋಗಿದ್ದರು, ಅಲ್ಲಿ ಅವರು ಒಂದೂವರೆ ಗಂಟೆಗಳ ಕಾಲ ಕಿಕ್‌ಬಾಕ್ಸಿಂಗ್ ಮಾಡುತ್ತಿದ್ದರು ಎಂದು ಅವರು ನನಗೆ ಹೇಳಿದರು. ಆ ದಿನ ಅವರು ಪ್ರಯತ್ನಿಸಿದ್ದು ಹೊಸ ವಿಷಯವಾಗಿತ್ತು ಮತ್ತು ಅವರು ತುಂಬಾ ದಣಿದಿದ್ದರು. ಆದಾಗ್ಯೂ, ನಾನು ಅವರನ್ನು ಪರಿಶೀಲಿಸಿದಾಗ, ಅವರು ಎಷ್ಟು ಬೆವರುತ್ತಿದ್ದಾರೆಂದು ನೋಡಿದಾಗ ಅವರ ಆರೋಗ್ಯದ ಬಗ್ಗೆ ಅನುಮಾನವಾಯ್ತು.. ನಾನು ತಕ್ಷಣ ಇಸಿಜಿ ಮಾಡಿಸಿದೆ. ಆ ಇಸಿಜಿ ಒತ್ತಡವನ್ನು ತೋರಿಸಿದೆ ಎಂದು ಅವರು ನೆನಪಿಸಿಕೊಂಡಿದ್ದಾರೆ.

ಇಸಿಜಿ ಚಿಕಿತ್ಸೆಯ ನಂತರ ಅವರನ್ನು ತುರ್ತು ಚಿಕಿತ್ಸೆಗೆ ಒಳಪಡಿಸಲಾಯಿತು. ಔಷಧಿ ನೀಡಿ, ಪುನೀತ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿದ್ದಾಗಿ ಹೇಳಿದ್ದಾರೆ. ಇದು ಹೃದಯಾಘಾತವಲ್ಲ, ಆದರೆ ಒತ್ತಡ. ಏನಾದರೂ ಸಂಭವಿಸುತ್ತದೆ ಎಂದು ನನಗೆ ತಿಳಿದಿತ್ತು. ನಾನು ಅವರಿಗೆ ಔಷಧಿಗಳನ್ನು ನೀಡಿದ್ದೇನೆ ಮತ್ತು ತಕ್ಷಣ ನಾವು ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಅವರು ತಮ್ಮದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅವರು ನಮ್ಮೊಂದಿಗೆ ಮಾತನಾಡುತ್ತಿದ್ದರು. ಅವರು ಕಾರಿನಲ್ಲಿ ಕುಳಿತುಕೊಳ್ಳಲು ಬಯಸಿದ್ದರು. ಆದರೆ ನಾನು ಅವರ ಪತ್ನಿ ಅಶ್ವಿನಿಯ ಮಡಿಲಲ್ಲಿ ತಲೆ ಇಡುವಂತೆ ಕೇಳಿಕೊಂಡೆ ಮತ್ತು ಚಾಲಕನನ್ನು ಆಸ್ಪತ್ರೆಗೆ ಬೇಗನೆ ಕರೆದೊಯ್ಯುವಂತೆ ಕೇಳಿಕೊಂಡೆ, ಡಾ. ರಂಗ ನಾಯಕ್ ಅವರು ಆಗಲೇ ಎಲ್ಲಾ ವ್ಯವಸ್ಥೆಗಳನ್ನು ಮಾಡಿದರು ಎಂದಿದ್ದಾರೆ.

ಪುನೀತ್ ರಾಜ್‌ಕುಮಾರ್ ಅವರು ಆಸ್ಪತ್ರೆ ತಲುಪಲು ಕೇವಲ ಒಂದು ನಿಮಿಷ ಮೊದಲು, ಅವರ ಹೃದಯ ಬಡಿತ ನಿಂತುಹೋಯಿತು. ಅವರು ಆಸ್ಪತ್ರೆಯೊಳಗೆ ಹೋದಾಗ, ಹೃದಯ ಬಡಿತ ಇರಲಿಲ್ಲ ಎಂದಿದ್ದಾರೆ. ಡಾ. ರಮಣ ರಾವ್ ಅವರ ಪ್ರಕಾರ, ಆಸ್ಪತ್ರೆಯ ವೈದ್ಯಕೀಯ ತಂಡವು ಅಗತ್ಯ ಪ್ರೋಟೋಕಾಲ್‌ಗಳನ್ನು ಅನುಸರಿಸಿತು ಮತ್ತು ನಟನನ್ನು ಉಳಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಿತು, ಆದರೆ ಅವು ವಿಫಲವಾದವು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+