ರಾಜಕಾರಣದ ಬಗ್ಗೆ ಪುನೀತ್ ರಾಜ್ ಕುಮಾರ್ ಪತ್ರ

Recommended Video

      Lok Sabha Elections 2019 : ಮಂಡ್ಯ ಚುನಾವಣಾ ಪ್ರಚಾರದ ಬಗ್ಗೆ ನಿರ್ಧಾರ ತಿಳಿಸಿದ ಪವರ್ ಸ್ಟಾರ್

      ಬೆಂಗಳೂರು, ಮಾರ್ಚ್ 20 : 'ನನಗೂ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಹೆಸರನ್ನು ಚುನಾವಣೆಗೆ ಹಾಗೂ ರಾಜಕಾರಣಕ್ಕೆ ಸಂಬಂಧಿಸಬೇಡಿ' ಎಂದು ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ.

      ಬುಧವಾರ ಪುನೀತ್ ರಾಜ್‌ ಕುಮಾರ್ ಪತ್ರವೊಂದನ್ನು ಬರೆದಿದ್ದು ರಾಜಕಾರಣದ ಬಗ್ಗೆ ಅದರಲ್ಲಿ ಸ್ಪಷ್ಟನೆ ನೀಡಿದ್ದಾರೆ. 'ನಾನು ಒಬ್ಬ ನಟನಾಗಿ ನನ್ನನ್ನು ಕಲೆಯ ಜೊತೆಗೆ ಗುರುತಿಸಿಕೊಳ್ಳುತ್ತೇನೆ ಹೊರತು ರಾಜಕಾರಣದಲ್ಲಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

      ಮಾಜಿ ಸಚಿವ ದಿ.ಅಂಬರೀಶ್ ಪತ್ನಿ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಟರಾದ ದರ್ಶನ್ ಮತ್ತು ಯಶ್ ಅವರಿಗೆ ಬೆಂಬಲ ನೀಡಿದ್ದಾರೆ.

      ಪುನೀತ್ ರಾಜ್ ಕುಮಾರ್ ಅವರು ಸುಮಲತಾ ಅವರ ಪರವಾಗಿ ಪ್ರಚಾರ ಮಾಡಲಿದ್ದಾರೆಯೇ? ಎಂಬ ಪ್ರಶ್ನೆ ಎದ್ದಿತ್ತು. ಬುಧವಾರ ಪುನೀತ್ ಪತ್ರದ ಮೂಲಕ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ ಮತ್ತು ಅಭಿಮಾನಿಗಳಿಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

      ಎಲ್ಲರಿಗೂ ನಮಸ್ಕಾರ

      ಎಲ್ಲರಿಗೂ ನಮಸ್ಕಾರ

      ಎಲ್ಲರಿಗೂ ನನ್ನ ನಮಸ್ಕಾರ, ನನಗು ರಾಜಕಾರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂಬುದು ನಿಮಗೆ ತಿಳಿದಿರುವ ವಿಚಾರ. ನಾನು ಒಬ್ಬ ನಟನಾಗಿ ನನ್ನನ್ನು ಕಲೆಯ ಜೊತೆಗೆ ಗುರುತಿಸಿಕೊಳ್ಳುತ್ತೇನೆ ಹೊರತು ರಾಜಕಾರಣದಲ್ಲಲ್ಲ ಎಂದು ಪುನೀತ್ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

      ಮತಚಲಾಯಿಸಿ

      ಮತಚಲಾಯಿಸಿ

      ಕನ್ನಡ ಜನತೆಗೆ ಹಾಗೂ ನಮ್ಮ ಅಭಿಮಾನಿಗಳಿಗೆ ಅವರ ಮತಗಳನ್ನು ಪ್ರಬುದ್ಧವಾಗಿ ಚಲಾಯಿಸಿ ಎಂದು ಕೇಳಿಕೊಂಡಿದ್ದೇನೆ ಹೊರತು ಯಾವುದೇ ಪಕ್ಷ ಹಾಗೂ ವ್ಯಕ್ತಿಗೆ ಎಂದಿಗೂ ಸೂಚಿಸಿರುವುದಿಲ್ಲ.

      ಇಬ್ಬರಿಗೂ ಒಳ್ಳೆಯದಾಗಲಿ

      ಇಬ್ಬರಿಗೂ ಒಳ್ಳೆಯದಾಗಲಿ

      ಗೌರವಾನ್ವಿತ ದೇವೇಗೌಡರ ಕುಟುಂಬವು ಹಾಗೂ ಅಂಬರೀಶ್ ಅವರ ಕುಟುಂಬವೂ ನಮ್ಮ ಕುಟುಂಬದ ಹಾಗೆ. ಇಬ್ಬರು ನಮ್ಮ ಹಿತೈಷಿಗಳೇ. ಇಬ್ಬರಿಗೂ ಒಳ್ಳೆಯದಾಗಲಿ, ಆ ಭಗವಂತ ನಿಮಗೆ ಜನಸೇವೆ ಮಾಡುವ ಶಕ್ತಿ ಇನ್ನಷ್ಟು ಕೊಡಲಿ ಎಂದು ಪ್ರಾರ್ಥಿಸುತ್ತೇನೆ.

      ನನ್ನ ಹೆಸರನ್ನು ಸಂಬಂಧಿಸಬೇಡಿ

      ನನ್ನ ಹೆಸರನ್ನು ಸಂಬಂಧಿಸಬೇಡಿ

      ನನ್ನ ಹೆಸರನ್ನು ಚುನಾವಣೆ ಹಾಗೂ ರಾಜಕಾರಣಕ್ಕೆ ಸಂಬಂಧಿಸಬೇಡಿ ಎಂದು ಎಲ್ಲರಲ್ಲೂ ವಿನಂತಿಸಿಕೊಳ್ಳುತ್ತೇನೆ ಎಂದು ಪುನೀತ್ ರಾಜ್ ಕುಮಾರ್ ಪತ್ರದಲ್ಲಿ ಹೇಳಿದ್ದಾರೆ.

      ನಿಮ್ಮ ಮತ ನಿನ್ನ ಆಯ್ಕೆ ಎಂದು ಪತ್ರ ಕೊನೆಗೊಂಡಿದ್ದು, ಪುನೀತ್ ರಾಜ್ ಕುಮಾರ್ ಸಹಿ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+